For the best experience, open
https://m.newskannada.com
on your mobile browser.
Advertisement

ʻಟಾಕ್ಸಿಕ್‌ʼನಲ್ಲಿ ನಟಿಸುವುದರ ಬಗ್ಗೆ ಸ್ಪಷ್ಟನೆ ನೀಡಿದ ಬಾಲಿವುಡ್ ಬೆಬೊ

ಸ್ಯಾಂಡಲ್‌ವುಡ್‌ ನಟ ರಾಕಿಂಗ್ ಸ್ಟಾರ್ ಯಶ್​ ನಟಿಸಲಿರುವ ಟಾಕ್ಸಿಕ್‌ ಚಿತ್ರದಲ್ಲಿ ಬಾಲಿವುಡ್​ ನಟಿ ಕರೀನಾ ಕಪೂರ್ ಅಭಿನಯಿಸುವುದರ ಮೂಲಕ ಸೌತ್ ಸಿನಿಮಾ ಇಂಡಸ್ಟ್ರಿಗೆ ಕಾಲಿಡಲಿದ್ದಾರೆಂಬ ಸುದ್ದಿ ಹರಿದಾಡುತ್ತಿತ್ತು. ಸದ್ಯ ಈ ವಿಷಯದ ಬಗ್ಗೆ ಸ್ವತಃ ಬಿಟೌನ್‌ ಬೆಡಗಿ ಕರೀನಾ ಕಪೂರ್ ಮಾತಾಡಿದ್ದಾರೆ.
01:17 PM Mar 18, 2024 IST | Ashitha S
ʻಟಾಕ್ಸಿಕ್‌ʼನಲ್ಲಿ ನಟಿಸುವುದರ ಬಗ್ಗೆ ಸ್ಪಷ್ಟನೆ ನೀಡಿದ ಬಾಲಿವುಡ್ ಬೆಬೊ

ಸ್ಯಾಂಡಲ್‌ವುಡ್‌ ನಟ ರಾಕಿಂಗ್ ಸ್ಟಾರ್ ಯಶ್​ ನಟಿಸಲಿರುವ ಟಾಕ್ಸಿಕ್‌ ಚಿತ್ರದಲ್ಲಿ ಬಾಲಿವುಡ್​ ನಟಿ ಕರೀನಾ ಕಪೂರ್ ಅಭಿನಯಿಸುವುದರ ಮೂಲಕ ಸೌತ್ ಸಿನಿಮಾ ಇಂಡಸ್ಟ್ರಿಗೆ ಕಾಲಿಡಲಿದ್ದಾರೆಂಬ ಸುದ್ದಿ ಹರಿದಾಡುತ್ತಿತ್ತು. ಸದ್ಯ ಈ ವಿಷಯದ ಬಗ್ಗೆ ಸ್ವತಃ ಬಿಟೌನ್‌ ಬೆಡಗಿ ಕರೀನಾ ಕಪೂರ್ ಮಾತಾಡಿದ್ದಾರೆ.

Advertisement

​ ಸೌತ್ ಸಿನಿಮಾದಲ್ಲಿ ಕರೀನಾ ಕಪೂರ್ ನೋಡಲು ಅಭಿಮಾನಿಗಳ ಕೂಡ ಕಾತುರದಿಂದ ಕಾಯ್ತಿದ್ದು, ಈ ನಡುವೆ ನಟಿ ಸೌತ್​ ಬಿಗ್ ಬಜೆಟ್ ಚಿತ್ರದಲ್ಲಿ ನಟಿಸುತ್ತಿರುವುದರ ಬಗ್ಗೆ ಸ್ಪಷನೆ ನೀಡಿದ್ದಾರೆ.

ಬಾಲಿವುಡ್‌ ನಟಿ ಕರೀನಾ ಕಪೂರ್‌, ಬಾಲಿವುಡ್‌ ಬ್ಲೈಡ್ಸ್‌ ಗಾಸಿಪ್‌ ಶೇರ್ ಮಾಡಿರುವ ವಿಡಿಯೋವೊಂದರಲ್ಲಿ "ನಾನು ಬಿಗ್ ಬಜೆಟ್​ ಸೌತ್ ಸಿನಿಮಾ ಮಾಡುತ್ತಿದ್ದೇನೆ. ಸದ್ಯ ಆ ಸಿನಿಮಾ ಭಾರತದಾದ್ಯಂತ ಸದ್ದು ಮಾಡ್ತಿದೆ. ನಾನು ಎಲ್ಲಿ ಶೂಟಿಂಗ್ ಮಾಡುತ್ತೇನೆ ಎಂದು ನನಗೆ ತಿಳಿದಿಲ್ಲ. ಆದರೆ ನಾನು ಇದೇ ಮೊದಲ ಬಾರಿಗೆ ಸೌತ್ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ನನ್ನ ಅಭಿಮಾನಿಗಳು ಹೇಗೆ ಸ್ವೀಕರಿಸುತ್ತಾರೆ ಎನ್ನುವುದನ್ನು ನೋಡಲು ಕಾಯ್ತಿದ್ದೇನೆ" ಎಂದು ಹೇಳಿದ್ದಾರೆ.

Advertisement

Advertisement
Tags :
Advertisement