For the best experience, open
https://m.newskannada.com
on your mobile browser.
Advertisement

ಅಲೋಶಿಯಸ್‌ನಲ್ಲಿ ಪ್ರೊ. ಪ್ರಕಾಶ್ ಪಿ. ಕಾರಟ್ ದತ್ತಿ ಉಪನ್ಯಾಸ - 2024

ಗರದ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದಲ್ಲಿ ಪ್ರೊ. ಪ್ರಕಾಶ್ ಪಿ. ಕಾರಟ್ ದತ್ತಿ ಉಪನ್ಯಾಸವು ಮಾರ್ಚ್ 23, 2024 ರಂದು ಅಲೋಶಿಯಸ್ ವಿವಿಯ ಸಾನಿಧ್ಯ ಸಭಾಂಗಣದಲ್ಲಿ ನಡೆಯಿತು.
04:00 PM Mar 26, 2024 IST | Nisarga K
ಅಲೋಶಿಯಸ್‌ನಲ್ಲಿ ಪ್ರೊ  ಪ್ರಕಾಶ್ ಪಿ  ಕಾರಟ್ ದತ್ತಿ ಉಪನ್ಯಾಸ   2024
ಅಲೋಶಿಯಸ್‌ನಲ್ಲಿ ಪ್ರೊ. ಪ್ರಕಾಶ್ ಪಿ. ಕಾರಟ್ ದತ್ತಿ ಉಪನ್ಯಾಸ - 2024

ಮಂಗಳೂರು:   ನಗರದ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದಲ್ಲಿ ಪ್ರೊ. ಪ್ರಕಾಶ್ ಪಿ. ಕಾರಟ್ ದತ್ತಿ ಉಪನ್ಯಾಸವು ಮಾರ್ಚ್ 23, 2024 ರಂದು ಅಲೋಶಿಯಸ್ ವಿವಿಯ ಸಾನಿಧ್ಯ ಸಭಾಂಗಣದಲ್ಲಿ ನಡೆಯಿತು.

Advertisement

ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್‌ನ ಕಂಡೆನ್ಸ್ಡ್ ಮ್ಯಾಟರ್ ಫಿಸಿಕ್ಸ್ ಅಂಡ್ ಮೆಟೀರಿಯಲ್ಸ್ ಸೈನ್ಸ್ ವಿಭಾಗದ ಪ್ರಾಧ್ಯಾಪಕ ಪ್ರೊ. ಆರುಮುಗಂ ತಮಿಜವೇಲ್ ಅವರು “ಸ್ಫಟಿಕ ಬೆಳವಣಿಗೆ ಮತ್ತು ಬಲವಾದ ಪರಸ್ಪರ ಸಂಬಂಧ ಹೊಂದಿರುವ ಎಲೆಕ್ಟ್ರಾನ್ ಸಿಸ್ಟಮ್ಸ್ ಮತ್ತು ಟೋಪೋಲಾಜಿಕಲ್ ಸೆಮಿಮೆಟಲ್‌ಗಳ ಅನಿಸೊಟ್ರೊಪಿಕ್ ಅಧ್ಯಯನಗಳು” ವಿಷಯದ ಕುರಿತು ಉಪನ್ಯಾಸ ನೀಡಿದರು.

Advertisement

ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಪತಿ, ವಂದನೀಯ ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ,ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಡಾ. ಎ.ಪಿ.ರಾಧಾಕೃಷ್ಣ, ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಮಾಜಿ ವಿಭಾಗ ಮುಖ್ಯಸ್ಥರು ಮತ್ತು ಅಲೋಶಿಯಸ್ ಕಾಲೇಜಿನ ಭೌತಶಾಸ್ತ್ರ ಸ್ನಾತಕೋತ್ತರ ಅಧ್ಯಯನ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಪ್ರಕಾಶ್ ಪಿ.ಕಾರಟ್ ಗೌರವ ಅತಿಥಿಗಳಾಗಿದ್ದರು.

ವಿದ್ಯಾರ್ಥಿಗಳು, ಸಂಶೋಧನಾ ವಿದ್ವಾಂಸರು ಮತ್ತು ಭೌತಶಾಸ್ತ್ರದ ಪ್ರಾಧ್ಯಾಪಕರು ಉಪನ್ಯಾಸದಲ್ಲಿ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಹತ್ತನೇ ಉಪನ್ಯಾಸದ ನೆನಪಿಗಾಗಿ, ಸಂಶೋಧನಾ ಸಂಯೋಜಕರಾದ ಡಾ ಚಂದ್ರಶೇಖರ ಶೆಟ್ಟಿ ಟಿ.ಯವರ ಸಂಪಾದಕತ್ವದಲ್ಲಿ ಪ್ರಕಟಿಸಿದ ಹಿಂದಿನ ಉಪನ್ಯಾಸಗಳ ಪ್ರಾತಿನಿಧಿಕ ಅಧ್ಯಾಯಗಳನ್ನು ಒಳಗೊಂಡಿರುವ ಪುಸ್ತಕ ಡಿಕೇಡಲ್ ಒಡಿಸ್ಸಿ ಇನ್ ಫಿಸಿಕ್ಸ್: ಎ ಕ್ರಾನಿಕಲ್ ಆಫ್ ದಿ ಪಿಪಿಕೆ ಎಂಡೋಮೆಂಟ್ʻ ಲೆಕ್ಚರ್ ಸೀರೀಸ್ ́ ಅನ್ನು ಕುಲಪತಿಯವರು ಬಿಡುಗಡೆ ಮಾಡಿದರು.

ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಭೌತಶಾಸ್ತ್ರ ವಿಭಾಗದ ಸಹಯೋಗದಲ್ಲಿ ಪ್ರೊ. ಪ್ರಕಾಶ್ ಪಿ.ಕಾರಟ್ ಅವರ ವಿದ್ಯಾರ್ಥಿಗಳು ಮತ್ತು ಅಭಿಮಾನಿಗಳು ಈ ದತ್ತಿ ಉಪನ್ಯಾಸವನ್ನು ಆಯೋಜಿಸಿದ್ದರು.

Advertisement
Tags :
Advertisement