ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಹಾಂಕಾಂಗ್ ಅನ್ನು ಹಿಂದಿಕ್ಕಿದೆ ಭಾರತದ ಷೇರುಪೇಟೆ

ಭಾರತದ ಷೇರುಮಾರುಕಟ್ಟೆ ಉಚ್ಛ್ರಾಯ ಸ್ಥಿತಿಯಲ್ಲಿದೆ. ಸತತವಾಗಿ ಏರುತ್ತಲೇ ಇದೆ. ಭಾರತದ್ದು ದಕ್ಷಿಣ ಏಷ್ಯಾದ ಅತಿದೊಡ್ಡ ಷೇರು ಮಾರುಕಟ್ಟೆ ಎನ್ನುವುದು ಮಾತ್ರವಲ್ಲ, ಏಷ್ಯಾದ ದೈತ್ಯ ಮಾರುಕಟ್ಟೆಗಳಲ್ಲಿ ಒಂದೆನಿಸಿದೆ.
05:45 PM Jan 23, 2024 IST | Ashitha S

ನವದೆಹಲಿ: ಭಾರತದ ಷೇರುಮಾರುಕಟ್ಟೆ ಉಚ್ಛ್ರಾಯ ಸ್ಥಿತಿಯಲ್ಲಿದೆ. ಸತತವಾಗಿ ಏರುತ್ತಲೇ ಇದೆ. ಭಾರತದ್ದು ದಕ್ಷಿಣ ಏಷ್ಯಾದ ಅತಿದೊಡ್ಡ ಷೇರು ಮಾರುಕಟ್ಟೆ ಎನ್ನುವುದು ಮಾತ್ರವಲ್ಲ, ಏಷ್ಯಾದ ದೈತ್ಯ ಮಾರುಕಟ್ಟೆಗಳಲ್ಲಿ ಒಂದೆನಿಸಿದೆ.

Advertisement

ಇದೀಗ ಹಾಂಕಾಂಗ್​ನ ಷೇರುಪೇಟೆಯನ್ನು ಭಾರತ ಹಿಂದಿಕ್ಕಿದೆ. ನಿನ್ನೆ ಮಂಗಳವಾರ ಭಾರತದ ಬಿಎಸ್​ಇ ಮತ್ತು ಎನ್​ಎಸ್​ಇನಲ್ಲಿ ಲಿಸ್ಟ್ ಆಗಿರುವ ಷೇರುಗಳ ಒಟ್ಟು ಮೌಲ್ಯ 4.33 ಟ್ರಿಲಿಯನ್ ಡಾಲರ್ ತಲುಪಿತು. ಅದೇ ವೇಳೆ, ಹಾಂಕಾಂಗ್​ನ ಷೇರು ವಿನಿಯಮ ಕೇಂದ್ರಗಳಲ್ಲಿ ಲಿಸ್ಟ್ ಆಗಿರುವ ಷೇರುಗಳ ಒಟ್ಟು ಮೌಲ್ಯ 4.29 ಟ್ರಿಲಿಯನ್ ಡಾಲರ್ ಇತ್ತು. ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತದ ಷೇರುಸಂಪತ್ತು ಹಾಂಕಾಂಗ್​ನದ್ದನ್ನು ಮೀರಿಸಿದೆ ಎಂದು ವರದಿ ಮಾಡಿದೆ.

ವಿಶ್ವದ ಅತಿದೊಡ್ಡ ಷೇರುಮಾರುಕಟ್ಟೆಗಳ ಪಟ್ಟಿಯಲ್ಲಿ ಭಾರತ ಐದನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಏರಿದೆ. ಹಾಂಕಾಂಗ್ ಐದನೇ ಸ್ಥಾನಕ್ಕೆ ಇಳಿದಿದೆ. ಕಳೆದ ನಾಲ್ಕು ವರ್ಷಗಳಿಂದ ಭಾರತದ ಸ್ಟಾಕ್ ಮಾರ್ಕೆಟ್ ಅದ್ಭುತವಾಗಿ ಬೆಳೆದು, ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ. ಕಳೆದ ತಿಂಗಳು ಡಿಸೆಂಬರ್ 5ರಂದು ಭಾರತದ ಷೇರು ಮಾರುಕಟ್ಟೆಯ ಒಟ್ಟೂ ಷೇರುಸಂಪತ್ತು 4 ಟ್ರಿಲಿಯನ್ ಡಾಲರ್ ಮೈಲಿಗಲ್ಲನ್ನು ಮೊದಲ ಬಾರಿಗೆ ಮುಟ್ಟಿತ್ತು.

Advertisement

ಇನ್ನು ಇತ್ತೀಚಿನ ಕೆಲ ವರ್ಷಗಳಿಂದ ಭಾರತದ ಷೇರು ಮಾರುಕಟ್ಟೆ ಗಣನೀಯ ವೇಗದಲ್ಲಿ ಬೆಳೆಯುತ್ತಿದೆ. ರೀಟೇಲ್ ಹೂಡಿಕೆದಾರರು, ಕಾರ್ಪೊರೇಟ್ ಕಂಪನಿಗಳ ವಿಶ್ವಾಸ ಗಳಿಸುವಲ್ಲಿ ಭಾರತ ಯಶಸ್ವಿಯಾಗಿದೆ. ಆರ್ಥಿಕ ಸುಧಾರಣಾ ಕ್ರಮಗಳು, ಆರ್ಥಿಕತೆಯ ಬೆಳವಣಿಗೆ, ಉದ್ಯಮಸ್ನೇಹಿ ವಾತಾವರಣ, ಇನ್​ಫ್ರಾಸ್ಟ್ರಕ್ಚರ್ ಅಭಿವೃದ್ಧಿ ಇವೆಲ್ಲವೂ ಕೂಡ ಹೂಡಿಕೆಗೆ ಭಾರತ ಪ್ರಶಸ್ತ ಸ್ಥಳವನ್ನಾಗಿ ಪರಿಗಣಿಸುವಂತೆ ಮಾಡಿದೆ.

 

Advertisement
Tags :
indiaLatestNewsNewsKannadaನವದೆಹಲಿಷೇರುಪೇಟೆಹಾಂಕಾಂಗ್
Advertisement
Next Article