ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಹೋಳಿ ಹಬ್ಬದಂದು ಈ ವಸ್ತು ಖರೀದಿಸಿದ್ರೆ ಹಣದ ಸಮಸ್ಯೆ ಕಾಡುವುದಿಲ್ಲ

ಹೋಳಿ ಹಬ್ಬಕ್ಕೆ ಕೆಲವೇ ಕೆಲವು ದಿನಗಳು ಬಾಕಿ ಇದೆ. ಈ ಹಬ್ಬವನ್ನು ಭಾರತದಲ್ಲಿ ವಿವಿಧ ರೀತಿಯಲ್ಲಿ ಆಚರಿಸಲಾಗುತ್ತದೆ. ವಾಸ್ತುಶಾಸ್ತ್ರ ಪ್ರಕಾರ ಈ ಹಬ್ಬದಂದು ಕೆಲ ವಸ್ತುಗಳನ್ನು ಖರೀದಿಸುವುದರಿಂದ ಮನೆಗೆ ಮಂಗಳಕರ ಎಂದು ಹೇಳಲಾಗುತ್ತದೆ.
07:06 AM Mar 23, 2024 IST | Ashitha S

ಹೋಳಿ ಹಬ್ಬಕ್ಕೆ ಕೆಲವೇ ಕೆಲವು ದಿನಗಳು ಬಾಕಿ ಇದೆ. ಈ ಹಬ್ಬವನ್ನು ಭಾರತದಲ್ಲಿ ವಿವಿಧ ರೀತಿಯಲ್ಲಿ ಆಚರಿಸಲಾಗುತ್ತದೆ. ವಾಸ್ತುಶಾಸ್ತ್ರ ಪ್ರಕಾರ ಈ ಹಬ್ಬದಂದು ಕೆಲ ವಸ್ತುಗಳನ್ನು ಖರೀದಿಸುವುದರಿಂದ ಮನೆಗೆ ಮಂಗಳಕರ ಎಂದು ಹೇಳಲಾಗುತ್ತದೆ.

Advertisement

ಹೋಳಿ ಹಬ್ಬದ ದಿನದಂದು ಬೆಳ್ಳಿಯನ್ನು ಖರೀದಿಸುವುದು ಮಂಗಳಕರ. ಲಕ್ಷ್ಮಿ ದೇವಿಯ ಮುಂದೆ ಈ ಬೆಳ್ಳಿಯ ನಾಣ್ಯವನ್ನು ಇರಿಸಿ, ಅದಕ್ಕೆ ಕುಂಕುಮ ಹಚ್ಚಿ ಪೂಜಿಸಿ ನಂತರ ಅದನ್ನು ನಿಮ್ಮ ಪರ್ಸ್‌ನಲ್ಲಿ ಇಟ್ಟುಕೊಳ್ಳಿ. ಹೀಗೆ ಮಾಡುವುದರಿಂದ ನಿಮ್ಮ ಆರ್ಥಿಕ ಸ್ಥಿತಿ ಬದಲಾಗುತ್ತದೆ.

ಹೋಳಿ ದಿನದಂದು ಕುಂಕುಮವನ್ನು ಖರೀದಿಸಿ, ಅದನ್ನು ದೇವಿಗೆ ಅರ್ಪಿಸಿದರೆ ತಾಯಿ ಮಹಾಲಕ್ಷ್ಮಿ ಆಶೀರ್ವಾದ ನಿಮ್ಮೊಂದಿಗೆ ಸದಾ ಇರುತ್ತದೆ.

Advertisement

ಹೋಳಿ ಹಬ್ಬದಂದು ಲೋಹದ ಆಮೆಯನ್ನು ಖರೀದಿಸುವುದು ಮಂಗಳಕರ. ಲೋಹದ ಆಮೆಯನ್ನು ಸಕಾರಾತ್ಮಕ ಶಕ್ತಿಯ ಸಂಕೇತವೆಂದು ಪರಿಗಣಿಸಲಾಗಿದೆ. ಇದನ್ನು ಮನೆಯಲ್ಲಿ ಇಡುವುದರಿಂದ ಕ್ರಮೇಣ ಪ್ರಗತಿಯನ್ನು ತರುತ್ತದೆ. ಹೋಳಿ ದಿನ ಬಿದಿರಿನ ಗಿಡ ನೆಟ್ಟರೆ ಒಳ್ಳೆಯದು.

ಮೀನನ್ನು ಲಕ್ಷ್ಮಿ ದೇವಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಹೋಳಿ ಹಬ್ಬದ ದಿನ ಮೀನುಗಳನ್ನು ಮನೆಗೆ ತಂದು ನೀರು ತುಂಬಿದ ಪಾತ್ರೆಯಲ್ಲಿ ಇಡಿ. ಇದು ನಿಮ್ಮ ಮನೆಗೆ ಲಕ್ಷ್ಮಿ ದೇವಿಯ ಆಗಮನವನ್ನು ಸೂಚಿಸುತ್ತದೆ. ಈ ರೀತಿ ಮಾಡುವುದರಿಂದ ಲಕ್ಷ್ಮಿ ದೇವಿಯು(ಹಣ) ನಿಮ್ಮ ಮನೆಯಲ್ಲಿ ನೆಲೆಸುತ್ತಾಳೆ.

ಮನೆಯ ಪ್ರವೇಶ ದ್ವಾರದಲ್ಲಿ ತೋರಣವನ್ನು ಹಾಕಲಾಗುವುದು. ಇದು ದೇವರು ಮತ್ತು ದೇವತೆಗಳನ್ನು ಮನೆಗೆ ಆಹ್ವಾನಿಸುವ ಒಂದು ವಿಧಾನವಾಗಿದೆ. ಇದರಿಂದ ದೇವರು ಸಂತೃಷ್ತಗೊಳ್ಳುತ್ತಾರೆ.

Advertisement
Tags :
indiaLatestNewsNewsKannadaನವದೆಹಲಿಬೆಂಗಳೂರುಹೋಳಿ ಹಬ್ಬ
Advertisement
Next Article