For the best experience, open
https://m.newskannada.com
on your mobile browser.
Advertisement

ದಾಖಲೆ ಬೆಲೆಗೆ ಮಾರಾಟವಾದ ʼಕಾಂತಾರ ಪ್ರೀಕ್ವೆಲ್‌ʼ ಓಟಿಟಿ ರೈಟ್ಸ್

ರಿಷಬ್‌ ಶೆಟ್ಟಿ ನಟಿಸಿ ನಿರ್ದೇಶಿಸುತ್ತಿರುವ 'ಕಾಂತಾರ-ಒಂದು ದಂತಕಥೆ'ಯ ಮೊದಲ ಅಧ್ಯಾಯ ರಿಲೀಸ್ ಗೂ ಮೊದಲೇ ಭರ್ಜರಿ ಕಲೆಕ್ಷನ್ ಮಾಡಿದೆ. ದೊಡ್ಡ ಮೊತ್ತಕ್ಕೆ ಪ್ರೈಂ ವಿಡಿಯೊ ಈ ಸಿನಿಮಾವನ್ನು ಖರೀದಿಸಿದೆ. ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾನು ಖರೀದಿಸಿದ 29 ಸಿನಿಮಾಗಳ ಶೀರ್ಷಿಕೆಯನ್ನು ಪ್ರೈಂ ಘೋಷಿಸಿತು.
11:56 AM Mar 21, 2024 IST | Ashitha S
ದಾಖಲೆ ಬೆಲೆಗೆ ಮಾರಾಟವಾದ ʼಕಾಂತಾರ ಪ್ರೀಕ್ವೆಲ್‌ʼ ಓಟಿಟಿ ರೈಟ್ಸ್

ಮುಂಬೈ: ರಿಷಬ್‌ ಶೆಟ್ಟಿ ನಟಿಸಿ ನಿರ್ದೇಶಿಸುತ್ತಿರುವ 'ಕಾಂತಾರ-ಒಂದು ದಂತಕಥೆ'ಯ ಮೊದಲ ಅಧ್ಯಾಯ ರಿಲೀಸ್ ಗೂ ಮೊದಲೇ ಭರ್ಜರಿ ಕಲೆಕ್ಷನ್ ಮಾಡಿದೆ. ದೊಡ್ಡ ಮೊತ್ತಕ್ಕೆ ಪ್ರೈಂ ವಿಡಿಯೊ ಈ ಸಿನಿಮಾವನ್ನು ಖರೀದಿಸಿದೆ. ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾನು ಖರೀದಿಸಿದ 29 ಸಿನಿಮಾಗಳ ಶೀರ್ಷಿಕೆಯನ್ನು ಪ್ರೈಂ ಘೋಷಿಸಿತು.

Advertisement

ರಿಷಬ್‌ ಶೆಟ್ಟಿ ಹಾಗೂ ಚಿತ್ರದ ನಿರ್ಮಾಪಕ ವಿಜಯ್‌ ಕಿರಗಂದೂರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವರಾಹ ರೂಪಂ ಹಾಡಿಗೆ ಯಕ್ಷಗಾನ ಕಲಾವಿದರು ಪ್ರದರ್ಶನ ನೀಡಿದ ಬಳಿಕ, ಪ್ರೈಂ ತಂಡವು 'ಕಾಂತಾರ-ಒಂದು ದಂತಕಥೆ' ಅಧ್ಯಾಯ 1ರ ಬಿಡುಗಡೆಯನ್ನು ಘೋಷಿಸಿತು. ಸಿನಿಮಾದ ಚಿತ್ರೀಕರಣ ಈಗಾಗಲೇ ಆರಂಭವಾಗಿದ್ದು, ಹೊಸ ಸಿನಿಮಾ 'ಕಾಂತಾರ-ಒಂದು ದಂತಕಥೆ'ಯ ಪ್ರೀಕ್ವೆಲ್‌ ಆಗಿದ್ದು, ಕದಂಬರ ಕಾಲದಲ್ಲಿ ನಡೆಯುವ ಕಥೆಯನ್ನು ಹೊಂದಿದೆ.

ಬಲ್ಲ ಮಾಹಿತಿಗಳ ಪ್ರಕಾರ 'ಕಾಂತಾರ': ಚಾಪ್ಟರ್- 1 ಓಟಿಟಿ ರೈಟ್ಸ್ ಅಂದಾಜು 150 ಕೋಟಿ ರೂ.ಗೆ ಮಾರಾಟವಾಗಿದೆ ಎನ್ನಲಾಗುತ್ತಿದೆ.

Advertisement

Advertisement
Tags :
Advertisement