For the best experience, open
https://m.newskannada.com
on your mobile browser.
Advertisement

ಐಪಿಎಲ್​ನಿಂದ ಹೊರ ನಡೆದ ಸ್ಟಾರ್ ಆಟಗಾರ !

ಈ ಬಾರಿಯ ಐಪಿಎಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮೇಲೆ ಎಲ್ಲರ ಕಣ್ಣಿದೆ. ಆದರೆ, ಸಿಎಸ್​ಕೆ ಆಡಿರುವ 11 ಪಂದ್ಯಗಳಲ್ಲಿ ಆರು ಗೆಲುವು ಮತ್ತು ಐದು ಪಂದ್ಯಗಳಲ್ಲಿ ಸೋಲು ಕಂಡು 12 ಅಂಕ ಪಡೆದುಕೊಂಡಿದೆ.
12:12 PM May 07, 2024 IST | Ashitha S
ಐಪಿಎಲ್​ನಿಂದ ಹೊರ ನಡೆದ ಸ್ಟಾರ್ ಆಟಗಾರ

ಮುಂಬೈ: ಈ ಬಾರಿಯ ಐಪಿಎಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮೇಲೆ ಎಲ್ಲರ ಕಣ್ಣಿದೆ. ಆದರೆ, ಸಿಎಸ್​ಕೆ ಆಡಿರುವ 11 ಪಂದ್ಯಗಳಲ್ಲಿ ಆರು ಗೆಲುವು ಮತ್ತು ಐದು ಪಂದ್ಯಗಳಲ್ಲಿ ಸೋಲು ಕಂಡು 12 ಅಂಕ ಪಡೆದುಕೊಂಡಿದೆ.

Advertisement

ರುತುರಾಜ್ ಗಾಯಕ್ವಾಡ್ ನಾಯಕತ್ವದ ಸಿಎಸ್​ಕೆ ತನ್ನ ಮುಂದಿನ ಪಂದ್ಯವನ್ನು ಗುರುವಾರ ಗುಜರಾತ್ ಟೈಟಾನ್ಸ್ ವಿರುದ್ಧ ಆಡಲಿದೆ. ಆದರೆ, ಇದಕ್ಕೂ ಮುನ್ನ ಚೆನ್ನೈಗೆ ದೊಡ್ಡ ಆಘಾತ ಉಂಟಾಗಿದೆ. ತಂಡದ ಸ್ಟಾರ್ ಶ್ರೀಲಂಕಾದ ವೇಗಿ ಮಥೀಶ ಪತಿರಾನಾ ಅವರು ಐಪಿಎಲ್ 2024ರ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್‌ಗಾಗಿ ಐಪಿಎಲ್ 2024ರ ಆರು ಪಂದ್ಯಗಳಲ್ಲಿ ಮಥೀಶ ಪತಿರಾನಾ 13 ವಿಕೆಟ್‌ಗಳನ್ನು ಪಡೆದಿದ್ದರು. 21 ವರ್ಷದ ಕ್ರಿಕೆಟಿಗ ಸಿಎಸ್​ಕೆಗಾಗಿ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದೇನೆ ಎಂದು ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಇದು ರುತುರಾಜ್ ಪಡೆಗೆ ದೊಡ್ಡ ಹೊಡೆತ ಬೀಳುವುದು ಖಚಿತ.

Advertisement

“ಸಿಎಸ್‌ಕೆ ಡ್ರೆಸ್ಸಿಂಗ್ ರೂಮ್​ನಲ್ಲಿ 2024 ರ ಐಪಿಎಲ್ ಚಾಂಪಿಯನ್ ಟ್ರೋಫಿಯನ್ನು ಶೀಘ್ರದಲ್ಲೇ ನೋಡುವ ನನ್ನ ಏಕೈಕ ಆಸೆಯೊಂದಿಗೆ ಕಠಿಣ ವಿದಾಯ ಹೇಳುತ್ತಿದ್ದೇನೆ.! ಚೆನ್ನೈನ ಪ್ರೀತಿಗಾಗಿ ಮತ್ತು ಸಿಎಸ್​ಕೆ ತಂಡಕ್ಕೆ ಕೃತಜ್ಞತೆಗಳು,'' ಎಂದು ಮಥೀಶ ಪತಿರಾನಾ ಬರೆದುಕೊಂಡಿದ್ದಾರೆ.

2022 ರಲ್ಲಿ ಸಿಎಸ್‌ಕೆ ಪರ ಐಪಿಎಲ್‌ಗೆ ಪದಾರ್ಪಣೆ ಮಾಡಿದ ಪತಿರಾನಾ, ಈ ವರ್ಷ ಉತ್ತಮ ಪ್ರದರ್ಶನ ತೋರಿದ್ದರು. ತಂಡದ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು. ಇದೀಗ ಮಂಡಿರಜ್ಜು ಗಾಯದಿಂದ ಸಂಪೂರ್ಣ ಟೂರ್ನಿಂದ ಹೊರಬಿದ್ದಿದ್ದಾರೆ.

Advertisement
Tags :
Advertisement