ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಬಿಜೆಪಿ ಸೇರಿದರೆ ಇ.ಡಿಯಿಂದ ಮುಕ್ತಿ ಸಿಗುತ್ತದೆ ಎಂದ ಕೇಜ್ರಿವಾಲ್‌

ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಇದುವರೆಗೆ ಎಂಟು ಬಾರಿ ಜಾರಿ ನಿರ್ದೇಶನಾಲಯದ(ಇ.ಡಿ) ಸಮನ್ಸ್‌ಗಳನ್ನು ತಪ್ಪಿಸಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಬಿಜೆಪಿಗೆ ಸೇರಿದರೆ ಇದೆಲ್ಲದಕ್ಕೂ ಮುಕ್ತಿ ಸಿಗುತ್ತದೆ ಎಂದಿದ್ದಾರೆ.
08:15 AM Mar 07, 2024 IST | Ashitha S

ನವದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಇದುವರೆಗೆ ಎಂಟು ಬಾರಿ ಜಾರಿ ನಿರ್ದೇಶನಾಲಯದ(ಇ.ಡಿ) ಸಮನ್ಸ್‌ಗಳನ್ನು ತಪ್ಪಿಸಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಬಿಜೆಪಿಗೆ ಸೇರಿದರೆ ಇದೆಲ್ಲದಕ್ಕೂ ಮುಕ್ತಿ ಸಿಗುತ್ತದೆ ಎಂದಿದ್ದಾರೆ.

Advertisement

ಟಿಎಂಸಿ ನಾಯಕ ತಪಸ್‌ ರಾಯ್‌ ಬಿಜೆಪಿ ಸೇರ್ಪಡೆ ಕುರಿತ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿರುವ ಕೇಜ್ರಿವಾಲ್‌, ಪ್ರಧಾನಿ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 'ಇ.ಡಿ ಬಳಸಿ ಕಿರುಕುಳ ನೀಡುವ ಮೂಲಕ ವಿರೋಧ ಪಕ್ಷದ ನಾಯಕರನ್ನು ಬಿಜೆಪಿಗೆ ಸೇರಲು ಬಲವಂತ ಮಾಡಲಾಗುತ್ತಿದೆ' ಎಂದು ಆರೋಪಿಸಿದ್ದಾರೆ.

'ನೀವು ಎಲ್ಲಿಗೆ ಹೋಗುತ್ತೀರಿ - ಬಿಜೆಪಿಗೆ ಅಥವಾ ಜೈಲಿಗೆ? ಬಿಜೆಪಿಗೆ ಸೇರಲು ನಿರಾಕರಿಸಿದವರನ್ನು ಜೈಲಿಗೆ ಕಳುಹಿಸಲಾಗುತ್ತದೆ. ಎಎಪಿ ನಾಯಕರಾದ ಸತ್ಯೇಂದ್ರ ಜೈನ್, ಮನೀಶ್ ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ಅವರು ಇವತ್ತು ಬಿಜೆಪಿ ಸೇರಿದರೆ ಸಾಕು ನಾಳೆ ಅವರಿಗೆ ಜಾಮೀನು ಸಿಗುತ್ತದೆ. ನಾನು ಬಿಜೆಪಿ ಸೇರಿದರೆ ಇ.ಡಿಯಿಂದ ನೋಟಿಸ್‌ ಬರುವುದು ನಿಲ್ಲುತ್ತದೆ' ಎಂದು ಹೇಳಿದರು.

Advertisement

ಮೊದಲ ಮೂರು ಸಮನ್ಸ್‌ಗಳಿಗೆ ಪ್ರತಿಕ್ರಿಯೆ ನೀಡದೆ ಇರುವುದಕ್ಕೆ ಕೇಜ್ರಿವಾಲ್ ವಿರುದ್ಧ ಇ.ಡಿ ನ್ಯಾಯಾಲಯದ ಮೊರೆ ಹೋಗಿತ್ತು. ಈ ದೂರಿನ ವಿಚಾರಣೆ ಮಾರ್ಚ್ 16ರಂದು ನಡೆಯಲಿದೆ. ಇದೀಗ ಬುಧವಾರ ಮತ್ತೊಮ್ಮೆ ಇ.ಡಿ ನ್ಯಾಯಾಲಯದ ಮೊರೆ ಹೋಗಿದ್ದು, ವಿಚಾರಣೆಯನ್ನು ಗುರುವಾರ(ಮಾ.8) ನಡೆಸುವುದಾಗಿ ನ್ಯಾಯಾಧೀಶರು ತಿಳಿಸಿದ್ದಾರೆ.

Advertisement
Tags :
BJPCongressindiaLatestNewsNewsKannadaಕೇಜ್ರಿವಾಲ್‌ನವದೆಹಲಿಪ್ರಧಾನಿ ನರೇಂದ್ರ ಮೋದಿ
Advertisement
Next Article