ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

‘ವಾರ್ 2’ ಸಿನಿಮಾ ಮೂಲಕ ಬಾಲಿವುಡ್​​ ಎಂಟ್ರಿ ಪಡೆದ ಜೂನಿಯರ್ ಎನ್​ಟಿಆರ್

ದಕ್ಷಿಣ ಭಾರತದ ಕಲಾವಿದ ಜೂನಿಯರ್ ಎನ್​ಟಿಆರ್​  ‘ವಾರ್ 2’ ಸಿನಿಮಾ ಮೂಲಕ ಬಾಲಿವುಡ್​​ನಲ್ಲಿ ಮಿಂಚಲು ರೆಡಿ ಆಗಿದ್ದಾರೆ. 
10:49 AM Feb 02, 2024 IST | Ashika S

ಮುಂಬೈ: ದಕ್ಷಿಣ ಭಾರತದ ಕಲಾವಿದ ಜೂನಿಯರ್ ಎನ್​ಟಿಆರ್​  ‘ವಾರ್ 2’ ಸಿನಿಮಾ ಮೂಲಕ ಬಾಲಿವುಡ್​​ನಲ್ಲಿ ಮಿಂಚಲು ರೆಡಿ ಆಗಿದ್ದಾರೆ.

Advertisement

ಸಂದರ್ಶನ ಒಂದರಲ್ಲಿ ಅವರು ಈ ಬಗ್ಗೆ ಮಾಹಿತಿ ಹಂಚಿಕೊಂಡ ಹೃತಿಕ್ ರೋಷನ್ ಜೂನಿಯರ್ ಎನ್​ಟಿಆರ್ ಅವರ ಜೊತೆ ಕೆಲಸ ಮಾಡೋಕೆ ಸಾಕಷ್ಟು ಉತ್ಸುಕರಾಗಿದ್ದಾರೆ ಎಂದು ಹೇಳಿದ್ದಾರೆ.

‘ವಾರ್ ಸೀಕ್ವೆಲ್​ನಲ್ಲಿ ಭರ್ಜರಿ ಆ್ಯಕ್ಷನ್ ಇರಲಿದೆ. ಒಳ್ಳೆಯ ಸ್ಕ್ರಿಪ್ಟ್ ಕೂಡ ಇದೆ. ಈ ಸಿನಿಮಾ ದೊಡ್ಡದಾಗಿರುತ್ತದೆ. ಸಾಕಷ್ಟು ಮನರಂಜನೆ ಇರಲಿದೆ. ಜೂನಿಯರ್​ ಎನ್​ಟಿಆರ್ ಜೊತೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ’ ಎಂದು ಹೃತಿಕ್ ಹೇಳಿದ್ದಾರೆ.

Advertisement

‘ವಾರ್ 2’ ಚಿತ್ರವನ್ನು ಅಯಾನ್ ಮುಖರ್ಜಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ‘ಬ್ರಹ್ಮಾಸ್ತ್ರ’ದಂಥ ಸಿನಿಮಾಗಳನ್ನು ನಿರ್ದೇಶನ ಮಾಡಿದ ಅನುಭವ ಅವರಿಗೆ ಇದೆ. ಈ ಸಿನಿಮಾದ ಸೀಕ್ವೆಲ್​ನಲ್ಲಿ ಕೆಲವು ಪ್ರಮುಖ ಹೀರೋಗಳು ಅತಿಥಿ ಪಾತ್ರ ಮಾಡುತ್ತಾರೆ ಎನ್ನಲಾಗಿದೆ. ಈ ಸಿನಿಮಾ ಯಶ್ ರಾಜ್ ಫಿಲ್ಮ್ಸ್ ಯೂನಿವರ್ಸ್ ಅಡಿಯಲ್ಲಿ ಸಿದ್ಧವಾಗುತ್ತಿದೆ.

Advertisement
Tags :
LatetsNewsNewsKannadaಜೂನಿಯರ್ ಎನ್​ಟಿಆರ್ದಕ್ಷಿಣ ಭಾರತಬಾಲಿವುಡ್ಸಿನಿಮಾ
Advertisement
Next Article