ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ರೆಸ್ಟೋರೆಂಟ್‌ನಲ್ಲಿ ಪತ್ನಿಯನ್ನು ಹೊಡೆದು ಕೊಂದ ಮಾಜಿ ಸಚಿವ : ವಿಡಿಯೋ ವೈರಲ್‌

ಕಜಕೀಸ್ತಾನದ  ಮಾಜಿ ಸಚಿವನೋರ್ವ ತನ್ನ ಪತ್ನಿಯನ್ನು ದಾರುಣವಾಗಿ ಥಳಿಸಿದ್ದು ಪರಿಣಾಮವಾಗಿ ಎಂಟು ಗಂಟೆಗಳಲ್ಲಿ ಆಕೆ ಕೊನೆಯುಸಿರೆಳೆದಿರುವ ದಾರುಣ ಘಟನೆ ನಡೆದಿದೆ.
09:41 AM May 04, 2024 IST | Nisarga K
ರೆಸ್ಟೋರೆಂಟ್‌ನಲ್ಲಿ ಪತ್ನಿಯನ್ನು ಹೊಡೆದು ಕೊಂದ ಮಾಜಿ ಸಚಿವ : ವಿಡಿಯೋ ವೈರಲ್‌

ಕಜಕೀಸ್ತಾನ:  ಕಜಕೀಸ್ತಾನದ  ಮಾಜಿ ಸಚಿವನೋರ್ವ ತನ್ನ ಪತ್ನಿಯನ್ನು ದಾರುಣವಾಗಿ ಥಳಿಸಿದ್ದು ಪರಿಣಾಮವಾಗಿ ಎಂಟು ಗಂಟೆಗಳಲ್ಲಿ ಆಕೆ ಕೊನೆಯುಸಿರೆಳೆದಿರುವ ದಾರುಣ ಘಟನೆ ನಡೆದಿದೆ. ಇದೀಗ ಪತ್ನಿಗೆ ಹೊಡೆದಿರುವ ವಿಡಿಯೋ ಎಲ್ಲೆಡೆ ಬಾರಿ ವೈರಲ್‌ ಆಗಿದೆ.  ಕಜಕೀಸ್ತಾನದ ಮಾಜಿ ಆರ್ಥಿಕ ಸಚಿವನಾಗಿದ್ದ ಕುವಾಂಡಿಕ್ ಬಿಶಿಂಬಾಯೆವ್ ತನ್ನ 31 ವರ್ಷದ ಸಲ್ತಾನೇಟ್‌ ನ್ಯೂಕೆನೋವಾ ಮೇಲೆ ಈ ಡೆಡ್ಲಿ ಅಟ್ಯಾಕ್‌ ಮಾಡಿದ್ದಾನೆ. ಫ್ಯಾಮಿಲಿ ರೆಸ್ಟೋರೆಂಟ್‌ನಲ್ಲಿ ಪತ್ನಿ ಕೂದಲು ಹಿಡಿದು ಎಳೆದು ತಂದ ಬಿಶಿಂಬಾಯೆವ್, ಆಕೆಯ ಮುಖಾಮೂತಿ ನೋಡದೇ ಚಚ್ಚುತ್ತಿರುವುದನ್ನು ವಿಡಿಯೋದಲ್ಲಿ ಗಮನಿಸಬಹುದಾಗಿದೆ.

Advertisement

ಕಳೆದ ವರ್ಷ ನವೆಂಬರ್‌ನಲ್ಲಿ ಈ ಘಟನೆ ನಡೆದಿದ್ದು, ಗಂಭೀರವಾವಾಗಿ ಗಾಯಗೊಂಡಿದ್ದ ಸಲ್ತಾನೇಟ್‌ ನ್ಯೂಕೆನೋವಾ ಎಂಡು ಗಂಟೆಗಳ ಬಳಿಕ ಕೊನೆಯುಸಿರೆಳೆದಿದ್ದಾಳೆ. ಈ ಪ್ರಕರಣದ ವಿಚಾರಣೆ ಕೋರ್ಟ್‌ನಲ್ಲಿ ನಡೆಯುತ್ತಿದ್ದು, ವಿಚಾರಣೆ ವೇಳೆ ಸಿಸಿಟಿವಿ ವಿಡಿಯೋವನ್ನು ಪ್ರದರ್ಶಿಸಲಾಯಿತು. ಹೀಗಾಗಿ ಈ ವಿಚಾರ ಮತ್ತೊಮ್ಮೆ ಸುದ್ದಿಯಾಗಿದೆ. ಇನ್ನು ಈ ಆರೋಪಿಗೆ ಕಠಿಣ ಶಿಕ್ಷೆ ಆಗಬೇಕೆಂದು ಒತ್ತಾಯಿಸಿ ಮಧ್ಯ ಏಷ್ಯಾದ ರಾಷ್ಟಗಳ ಹತ್ತು ಸಾವಿರಕ್ಕೂ ಅಧಿಕ ಜನರು ಸಹಿ ಹಾಕಿರುವ ಅರ್ಜಿಯನ್ನು ಕೋರ್ಟ್‌ಗೆ ಸಲ್ಲಿಸಲಾಗಿದೆ.

Advertisement

Advertisement
Tags :
attackbeatsdeathhusbandLatestNewsNewsKarnatakaVIDEO VIRALWIFE
Advertisement
Next Article