ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಸಿದ್ದು ಸರ್ಕಾರದ ಸಂವಿಧಾನ ಜಾಗೃತಿ ಕಾರ್ಯಕ್ರಮ ವಿರುದ್ಧ ಕೋಟ ಕಿಡಿ!

ಸಿದ್ದರಾಮಯ್ಯ ಸರ್ಕಾರದ ಸಂವಿಧಾನ ಜಾಗೃತಿ ಕಾರ್ಯಕ್ರಮದ ವಿರುದ್ಧ ಮಂಗಳೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಕಿಡಿಕಾರಿದ್ದಾರೆ.
01:45 PM Feb 27, 2024 IST | Nisarga K
ಸಿದ್ದು ಸರ್ಕಾರದ ಸಂವಿಧಾನ ಜಾಗೃತಿ ಕಾರ್ಯಕ್ರಮ ವಿರುದ್ಧ ಕೋಟ ಶ್ರೀನಿವಾಸ ಪೂಜಾರಿ ಕಿಡಿ

ಮಂಗಳೂರು:  ಸಿದ್ದರಾಮಯ್ಯ ಸರ್ಕಾರದ ಸಂವಿಧಾನ ಜಾಗೃತಿ ಕಾರ್ಯಕ್ರಮದ ವಿರುದ್ಧ ಮಂಗಳೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಕಿಡಿಕಾರಿದ್ದಾರೆ.

Advertisement

ಕಾರ್ಯಕ್ರಮದ ವಿರುದ್ಧ ಮಾತನಾಡಿದ ಅವರು, ಜನರ ತೆರಿಗೆ ಹಣದಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಕಾರ್ಯಕ್ರಮ ಮಾಡಿದ್ದಾರೆ ಆದರೆ ಅದನ್ನ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವಾಗಿ ಪರಿವರ್ತನೆ ಮಾಡಿ ದೇಶದ ಪ್ರಧಾನ ಮಂತ್ರಿ ನಿಂದಿಸುವ ಕೆಲಸ ಮಾಡಿದ್ದಾರೆ.ಸಂವಿಧಾನಕ್ಕೆ ಧಕ್ಕೆ ಬಂದಿದೆ ಅನ್ನೋ ಅಪಪ್ರಚಾರ ನಡೆಯುತ್ತಿದೆ,ದೇಶದ ಪ್ರಧಾನ ಮಂತ್ರಿಗಳನ್ನ ದೋಷಣೆ ಮಾಡೋದಕ್ಕೆ ಸರಕಾರಿ ಕಾರ್ಯಕ್ರಮದ ಬಳಕೆ ಮಾಡಿದ್ದಾರೆ ಅಲ್ಲದೆ ವಿವಾದತ್ಮಕ ಲೇಖಕಿ ನಿತಶಾ ಕೌಲ್ ನ ಕರ್ನಾಟಕದ ಜನರ ಟ್ಯಾಕ್ಸ್ ನಿಂದ ಕರೆಸಿದ್ದಾರೆ.ಭಾರತದ ವಿರೋಧಿತನವಿರುವಂತಹ ಲೇಖಕಿಯನ್ನ ಕರೆಸುವ ಪ್ರಯತ್ನ ಕೂಡ ಮಾಡಿದ್ದಾರೆ.

ಖರ್ಗೆ ಸಂವಿಧಾನಕ್ಕೆ ಧಕ್ಕೆ ಬಂದಿದೆ ಅಂತ ಹೇಳ್ತಾರೆ, ಆದರೆ  ತುರ್ತು ಪರಿಸ್ಥಿತಿ ಹೇರಿದವರು ಯಾರು? ಸಂವಿಧಾನವನ್ನ 80 ಕ್ಕೂ ಅಧಿಕ ಬಾರಿ ತಿದ್ದುಪಡಿ ಮಾಡಿದವರ್ಯಾರು.? ಕಾಂಗ್ರೆಸ್ ನವರಿಗೆ ಸಂವಿಧಾನಕ್ಕೆ ಧಕ್ಕೆ ಬಂದಿದೆ ಎನ್ನುವ ನೈತಿಕತೆ ಎಲ್ಲಿದೆ..? ಬಾಬಾ ಸಾಹೇಬ್ ಅಂಬೇಡ್ಕರ್ ಹೆಸರನ್ನ ಕೇವಲ ರಾಜಕೀಯಕ್ಕಾಗಿ ಬಳಕೆ ಮಾಡ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಬಳಿಕ ರಾಹುಲ್ ಗಾಂಧಿ ಭಾರತ್ ಜೋಡೊ ಯಾತ್ರೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ರಾಹುಲ್ ಗಾಂಧಿ ಭಾರತ್ ಜೋಡೊ ಮಾಡಲು ಹೊರಟಿದ್ದಾರೆ. ಭಾರತವನ್ನ ಒಡೆದಿದ್ದು ಯಾರು?, ಭಾರತವನ್ನ ಒಡೆದವರು ಭಾರತ್ ಜೋಡೊ ಮಾಡಲು ಹೊರಟಿರುವುದು ರಾಜಕೀಯವಲ್ಲದೆ ಬೇರೇನೂ ಅಲ್ಲ, ಜಯದೇವ ಆಸ್ಪತ್ರೆಯ ಮುಖ್ಯಸ್ಥ ಮಂಜು ನಾಥ್ ಬಡವರ ಸೇವೆ ಮಾಡುತ್ತಿದ್ದರು ಆದರೆ ಅವರು ದೇವಗೌಡರ ಕುಟುಂಬದವ್ರು ಅನ್ನೋ ಒಂದೇ ಒಂದು ಕಾರಣಕ್ಕೆ ಅವರನ್ನ ವೃತ್ತಿಯಿಂದ ಕೆಳಗಿಳಿಸಿದ್ರು, ಅವರನ್ನ ವೃತ್ತಿಯಿಂದ ಕೆಳಗಿಳಿಸಿ ಅವರ ಮೇಲೆ ತನಿಖೆ ಮಾಡುವ ಕುಕೃತ್ಯ ನಡೆಯಿತು  ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇನ್ನು  ಕಳೆದ ಬಾರಿ ಒಂದು ಸೀಟ್ ಪಡೆದ ಕಾಂಗ್ರೆಸ್ ನವರು 25 ಕ್ಷೇತ್ರ ಗೆಲ್ಲುತ್ತೆವೆ ಅನ್ನೋವಾಗ 25 ಕ್ಷೇತ್ರ ಗೆದ್ದ ನಾವು 28 ಗೆಲ್ತಿವಿ ಅನ್ನೋದ್ರಲ್ಲಿ ತಪ್ಪೇನಿದೆ, ಟಿಕೆಟ್ ಕೇಳೋದು ತಪ್ಪಲ್ಲ ಕೊಡುವುದು ನಮ್ಮ ಪಾರ್ಟಿ ಎಂದು ದ.ಕ ಬಿಜೆಪಿ ಟಿಕೆಟ್ ರೇಸ್ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು,  ಅರುಣ್ ಪುತ್ತಿಲ, ಸತ್ಯಜಿತ್ ಸುರತ್ಕಲ್ ಎಲ್ಲರೂ ನಮ್ಮ ಪಕ್ಷದ ಒಳ್ಳೆಯ ಕಾರ್ಯಕರ್ತರು ಎಲ್ಲರನ್ನು ಗಣಣೆಗೆ ತೆಗದುಕೊಂಡು, ಒಂದು ಅಭ್ಯರ್ಥಿಯನ್ನ ರಾಜ್ಯ ಹಾಗೂ ಕೇಂದ್ರ ನಾಯಕರು ಆಯ್ಕೆ ಮಾಡ್ತಾರೆ ಎಂದರು.

 

Advertisement
Tags :
indiakotashrinivaspoojariLatestNewsmangaluruNewsKannadaPOLITICSRAJYASABHASiddharamayya
Advertisement
Next Article