For the best experience, open
https://m.newskannada.com
on your mobile browser.
Advertisement

ಈ ರಾಶಿಯವರಿಗೆ ಶುಭದಿನ; ಇಲ್ಲಿದೆ ಇಂದಿನ ಭವಿಷ್ಯ

ನಿಮ್ಮ ಕೆಲಸದಲ್ಲಿ ಅಥವಾ ವ್ಯವಹಾರದಲ್ಲಿ ದೃಢ ನಿರ್ಧಾರವಿರಬೇಕು. ಭೂ ವ್ಯವಹಾರದಿಂದ ನಷ್ಟ ಉಂಟಾಗಬಹುದು. ಜನರ ನಂಬಿಕೆಗಳನ್ನು ಸುಳ್ಳು ಮಾಡಬಾರದು. ಕುಟುಂಬದ ಹಿತಾಸಕ್ತಿಗೆ ಬೇರೆಯವರಿಗೆ ವಂಚನೆ ಮಾಡಬೇಡಿ. ಮನೆಗೆ ಬಂದ ಅತಿಥಿಗಳಿಗೆ ಅವಮಾನ ಆಗಬಹುದು. ವೈದ್ಯಕೀಯ ಕ್ಷೇತ್ರದವರಿಗೆ ಅನಾನುಕೂಲವಿರಲಿದೆ
07:40 AM Apr 14, 2024 IST | Ashitha S
ಈ ರಾಶಿಯವರಿಗೆ ಶುಭದಿನ  ಇಲ್ಲಿದೆ ಇಂದಿನ ಭವಿಷ್ಯ

ಮೇಷ ರಾಶಿ: ನಿಮ್ಮ ಕೆಲಸದಲ್ಲಿ ಅಥವಾ ವ್ಯವಹಾರದಲ್ಲಿ ದೃಢ ನಿರ್ಧಾರವಿರಬೇಕು. ಭೂ ವ್ಯವಹಾರದಿಂದ ನಷ್ಟ ಉಂಟಾಗಬಹುದು. ಜನರ ನಂಬಿಕೆಗಳನ್ನು ಸುಳ್ಳು ಮಾಡಬಾರದು. ಕುಟುಂಬದ ಹಿತಾಸಕ್ತಿಗೆ ಬೇರೆಯವರಿಗೆ ವಂಚನೆ ಮಾಡಬೇಡಿ. ಮನೆಗೆ ಬಂದ ಅತಿಥಿಗಳಿಗೆ ಅವಮಾನ ಆಗಬಹುದು. ವೈದ್ಯಕೀಯ ಕ್ಷೇತ್ರದವರಿಗೆ ಅನಾನುಕೂಲವಿರಲಿದೆ

Advertisement

ವೃಷಭ ರಾಶಿ: ಹೊಸ ಕಾರ್ಯಾರಂಭಕ್ಕೆ ಒಳಿತಲ್ಲದ ದಿನ. ಕತ್ತರಿ ಅಥವಾ ಚಾಕು ಇತ್ಯಾದಿಗಳಿಂದ ಗಾಯಾವಾಗಬಹುದು ಎಚ್ಚರಿಕೆವಹಿಸಿ. ಬಡ್ಡಿ ವ್ಯವಹಾರದವರಿಗೆ ಸಮಸ್ಯೆಗಳು ಉಂಟಾಗಬಹುದು. ವಿಕಲ ಚೇತನರು ಅದರಲ್ಲೂ ಕಾಲಿನ ಸಮಸ್ಯೆ ಇರುವವರಿಗೆ ತೊಂದರೆಯಾಗಬಹುದು. ಮನೆ ಕಟ್ಟುವ ವಿಚಾರ ಮಾಡಬಹುದು
ಅನಪೇಕ್ಷಿತ ಪ್ರಯಾಣಕ್ಕೆ ಸಿದ್ಧವಾಗಬೇಕಾಗಲಿದೆ. ಸಂಪತ್ ಲಕ್ಷ್ಮೀ ಪ್ರಾರ್ಥನೆ ಮಾಡಿ.

ಮಿಥುನ ರಾಶಿ: ಬುದ್ಧಿವಂತರ ಸಹವಾಸದಿಂದ ಅನುಕೂಲವಿದೆ. ನಿಮ್ಮ ವೃತ್ತಿಗೆ ಸಂಬಂಧಿಸಿದ ಹೆಚ್ಚು ಕೆಲಸಗಳು ನಿಮ್ಮ ಕೈ ಸೇರಲಿದೆ. ಕುಟುಂಬದ ಸಂತೋಷವನ್ನು ಹಾಗೆ ಉಳಿಸಿಕೊಳ್ಳಿ. ಇಂದು ವಿದ್ಯಾರ್ಥಿಗಳಿಗೆ ಶುಭವಿದೆ. ವೃತ್ತಿ ಜೀವನಕ್ಕೆ ಯಾವುದೇ ಕೊರತೆಯಿಲ್ಲ.ಇರುವ ವ್ಯವಸ್ಥೆಗೆ ಹೊಂದಿಕೊಂಡರೆ ಯಾವ ಕೊರತೆಯೂ ಕಾಣುವುದಿಲ್ಲ.

Advertisement

ಕಟಕ ರಾಶಿ: ಸ್ವಲ್ಪ ಉದಾರತೆ, ದಾನ ಧರ್ಮದ ಬಗ್ಗೆ ಚಿಂತಿಸಬೇಕಾದ ದಿನ. ಸಂದರ್ಭಗಳು ಕಾಲಕ್ರಮೇಣ ನಿಮ್ಮ ಪರವಾಗಿರಬಹುದು. ಹೊಸ ವ್ಯವಹಾರ ಪ್ರಾರಂಭ ಮಾಡುತ್ತೀರಿ. ಹಣದ ಹಿಂದೆ ಹೋಗಿ ಬೇಸರ ಉಂಟಾಗಬಹುದು. ಕರ್ತವ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಬಹುದು.

ಸಿಂಹ ರಾಶಿ: ನೌಕರಿಯಲ್ಲಿ ಹಿರಿಯರ ಸಲಹೆ ಪಡೆಯಿರಿ. ಮನಸ್ಸು ಕೇಂದ್ರೀಕರಿಸಲಾಗದೆ ಒದ್ದಾಡಬಹುದು. ಕೆಲಸದ ಗುಣಮಟ್ಟ ಕಡಿಮೆಯಾಗಿ ನಿಂದನೆಗೆ ಒಳಗಾಗುತ್ತೀರಿ. ಆತ್ಮ ವಿಶ್ವಾಶದ ಕೊರತೆ ಉಂಟಾಗಬಹುದು. ಬೇರೆಯವರಿಗೆ ವಿನಾಕಾರಣ ಸಲಹೆ ನೀಡಬೇಡಿ
ಅವಮಾನದಿಂದ ದೂರವಿರಿ.

ತುಲಾ ರಾಶಿ: ಹಿರಿಯರು ಆಡಿದ ಮಾತು ಇಂದು ಸತ್ಯವೆಂದು ತಿಳಿಯುವ ದಿನ. ಇಂದು ದಾಂಪತ್ಯ ಅನ್ಯೋನ್ಯವಾಗಿರಲಿದೆ. ಕುಟುಂಬದಲ್ಲಿ ಸಂತೋಷದ ವಾತಾವರಣ ನೆಮ್ಮದಿ ಸಿಗಲಿದೆ. ಕೆಲಸದ ಒತ್ತಡದ ಮಧ್ಯೆಯು ಮನೆಯಲ್ಲಿ ಹಬ್ಬದ ವಾತಾವರಣ.

ವೃಶ್ಚಿಕ ರಾಶಿ: ನ್ಯಾಯಲಯದ ವಿಚಾರವಾಗಿ ಜಯದ ಸೂಚನೆಯಿದೆ. ತಾರ್ಕಿಕವಾಗಿ ಎಲ್ಲಾ ವಿಚಾರಗಳನ್ನ ಮಾಡಬೇಡಿ, ಹೊಂದಾಣಿಕೆ ಇರಲಿ. ಹಳೆಯ ಸಮಸ್ಯೆಗೆ ಶಾಶ್ವತ ಪರಿಹಾರ ನಿಮ್ಮ ಮಾನಸಿಕ ಸಾಮಾಜಿಕ ಶಕ್ತಿ ಹೆಚ್ಚಾಗುತ್ತದೆ. ಹಣವು ಕೈ ಸೇರಬಹುದು ಉತ್ತಮ ಆಹಾರ, ಜೀವನದ ಬಗ್ಗೆ ನಿರ್ಧರಿಸುತ್ತೀರಿ. ಹಿರಿಯರ ಆಶೀರ್ವಾದ ಪಡೆಯಿರಿ.

ಧನುಸ್ಸು ರಾಶಿ: ಮಕ್ಕಳ ಪ್ರಗತಿಯಿಂದ ಸಮಾಧಾನ. ಹಣಕಾಶಿನ ಸಮಸ್ಯೆ ಕಾಡಬಹುದು.
ಧಾರಾಳವಾಗಿ ಖರ್ಚು ಮಾಡಿದ ಕೈ ಕಟ್ಟಿಹಾಕಿದಂತಾಗಿರುತ್ತದೆ. ಸ್ವಯಂ ಕೃತ ಅಪರಾಧಗಳಿಗೆ ಕಡಿವಾಣ ಹಾಕಿ.

ಮಕರ ರಾಶಿ: ರಕ್ತ ದೊತ್ತಡ ಇರುವವರು ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆ ಕಾಣಬಹುದು
ಧಾರ್ಮಿಕ ಮುಖಂಡರಿಗೆ ಅವಮಾನ, ಭಯ ಕಾಡಬಹುದು, ಧರ್ಮವನ್ನ ಮೀರಿ ವರ್ತಿಸುವವರಿಗೆ ತೊಂದರೆಯಿದೆ, ನಿಮ್ಮ ವೃತ್ತಿ, ಕೆಲಸಕ್ಕೆ ಆದ್ಯತೆ ಕೊಡಿ, ಅನಗತ್ಯ ವಿಚಾರಗಳು ಬೇಡ.

ಕುಂಭ ರಾಶಿ: ಇಂದು ದಿನ ಚೆನ್ನಾಗಿದೆ. ಖರ್ಚುಗಳನ್ನು ನಿಯಂತ್ರಿಸಬೇಕು
ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಬಂಧುಗಳ, ಸ್ನೇಹಿತರ ಜೊತೆ ಉತ್ತಮ ಬಾಂಧವ್ಯ, ಮಾತುಕತೆ ಮಾಡಿ,ಅನೇಕ ಹಳೆಯ ನೆನಪುಗಲಿಂದ ಸಮಾಧಾನ.

ಮೀನ ರಾಶಿ: ನೀವು ತುಂಬಾ ಸುಲಭ ಎಂದು ಭಾವಿಸಿದ ಕೆಲಸಗಳಿಂದ ಸಮಸ್ಯೆಯಾಗಬಹುದು, ಆರೋಗ್ಯ ಚೆನ್ನಾಗಿರುತ್ತದೆ ಹಾಗೇ ಕಾಪಾಡಿಕೊಳ್ಳಿ, ಆರ್ಥಿಕವಾಗಿ ತೊಂದರೆಯಿಲ್ಲ ಆದರೆ ಲೆಕ್ಕ ವಿಚಾರದಲ್ಲಿ ತೊಂದರೆಯಿದೆ, ಬೇರಯವರ ಹಣದಿಂದ ವ್ಯವಹಾರ ನಡೆಸಬಹುದು. ಅಕ್ಕಪಕ್ಕದವರ ಸಹಾಯ ಸಹಕಾರ ದುರುಪಯೋಗ ಬೇಡ.

Advertisement
Tags :
Advertisement