ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ನಿಮ್ಮ ದೇಹಕ್ಕೆ ಪ್ರೋಟೀನ್ ಕಡಿಮೆಯಾಗಿದೆ ಎಂಬುದರ ಲಕ್ಷಣಗಳಿವು: ಗಮನಹರಿಸಿ

ನಿಮ್ಮ ದೇಹಕ್ಕೆ ಸಾಕಷ್ಟು ಪ್ರೋಟೀನ್ ಸಿಗುತ್ತಿಲ್ಲ ಎಂಬುದರ ಲಕ್ಷಣವೆಂದರೆ ಎಡಿಮಾ ಮತ್ತು ಹೊಟ್ಟೆ ಊದಿಕೊಳ್ಳುವುದು. ಪ್ರೋಟೀನ್ ಕೊರತೆಯ ಮತ್ತೊಂದು ಸಾಮಾನ್ಯ ಲಕ್ಷಣವೆಂದರೆ, ಕೊಬ್ಬಿನ ಯಕೃತ್ತು ಅಥವಾ ಯಕೃತ್ತಿನ ಜೀವಕೋಶಗಳಲ್ಲಿ ಕೊಬ್ಬಿನ ಶೇಖರಣೆ.
07:31 AM Feb 20, 2024 IST | Ashitha S

ಆರೋಗ್ಯ: ನಿಮ್ಮ ದೇಹಕ್ಕೆ ಸಾಕಷ್ಟು ಪ್ರೋಟೀನ್ ಸಿಗುತ್ತಿಲ್ಲ ಎಂಬುದರ ಲಕ್ಷಣವೆಂದರೆ ಎಡಿಮಾ ಮತ್ತು ಹೊಟ್ಟೆ ಊದಿಕೊಳ್ಳುವುದು. ಪ್ರೋಟೀನ್ ಕೊರತೆಯ ಮತ್ತೊಂದು ಸಾಮಾನ್ಯ ಲಕ್ಷಣವೆಂದರೆ, ಕೊಬ್ಬಿನ ಯಕೃತ್ತು ಅಥವಾ ಯಕೃತ್ತಿನ ಜೀವಕೋಶಗಳಲ್ಲಿ ಕೊಬ್ಬಿನ ಶೇಖರಣೆ.

Advertisement

ನೀವು ಸಾಕಷ್ಟು ಪ್ರೋಟೀನ್ ಹೊಂದದಿದ್ದರೆ ವಿಶೇಷವಾಗಿ ನಿಮ್ಮ ಹೊಟ್ಟೆ, ಕಾಲುಗಳು, ಪಾದಗಳು ಮತ್ತು ಕೈಗಳಲ್ಲಿ ಊತ ಉಂಟಾಗುತ್ತದೆ. ಪ್ರೋಟೀನ್ ಕೊರತೆಯು ನಿಮ್ಮ ಚರ್ಮದ ಮೇಲೆ ಪರಿಣಾಮ ಬೀರಬಹುದು. ಇದು ಕೆಂಪು ಬಣ್ಣ, ಫ್ಲಾಕಿ ಚರ್ಮ ಮತ್ತು ವರ್ಣದ್ರವ್ಯವನ್ನು ಉಂಟುಮಾಡಬಹುದು. ಸ್ನಾಯುಗಳ ಬೆಳವಣಿಗೆ ಮತ್ತು ನಿರ್ವಹಣೆಗೆ ಪ್ರೋಟೀನ್ ಅತ್ಯಗತ್ಯ. ಪ್ರೋಟೀನ್ ಕೊರತೆಯು ಕಡಿಮೆ ಮೂಳೆ ಖನಿಜ ಸಾಂದ್ರತೆಗೆ ಕಾರಣವಾಗಬಹುದು. ಇದು ಮುರಿತದ ಅಪಾಯವನ್ನು ಹೆಚ್ಚಿಸುತ್ತದೆ.

ಸಾಕಷ್ಟು ಪ್ರೋಟೀನ್ ಸೇವನೆಯು ಮಕ್ಕಳಲ್ಲಿ ಬೆಳವಣಿಗೆಯನ್ನು ವಿಳಂಬಗೊಳಿಸಬಹುದು ಅಥವಾ ತಡೆಯಬಹುದು. ಕಡಿಮೆ ಪ್ರೋಟೀನ್ ಸೇವನೆಯು ಹಸಿವನ್ನು ಹೆಚ್ಚಿಸಬಹುದು. ತುಂಬಾ ಕಡಿಮೆ ಪ್ರೋಟೀನ್ ತಿನ್ನುವುದು ನೆಗಡಿಯಂತಹ ಸೋಂಕುಗಳ ವಿರುದ್ಧ ಹೋರಾಡುವ ನಿಮ್ಮ ದೇಹದ ಸಾಮರ್ಥ್ಯವನ್ನು ಕುಂಠಿತಗೊಳಿಸಬಹುದು.

Advertisement

ಇನ್ನು ಪ್ರೋಟೀನ್ ಅಂಶ ಹೆಚ್ಚಿರುವ ಈ ಆಹಾರಗಳನ್ನು ದಿನಾ ಸೇವಿಸಿ:
ಕೋಳಿ ಮೊಟ್ಟೆ ಅಂದಿನಿಂದ ಇಂದಿನವರೆಗೂ ಅತಿ ಹೆಚ್ಚಿನ ಪ್ರೋಟಿನ್ ಅಂಶವನ್ನು ಹೊಂದಿರುವ ಆಹಾರ ಪದಾರ್ಥವಾಗಿದೆ. ಬೇರೆ ಆಹಾರ ಪದಾರ್ಥಗಳಿಗೆ ಹೋಲಿಸಿದರೆ ಕೋಳಿ ಮೊಟ್ಟೆಯಲ್ಲಿ ತುಂಬಾ ಹೇರಳವಾದ ಪ್ರೋಟೀನ್ ಅಂಶಗಳು ಸಿಗುತ್ತವೆ. ಇದರ ಜೊತೆಗೆ ವಿಟಮಿನ್ ಅಂಶಗಳು, ಖನಿಜಾಂಶಗಳು, ಕಣ್ಣುಗಳಿಗೆ ಸಹಕಾರಿ ಆಗಿರುವ ಆಂಟಿ - ಆಕ್ಸಿಡೆಂಟ್ ಅಂಶಗಳು ಮತ್ತು ದೇಹಕ್ಕೆ ಅಗತ್ಯ ಇರುವ ಆರೋಗ್ಯಕರ ಕೊಬ್ಬಿನ ಅಂಶಗಳು ಮೊಟ್ಟೆಯಲ್ಲಿ ಸಿಗುತ್ತವೆ.

ಮೊಸರು ಒಂದು ಡೈರಿ ಉತ್ಪನ್ನವಾಗಿದ್ದು ನೈಸರ್ಗಿಕವಾಗಿ ಇದರಲ್ಲಿ ಅಪಾರ ಪ್ರಮಾಣದ ಪೌಷ್ಟಿಕ ಸತ್ವಗಳು ಅಡಗಿವೆ. ಮಾರುಕಟ್ಟೆಗಳಲ್ಲಿ ಎಲ್ಲಾ ಕಡೆ ಸುಲಭವಾಗಿ ಮೊಸರು ಸಿಗುತ್ತದೆ. ಮೊಸರಿನ ಸೇವನೆಯಿಂದ ನಿಮಗೆ ಅನೇಕ ಆರೋಗ್ಯ ಲಾಭಗಳು ಲಭ್ಯವಾಗುತ್ತವೆ. ಪ್ರೊಟೀನ್ ಅಂಶ ಕೂಡ ಮೊಸರಿನಲ್ಲಿ ಹೇರಳವಾಗಿದ್ದು, ನಿಮಗೆ ಬೇಕೆಂದರೆ ರುಚಿಗಾಗಿ ಮತ್ತು ಇನ್ನಷ್ಟು ಪೌಷ್ಟಿಕಾಂಶಗಳ ಅಗತ್ಯತೆ ಗಾಗಿ ನೀವು ಸೇವಿಸುವ ಮೊಸರಿನಲ್ಲಿ, ಸ್ವಲ್ಪ ಜೇನು ತುಪ್ಪ, ಉಪ್ಪು ಮತ್ತು ವಾಲ್ನಟ್ ಗಳನ್ನು ಬಳಕೆ ಮಾಡಿ ಸೇವನೆ ಮಾಡಬಹುದು.

ಸಸ್ಯಹಾರಿಗಳಿಗಂತೂ ಹೇಳಿ ಮಾಡಿಸಿದ ಆಹಾರಗಳಿವು. ನಾವು ಸೇವಿಸುವ ಯಾವುದೇ ಬಗೆಯ ಬೇಳೆಗಳಲ್ಲಿ ಕೇವಲ ಪ್ರೋಟಿನ್ ಅಂಶ ಮಾತ್ರ ಹೆಚ್ಚಾಗಿರದೆ, ಯಥೇಚ್ಛವಾದ ಖನಿಜಾಂಶಗಳು ಜೊತೆಗೆ ಇನ್ನಿತರ ಪೌಷ್ಟಿಕ ಸತ್ವಗಳಾದ ನಾರಿನ ಅಂಶ, ಕಬ್ಬಿಣ, ಮ್ಯಾಂಗನೀಸ್, ಪೊಟಾಷಿಯಂ, ಪಾಸ್ಪರಸ್ ಮತ್ತು ವಿಟಮಿನ್ ' ಬಿ ' ಅಂಶ ಹೆಚ್ಚಾಗಿರುತ್ತದೆ.

ಬೇಳೆಗಳಲ್ಲಿ ಕಂಡು ಬರುವ ಪ್ರೊಟೀನ್ ಅಂಶ ಆರೋಗ್ಯಕರ ಹೃದಯವನ್ನು, ಉತ್ತಮ ಜೀರ್ಣ ವ್ಯವಸ್ಥೆಯನ್ನು ಮನುಷ್ಯನಿಗೆ ನೀಡಿ ದೇಹದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತದೆ. ಹಾಗಾಗಿ ತೊಗರಿ ಬೇಳೆ, ಅವರೇ ಬೇಳೆ, ಹೆಸರು ಬೇಳೆ, ಹುರಳಿ ಬೇಳೆ, ಉದ್ದಿನ ಬೇಳೆ ಎಲ್ಲವೂ ಆರೋಗ್ಯಕರವೇ ಆಗಿವೆ.

ಆಲೂಗಡ್ಡೆಯಲ್ಲಿ ಹೆಚ್ಚಿನ ಪ್ರಮಾಣದ ಸ್ಟಾರ್ಚ್ ಅಂಶವಿದೆ. ಆದರೆ ಅದರ ಜೊತೆಗೆ ಪ್ರೋಟೀನ್ ಅಂಶ ಮತ್ತು ಇತರ ಪೌಷ್ಟಿಕ ಅಂಶಗಳು ಕೂಡ ಲಭ್ಯವಿವೆ ಆಲೂಗಡ್ಡೆಯನ್ನು ಬೇಯಿಸಿ ಮ್ಯಾಶ್ ಮಾಡಿ ಸೇವಿಸುವುದರಿಂದ ತುಂಬಾ ಹೆಚ್ಚಿನ ಪ್ರಮಾಣದ ಪ್ರೊಟೀನ್ ಮತ್ತು ಕಾರ್ಬೋಹೈಡ್ರೇಟ್ ಅಂಶಗಳು ನಿಮ್ಮ ದೇಹಕ್ಕೆ ಸಿಗುತ್ತದೆ.

ಇನ್ನು ಮಧುಮೇಹ ನಿವಾರಣೆಗೆ, ಹೃದಯ ರಕ್ತನಾಳ ಸಮಸ್ಯೆಯ ನಿವಾರಣೆಗೆ, ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶಗಳಾದ ಎಲ್ ಡಿ ಎಲ್ ಮಟ್ಟವನ್ನು ನಿಯಂತ್ರಿಸಲು ಆರೋಗ್ಯಕರವಾದ ಮೆದುಳಿನ ಬೆಳವಣಿಗೆಯನ್ನು ವೃದ್ಧಿಸಲು ಚಿಕನ್ ಬೇಕೇ ಬೇಕು. ಹಾಗಾಗಿ ಮಾಂಸಹಾರಿಗಳು ತಮ್ಮ ಆಹಾರ ಪದ್ಧತಿಯಲ್ಲಿ ನಿಯಮಿತವಾದ ಚಿಕನ್ ಸೇವನೆ ಇಟ್ಟುಕೊಳ್ಳುವುದು ತುಂಬಾ ಒಳ್ಳೆಯದು.

Advertisement
Tags :
indiaKARNATAKALatestNewsNewsKannadaproteinಪ್ರೋಟೀನ್
Advertisement
Next Article