ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಕಾಂತಾರ ಎಫೆಕ್ಟ್, ದೈವಾರಾಧನೆ ವೀಕ್ಷಣೆಗೆ ಟಿಕೆಟ್: ಸಿಡಿದೆದ್ದ ದೈವಾರಾಧಕರು

ತುಳುನಾಡಿನ ದೈವ ನರ್ತನ ವೀಕ್ಷಣೆಗೆ ಟ್ರಾವೆಲ್ ಪ್ಯಾಕೇಜ್ ಗೆ ಟ್ರಾವೆಲ್ ಏಜೆಂನ್ಸಿ ಪ್ರಕಟಿಸಿದ್ದಾರೆ.
03:03 PM Nov 29, 2023 IST | Ramya Bolantoor

ಮಂಗಳೂರು:  ತುಳುನಾಡಿನ ದೈವ ನರ್ತನ ವೀಕ್ಷಣೆಗೆ ಟ್ರಾವೆಲ್ ಪ್ಯಾಕೇಜ್ ಗೆ ಟ್ರಾವೆಲ್ ಏಜೆಂನ್ಸಿ ಪ್ರಕಟಿಸಿದ್ದಾರೆ. ಈ ಟೂರ್ ಪ್ಯಾಕೇಜ್ ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ತುಳುನಾಡಿನ ದೈವಾರಾಧನೆಯನ್ನ ವ್ಯವಹಾರದ ಸರಕಾಗಿ ಬಳಕೆ ಮಾಡುತ್ತಿದ್ದಾರೆ.

Advertisement

ಸೋಶಿಯಲ್ ಮೀಡಿಯಾದಲ್ಲಿ ಟ್ರಾವೆಲ್ ಏಜೆನ್ಸಿಯೊಂದು ಹರಿಬಿಟ್ಟ ಪೋಸ್ಟರ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. beatravelbuddy ಎಂಬ ಏಜೆಂನ್ಸಿಯಿಂದ ಪೋಸ್ಟ್ ಮಾಡಿದ್ದಾರೆ

ದೈವಾರಾಧನೆ ಸಹಿತ ಕರಾವಳಿಯ ಸಂಸ್ಕೃತಿ, ಪ್ರವಾಸಿತಾಣಗಳನ್ನ ತೋರಿಸಲಾಗುವುದು. ದೈವದ ಚಿತ್ರವಿರುವ ಪೋಸ್ಟರ್ ನಲ್ಲಿ ಟಿಕೆಟ್ ನ ದರವನ್ನು ಉಲ್ಲೇಖ ಮಾಡಿದ್ದಾರೆ.

Advertisement

2899 ಕೊಟ್ಟರೆ ಕರಾವಳಿಯ ಸೊಗಡು ಹಾಗು ದೈವಾರಾಧನೆಯನ್ನ ತೋರಿಸಲಾಗುವುದು ಎಂದು ಪೋಸ್ಟ್ ಮಾಡಿದ್ದಾರೆ. ತುಳುನಾಡಿನಲ್ಲಿ ಶ್ರದ್ಧಾ ಭಕ್ತಿಯಿಂದ ನಡೆಯುವ ದೈವಾದಾಧನೆ ತೋರಿಸಲಾಗುವುದು ಪೋಸ್ಟರ್ ವಿರುದ್ಧ ದೈವಾರಾಧಕರು ಸಿಡಿದೆದ್ದಿದ್ದಾರೆ.

ದೈವಾರಾಧನೆಗೆ ಟಿಕೆಟ್ ನಿಗದಿಪಡಿಸಿ ವ್ಯವಹಾರಕ್ಕಾಗಿ ಬಳಸಿದ್ದಾರೆ. ಕಾಂತಾರ ಸಿನಿಮಾ ಬಂದ ಮೇಲೇ ಈ ರೀತಿಯ ಅವಾಂತರಗಳಾಗುತ್ತಿದೆ.ರಿಷಬ್ ಶೆಟ್ಟಿಯವರು ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಜಾಗೃತಿ ಮೂಡಿಸಬೇಕು.ಇಲ್ಲವಾದಲ್ಲಿ ಇದರ ವಿರುದ್ಧ ನಾವೇ ಹೋರಾಡುತ್ತೇವೆ.

ಯಾವುದೇ ಕಾರಣಕ್ಕೂ ಈ ರೀತಿಯ ಘಟನೆಗಳಿಗೆ ಅವಕಾಶ ನೀಡುವುದಿಲ್ಲ. ಹಾದಿ ಬೀದಿಗಳಲ್ಲಿ ದೈವರಾಧನೆ ಪ್ರದರ್ಶನವಾಗುತ್ತಿದೆ.ಇದು ಇನ್ನೊಂದು ಹಂತ ತಲುಪಿ ವ್ಯವಹಾರದ ಸರಕಾಗಿ ಉಪಯೋಗಿಸಲಾಗುತ್ತಿದೆ.ದೈವಾರಾಧಕರು ಒಗ್ಗಟ್ಟಾಗಿ ಇದರ ವಿರುದ್ಧ ಹೋರಾಡಬೇಕು ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

Advertisement
Tags :
'ಕಾಂತಾರ'LatestNewsNewsKannadaPOSTSocialMediaಮಂಗಳೂರು
Advertisement
Next Article