ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಕೈ ಮುಗಿತೀನಿ. . . ಎನ್ನುತ ರಾಜ್ಯಸಭೆಯಲ್ಲಿ ಕರ್ನಾಟಕಕ್ಕಾಗಿ ಹೆಚ್​.ಡಿ.ಡಿ ಹೋರಾಟ

ಕಾವೇರಿ ವಿಚಾರದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಮತ್ತೆ ಧ್ವನಿ ಎತ್ತಿದ್ದಾರೆ. ಮೇಕೆದಾಟು ಯೋಜನೆಗೆ ಅನುಮತಿ ನೀಡುವಂತೆ ರಾಜ್ಯಸಭೆಯಲ್ಲಿ ಕೇಂದ್ರ ಸರ್ಕಾರಕ್ಕೆ ಮಾಜಿ ಪ್ರಧಾನಿ ಕೈ ಮುಗಿದು ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ತಮಿಳುನಾಡು ಸಂಸದರು ಅಪಸ್ವರ ಎತ್ತಿದ್ದಾರೆ.
10:05 AM Feb 07, 2024 IST | Ashitha S

ಬೆಂಗಳೂರು: ಕಾವೇರಿ ವಿಚಾರದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಮತ್ತೆ ಧ್ವನಿ ಎತ್ತಿದ್ದಾರೆ. ಮೇಕೆದಾಟು ಯೋಜನೆಗೆ ಅನುಮತಿ ನೀಡುವಂತೆ ರಾಜ್ಯಸಭೆಯಲ್ಲಿ ಕೇಂದ್ರ ಸರ್ಕಾರಕ್ಕೆ ಮಾಜಿ ಪ್ರಧಾನಿ ಕೈ ಮುಗಿದು ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ತಮಿಳುನಾಡು ಸಂಸದರು ಅಪಸ್ವರ ಎತ್ತಿದ್ದಾರೆ.

Advertisement

ಕರ್ನಾಟಕ ಹಾಗೂ ತಮಿಳುನಾಡಿನ ನಡುವೆ ಕಾವೇರಿ ಕಾದಾಟ ಮುಂದುವರಿಯತ್ತಲೇ ಇದೆ. ರಾಜ್ಯದ ಜನರಿಗೆ ಕುಡಿಯಲು ನೀರು ಇಲ್ಲ ಅಂದ್ರೂ ಕಾವೇರಿ ನದಿ ನೀರು ನಿರ್ವಹಣ ಪ್ರಾಧಿಕಾರದ ಆಜ್ಞೆಗೆ ಕರುನಾಡಿನ ಡ್ಯಾಮ್​ಗಳಿಂದ ಟಿಎಂಸಿಗಳ ಮೇಲೆ ಟಿಎಂಸಿಗಳಷ್ಟು ನೀರನ್ನ ಹರಿ ಬಿಡಬೇಕಾದ ಪರಿಸ್ಥಿತಿ ಇದೆ. ಇದಕ್ಕೆ ಒಂದು ರೀತಿಯ ಪರಿಹಾರ ಅಂದ್ರೆ ಮೇಕೆದಾಟು ಯೋಜನೆ. ಈ ವಿಚಾರವಾಗಿ ಕರ್ನಾಟಕ ಮತ್ತು ತಮಿಳುನಾಡು ಮಧ್ಯೆ ಮೇಕೆದಾಟು ಮಹಾಯುದ್ಧವೇ ನಡೆಯುತ್ತಿದೆ. ರಾಜ್ಯದಲ್ಲಿ ನೀರಿನ ಪರಿಸ್ಥಿತಿ ಕುರಿತು ರಾಜ್ಯಸಭೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಧ್ವನಿ ಎತ್ತಿದ್ದಾರೆ.

ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದಲ್ಲಿ ಭಾಗಿಯಾದ್ದ ದೇವೇಗೌಡರು, ಮೇಕೆದಾಟು ಯೋಜನೆ ವಿಚಾರ ಪ್ರಸ್ತಾಪಿಸಿದ್ರು. ಕರ್ನಾಟಕದಲ್ಲಿ ಕುಡಿಯುವ ನೀರಿನ ಪ್ರಮುಖ ಸಮಸ್ಯೆಯಾಗಿದೆ. ಕೇಂದ್ರ ಸರ್ಕಾರವು ಕೇವಲ 30 ಟಿಎಂಸಿ ನೀರಿನ ಅಣೆಕಟ್ಟನ್ನು ನಿರ್ಮಿಸಲು ಅನುಮತಿ ನೀಡಬೇಕೆಂದು ನಾನು ಪ್ರಧಾನಿ ಹಾಗೂ ನಮ್ಮ ತಮಿಳುನಾಡು ಸ್ನೇಹಿತರಲ್ಲಿ ಮನವಿ ಮಾಡುತ್ತೇನೆ ಅಂತ ಕೈ ಮುಗಿದು ಮನವಿ ಮಾಡಿಕೊಂಡ್ರು.

Advertisement

ನಾನು 60 ವರ್ಷಗಳಿಂದ ಇದಕ್ಕಾಗಿ ಹೋರಾಟ ಮಾಡುತ್ತಿದ್ದೇನೆ. ನನಗೆ 91 ವಯಸ್ಸು. 10 ವರ್ಷದಲ್ಲಿ 4 ವರ್ಷಗಳು ಮಾತ್ರ ಸಮಸ್ಯೆ ಇರುತ್ತೆ. ಪ್ರಧಾನಿ ಮಂತ್ರಿಗಳ ಬಳಿ ಮನವಿ ಮಾಡುತ್ತೇನೆ. ಈ ಸಮಸ್ಯೆಯನ್ನ ಆಲಿಸಿ, ಏನಾದ್ರು ಮಾಡಿ ಕರ್ನಾಟಕದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನ ಬಗೆಹರಿಸಿ ಕೊಡಲಿ ಅಂತ ಕೇಳಿಕೊಳ್ಳುತ್ತೇನೆ ಎಂದಿದ್ದಾರೆ ಹೆಚ್​​ಡಿಡಿ. ಆದ್ರೆ ಇದಕ್ಕೆ ತಮಿಳುನಾಡು ಅಪಸ್ವರ ಎತ್ತಿದೆ.

Advertisement
Tags :
GOVERNMENTindiaKARNATAKALatestNewsNewsKannadaಬೆಂಗಳೂರುರಾಜ್ಯಸಭೆಹೆಚ್​.ಡಿ.ಡಿ
Advertisement
Next Article