For the best experience, open
https://m.newskannada.com
on your mobile browser.
Advertisement

ಕೇರಳದ ಉದ್ಯಮಿಯನ್ನು ಹನಿಟ್ರಾಪ್ ಗೆ ಕೆಡವಿದವರು ಅರೆಸ್ಟ್

ಕಳೆದ ಒಂಬತ್ತು ತಿಂಗಳ ಹಿಂದೆ ನಡೆದ ಹನಿಟ್ರಾಪ್ ಪ್ರಕರಣವನ್ನು ಭೇದಿಸಿರುವ ಮೈಸೂರು ಗ್ರಾಮಾಂತರ ಪೊಲೀಸರು ಮಹಿಳೆ ಸಹಿತ ಮೂವರನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ್ದ ಇನೋವಾ ಕಾರು ಹಾಗೂ 50ಸಾವಿರ ನಗದನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಫಜಲುಲ್ಲಾ ರೆಹಮಾನ್, ರಿಜ್ವಾನ್ ಎಂದು ಗುರುತಿಸಲಾಗಿದ್ದು, ಮಹಿಳೆಯ ಹೆಸರನ್ನು ಗೌಪ್ಯವಾಗಿಡಲಾಗಿದೆ. ಇನ್ನು ಕೇರಳದ ಸುನ್ನಿ ಎಂಬುವರೇ ಹನಿಟ್ರಾಪ್ ಗೆ ಒಳಗಾದ ಉದ್ಯಮಿಯಾಗಿದ್ದಾರೆ.
03:35 PM Dec 29, 2023 IST | Ashitha S
ಕೇರಳದ ಉದ್ಯಮಿಯನ್ನು ಹನಿಟ್ರಾಪ್ ಗೆ ಕೆಡವಿದವರು ಅರೆಸ್ಟ್

ಮೈಸೂರು: ಹನಿಟ್ರಾಪ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಶ್ರೀಮಂತ ಉದ್ಯಮಿಗಳನ್ನೇ ಟಾರ್ಗೆಟ್ ಮಾಡುತ್ತಿರುವ ಆರೋಪಿಗಳು ಮಹಿಳೆಯರ ಮೂಲಕ ಬಲೆಗೆ ಕೆಡವಿಕೊಂಡು ಅವರ ನಗ್ನ ಚಿತ್ರಗಳನ್ನು ಚಿತ್ರೀಕರಿಸಿ ಅದನ್ನು ಮುಂದಿಟ್ಟುಕೊಂಡು ಹಣ ಪೀಕುವ ಕೃತ್ಯ ಎಸಗುತ್ತಿರುವುದು ಮೇಲಿಂದ ಮೇಲೆ ನಡೆಯುತ್ತಲೇ ಇದೆ. ಮಾನ ಮರ್ಯಾದೆಗೆ ಅಂಜುವ ಕೆಲವರು ಪೊಲೀಸರಿಗೆ ದೂರು ನೀಡದ ಕಾರಣದಿಂದ ಪ್ರಕರಣ ಬೆಳಕಿಗೆ ಬಾರದೆ ಮುಚ್ಚಿಹೋಗುತ್ತಿದೆ. ಇದೀಗ ಪೊಲೀಸರ ತನಿಖೆಯಿಂದ 9 ತಿಂಗಳ ಹಿಂದೆ ನಡೆದ ಘಟನೆ ಬೆಳಕಿಗೆ ಬಂದಿದೆ.

Advertisement

ಕಳೆದ ಒಂಬತ್ತು ತಿಂಗಳ ಹಿಂದೆ ನಡೆದ ಹನಿಟ್ರಾಪ್ ಪ್ರಕರಣವನ್ನು ಭೇದಿಸಿರುವ ಮೈಸೂರು ಗ್ರಾಮಾಂತರ ಪೊಲೀಸರು ಮಹಿಳೆ ಸಹಿತ ಮೂವರನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ್ದ ಇನೋವಾ ಕಾರು ಹಾಗೂ 50ಸಾವಿರ ನಗದನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಫಜಲುಲ್ಲಾ ರೆಹಮಾನ್, ರಿಜ್ವಾನ್ ಎಂದು ಗುರುತಿಸಲಾಗಿದ್ದು, ಮಹಿಳೆಯ ಹೆಸರನ್ನು ಗೌಪ್ಯವಾಗಿಡಲಾಗಿದೆ. ಇನ್ನು ಕೇರಳದ ಸುನ್ನಿ ಎಂಬುವರೇ ಹನಿಟ್ರಾಪ್ ಗೆ ಒಳಗಾದ ಉದ್ಯಮಿಯಾಗಿದ್ದಾರೆ.

ಕಳೆದ ಮಾರ್ಚ್ ತಿಂಗಳಿನಲ್ಲಿ ಕೇರಳದ ಉದ್ಯಮಿ ಸುನ್ನಿ ಅವರು ಚೆನ್ನೈನಿಂದ ಮೈಸೂರು ಮೂಲಕ ಕೇರಳಕ್ಕೆ ತಮ್ಮ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಮೈಸೂರಿನ ಮಾನಂದವಾಡಿ ರಸ್ತೆಯಲ್ಲಿ ಅವರನ್ನು ಅಡ್ಡಗಟ್ಟಿದ ಆರೋಪಿಗಳು ಬೆದರಿಸಿ ಬಲವಂತವಾಗಿ ಮನೆಯೊಂದಕ್ಕೆ ಕರೆದೊಯ್ದು ಮಹಿಳೆ ಜೊತೆ ನಗ್ನವಾಗಿ ಮಲಗಿಸಿ ಫೋಟೋ ಹಾಗೂ ವಿಡಿಯೋಗಳನ್ನು ಚಿತ್ರೀಕರಿಸಿದ್ದರು.

Advertisement

ಆ ನಂತರ ಉದ್ಯಮಿ ಸುನ್ನಿಗೆ ಈ ಫೋಟೋ ಹಾಗೂ ವಿಡಿಯೋಗಳನ್ನು ತೋರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿದುಬಿಡುವುದಾಗಿ ಬೆದರಿಸಿ 10 ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟಿದ್ದರು. ಈ ವೇಳೆ ಹೆದರಿದ ಉದ್ಯಮಿ ಹಣವನ್ನು ಹೊಂದಿಸಿ ಸುಮಾರು 5 ಲಕ್ಷ ರೂಪಾಯಿಯನ್ನು ಪಾವತಿಸಿದ್ದರು. ಇದೇ ಸಂದರ್ಭ ಅವರನ್ನು ಹೆದರಿಸಿ ಅವರು ಧರಿಸಿದ್ದ ಚಿನ್ನದ ಉಂಗುರವನ್ನು ಆರೋಪಿಗಳು ದೋಚಿ ಎಸ್ಕೇಪ್ ಆಗಿದ್ದರು.

ಈ ಘಟನೆಯಿಂದ ಭಯಗೊಂಡ ಸುನ್ನಿ ಅವರು ಮೈಸೂರಿನ ಪೊಲೀಸರಿಗೆ ದೂರು ನೀಡದೆ ಕೇರಳಕ್ಕೆ ತೆರಳಿ ಅಲ್ಲಿನ ತಿರುನೆಲ್ಲಿ ಪೊಲೀಸ್ ಠಾಣೆಗೆ ತಿಳಿಸಿ ದೂರು ದಾಖಲಿಸಿದ್ದರು. ಕೃತ್ಯ ಮೈಸೂರು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದ ಹಿನ್ನಲೆಯಲ್ಲಿ ಅಲ್ಲಿಂದ ಪ್ರಕರಣವನ್ನು ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು. ಹೀಗಾಗಿ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಮೈಸೂರು ಜಿಲ್ಲಾ ಎಸ್ಪಿ ಸೀಮಾ ಲಾಟ್ಕರ್ ತನಿಖೆಗೆ ಆದೇಶಿಸಿದ್ದರು.

ಅಡಿಷನಲ್ ಎಸ್ಪಿ ನಂದಿನಿ ಹಾಗೂ ಡಿವೈಎಸ್ಪಿ ಕರೀಂ ರಾವತರ್ ಮಾರ್ಗದರ್ಶನದಲ್ಲಿ ಗ್ರಾಮಾಂತರ ಠಾಣೆ ಇನ್ಸ್ ಪೆಕ್ಟರ್ ಡಾ.ಶೇಖರ್ ನೇತೃತ್ವದಲ್ಲಿ ಪಿಎಸ್ ಐ ಚಂದ್ರ ಹಾಗೂ ಸಿಬ್ಬಂದಿ ಮಹೇಶ್, ರವಿ, ಸುನಿಲ್ ಕುಮಾರ್ ರನ್ನೊಳಗೊಂಡ ತಂಡ ಆರೋಪಿಗಳ ತಲಾಸೆ ಕೈಗೊಂಡಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಕಲೆ ಹಾಕಿದ ತನಿಖಾ ತಂಡ ಮಹಿಳೆ ಸೇರಿದಂತೆ ಆರೋಪಿಗಳಾದ ಫಜಲುಲ್ಲಾ ರೆಹಮಾನ್, ರಿಜ್ವಾನ್ ಎಂಬುವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಆರೋಪಿಗಳಿಂದ 50 ಸಾವಿರ ನಗದು ಹಾಗೂ ಕೃತ್ಯಕ್ಕೆ ಬಳಸಿದ ಇನೋವಾ ಕಾರನ್ನು ವಶಪಡಿಸಿಕೊಂಡಿದ್ದಾರೆ. ಇದೇ ತಂಡ ಮಡಿಕೇರಿಯಲ್ಲೂ ಇಂತಹದ್ದೇ ಕೃತ್ಯ ನಡೆಸಿರುವುದು ತನಿಖೆಯಲ್ಲಿ ತಿಳಿದುಬಂದಿದೆ

Advertisement
Tags :
Advertisement