ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಅಲೋವೆರಾ ಜ್ಯೂಸ್‌ನ ಲಾಭಗಳು ಗೊತ್ತಾದರೆ ದಿನಾ ಕುಡೀತೀರಿ!

ಆಲೋವೆರಾ ಚರ್ಮದ ಮೇಲೆ ಅನೇಕ ಉಪಯುಕ್ತ ಪರಿಣಾಮಗಳನ್ನು ಉಂಟು ಮಾಡುತ್ತದೆ  ಎಂದು ಎಲ್ಲರಿಗೂ ತಿಳಿದ ವಿಚಾರವಾಗಿದೆ.     
06:12 PM Jan 03, 2024 IST | Ramya Bolantoor

 ಆಲೋವೆರಾ ಚರ್ಮದ ಮೇಲೆ ಅನೇಕ ಉಪಯುಕ್ತ ಪರಿಣಾಮಗಳನ್ನು ಉಂಟು ಮಾಡುತ್ತದೆ  ಎಂದು ಎಲ್ಲರಿಗೂ ತಿಳಿದ ವಿಚಾರವಾಗಿದೆ.       ಇದರಲ್ಲಿ ಆರೋಗ್ಯಕಾರಿ ಅಂಶಗಳ  ಇದೆ. ಅಲೋವೆರಾ ಜ್ಯೂಸ್ ಅನ್ನು ಪ್ರತಿನಿತ್ಯ  ಸೇವಿಸುವುದರಿಂದ ಕೂದಲಿನಿಂದ ಹಿಡಿದು ಹೊಟ್ಟೆನೋವಿನವರೆಗೆ ಎಲ್ಲಾ ಸಮಸ್ಯೆಗಳನ್ನು ನಿವಾರಿಸುತ್ತದೆ.

Advertisement

ಆಲೋವೆರಾದ  ಪ್ರಯೋಜಗಳೇನು ಎಂಬುದುದನ್ನು ತಿಳಿಯೋಣ

ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅಲೋವೆರಾ ರಸವನ್ನು ಕುಡಿಯುವುದರಿಂದ ಮುಖದ ಮೇಲಿನ ಮೊಡವೆಗಳು ನಿವಾರಣೆಯಾಗುತ್ತದೆ. ಇದರಲ್ಲಿ ಅನೇಕ ಉರಿಯೂತ ನಿವಾರಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಕಂಡುಬರುತ್ತವೆ.  ಹೊಟ್ಟೆ ಕೆಟ್ಟಿದ್ದರೆ ಅದಕ್ಕೂ ಅಲೋವೆರಾ ಜ್ಯೂಸ್‌ನಲ್ಲಿ ಪರಿಹಾರವಿದೆ. ಸಾಮಾನ್ಯವಾಗಿ ಮಸಾಲೆಯುಕ್ತ ಪದಾರ್ಥಗಳನ್ನು ಸೇವಿಸಿದ ನಂತರ ಹೊಟ್ಟೆಯಲ್ಲಿ ಸಮಸ್ಯೆಯಾಗುತ್ತದೆ. ಅಸಿಡಿಟಿ ಮತ್ತು ಮಲಬದ್ಧತೆಯಿದ್ದರೆ ಅಲೋವೆರಾ ಜ್ಯೂಸ್‌ ಕುಡಿಯಿರಿ.

Advertisement

ಚಳಿಗಾಲದಲ್ಲಿ ದೇಹದಲ್ಲಿ ಊತದ ಸಮಸ್ಯೆ ಕಾಣಿಸಿಕೊಂಡರೆ ಈ ಜ್ಯೂಸ್ ಕುಡಿಯಬೇಕು. ಇದನ್ನು ಕುಡಿಯುವುದರಿಂದ ಅನೇಕ ರೋಗಗಳು ನಮ್ಮ ಸುತ್ತ ಸುಳಿಯುವುದಿಲ್ಲ. ಅಂತಹ ಆರೋಗ್ಯಕಾರಿ ಅಂಶಗಳು ಇದರಲ್ಲಿವೆ. ಅಲೋವೆರಾ ಜ್ಯೂಸ್ ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಬಹಳ ಪ್ರಯೋಜನಕಾರಿಯಾಗಿದೆ. ಇದರ ರಸವು ರೋಗಗಳ ವಿರುದ್ಧ ಹೋರಾಡಲು ಸಹಾಯಕವಾಗಿದೆ.

ಕೂದಲು ತುಂಬಾ ಉದುರುತ್ತಿದ್ದರೆ ಅಲೋವೆರಾ ಜ್ಯೂಸ್ ಅನ್ನು ಪ್ರತಿದಿನ ಸೇವಿಸಬೇಕು. ಕೂದಲು ಉದುರುವಿಕೆ ನಿಲ್ಲುತ್ತದೆ.  ಜೊತೆಗೆ ಮಧುಮೇಹವನ್ನು ಸಹ ನಿಯಂತ್ರಿಸುತ್ತದೆ. ಅಲೋವೆರಾ ರಸದ ನಿಯಮಿತ ಸೇವನೆಯಿಂದ ದೃಷ್ಟಿ ಶಕ್ತಿ ಕೂಡ ಹೆಚ್ಚಾಗುತ್ತದೆ.

Advertisement
Tags :
HEALTHLatestNewsNewsKannada
Advertisement
Next Article