For the best experience, open
https://m.newskannada.com
on your mobile browser.
Advertisement

"ರಾಷ್ಟ್ರದ ಸೇವೆಯಲ್ಲಿ": ಇಂದು ಭಾರತೀಯ ಸೇನಾ ದಿನ

ದೇಶವು ಇಂದು (ಜನವರಿ 15) 76ನೇ ಭಾರತೀಯಸೇನಾ ದಿನವನ್ನು ಆಚರಿಸುತ್ತಿದೆ. ಪ್ರತಿ ವರ್ಷ ಈ ದಿನದಂದು, ರಾಷ್ಟ್ರಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಿದ ಮತ್ತು ಸಹೋದರತ್ವದ ಶ್ರೇಷ್ಠ ಉದಾಹರಣೆಯನ್ನು ನೀಡಿದ ಸೈನಿಕರನ್ನು ಗೌರವಿಸಲಾಗುತ್ತದೆ. ಈ ದಿನವನ್ನು ಎಲ್ಲಾ ಸೇನಾ ಕಮಾಂಡ್‌ ಪ್ರಧಾನ ಕಚೇರಿಗಳಲ್ಲಿ ಆಚರಿಸಲಾಗುತ್ತದೆ.  
12:27 PM Jan 15, 2024 IST | Ashitha S
 ರಾಷ್ಟ್ರದ ಸೇವೆಯಲ್ಲಿ   ಇಂದು ಭಾರತೀಯ ಸೇನಾ ದಿನ

ನವದೆಹಲಿ: ದೇಶವು ಇಂದು (ಜನವರಿ 15) 76ನೇ ಭಾರತೀಯಸೇನಾ ದಿನವನ್ನು ಆಚರಿಸುತ್ತಿದೆ. ಪ್ರತಿ ವರ್ಷ ಈ ದಿನದಂದು, ರಾಷ್ಟ್ರಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸಿದ ಮತ್ತು ಸಹೋದರತ್ವದ ಶ್ರೇಷ್ಠ ಉದಾಹರಣೆಯನ್ನು ನೀಡಿದ ಸೈನಿಕರನ್ನು ಗೌರವಿಸಲಾಗುತ್ತದೆ. ಈ ದಿನವನ್ನು ಎಲ್ಲಾ ಸೇನಾ ಕಮಾಂಡ್‌ ಪ್ರಧಾನ ಕಚೇರಿಗಳಲ್ಲಿ ಆಚರಿಸಲಾಗುತ್ತದೆ.

Advertisement

ಸ್ವತಂತ್ರ ಭಾರತದ ಘನತೆ ಗೌರವ ಹಾಗೂ ಸುರಕ್ಷತೆಗಾಗಿ, ದೇಶ ಸೇವೆಗಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡಿರುವ ಭಾರತೀಯ ಯೋಧರನ್ನು ಗೌರವಿಸುವ ಜೊತೆಯಲ್ಲಿ ದೇಶಕ್ಕಾಗಿ ಹುತಾತ್ಮರಾದ ಯೋಧರನ್ನು ಸ್ಮರಿಸುವ ಉದ್ದೇಶದಿಂದ ಪ್ರತಿವರ್ಷ ಜನವರಿ 15 ರಂದು ಭಾರತೀಯ ಸೇನಾ ದಿನಾಚರಣೆಯನ್ನು ಆಚರಿಸಲಾಗುತ್ತದೆ.

ಏಪ್ರಿಲ್ 1, 1895 ರಂದು ಭಾರತೀಯ ಸೇನೆಯನ್ನು ಅಧಿಕೃತವಾಗಿ ಸ್ಥಾಪಿಸಲಾಯಿತು. ಭಾರತಕ್ಕೆ ಸ್ವಾತಂತ್ರ್ಯ ದೊರೆತ ನಂತರ1949 ರಲ್ಲಿಸೇನೆಯ ಮೊದಲ ಮುಖ್ಯಸ್ಥರನ್ನು ನೇಮಕ ಮಾಡಲಾಯಿತು. ಈ ಐತಿಹಾಸಿಕ ದಿನದಂದು ಭಾರತೀಯ ಸೇನೆಯ ಔಪಚಾರಿಕ ಹಸ್ತಾಂತರ ಪ್ರಕ್ರಿಯೆ ನಡೆಯಿತು. ಜನರಲ್ ಸರ್ ಫ್ರಾನ್ಸಿಸ್ ಬುಚರ್ ಅವರು ಲೆಫ್ಟಿನೆಂಟ್‌ ಜನರಲ್ ಕೆ.ಎಂ.ಕಾರ್ಯಪ್ಪ ಅವರಿಗೆ ಬ್ಯಾಟನ್‌ ಹಸ್ತಾಂತರಿಸಿದ್ದರು.

Advertisement

ಇನ್ನು 2024 ರ ಭಾರತೀಯ ಸೇನಾ ದಿನದ ಥೀಮ್  "ರಾಷ್ಟ್ರದ ಸೇವೆಯಲ್ಲಿ" (In Service Of The Nation)

ಬ್ರಿಟಿಷರಿಂದ ಭಾರತಕ್ಕೆ ಅಧಿಕಾರದ ಹಸ್ತಾಂತರವು ಭಾರತದ ಇತಿಹಾಸದಲ್ಲಿ ಮತ್ತು ವಿದೇಶಿ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆದ ಅತ್ಯಂತ ಪ್ರಮುಖ ಅಧ್ಯಾಯವಾಗಿದೆ. ಈ ದಿನದಂದು ಎಲ್ಲಾ ಕಮಾಂಡ್‌ ಹೆಡ್‌ಕ್ವಾರ್ಟ‌್ರಗಳು ಮತ್ತು ನವದೆಹಲಿಯ ಮುಖ್ಯ ಪ್ರಧಾನ ಕಚೇರಿಗಳಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ. ಮಿಲಿಟರಿ ಮೆರವಣಿಗೆಗಳು ಮತ್ತು ಭಾರತೀಯ ಸೇನೆಯಲ್ಲಿ ಇತ್ತೀಚೆಗೆ ಅಳವಡಿಸಿಕೊಂಡಿರುವ ತಂತ್ರಜ್ಞಾನದ ಪ್ರದರ್ಶನಗಳು ಇರುತ್ತವೆ.

ಇನ್ನು 2024 ರ ಭಾರತೀಯ ಸೇನಾ ದಿನದ ಥೀಮ್ “ರಾಷ್ಟ್ರದ ಸೇವೆಯಲ್ಲಿ” (In Service Of The Nation)
ಮುಖ್ಯವಾಗಿ ಈ ದಿನ ಕೆಚ್ಚೆದೆಯ ಸೈನಿಕರಿಗೆ ಪ್ರಶಸ್ತಿ ಪ್ರದಾನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

Advertisement
Tags :
Advertisement