ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಲೀವ್ ಇನ್ ರಿಲೇಶನ್ ಶಿಪ್​ನಲ್ಲಿದ್ದ ವ್ಯಕ್ತಿಯನ್ನೇ ಕೊಲೆ ಮಾಡಿದ ಮಹಿಳೆ

ಓರ್ವ ಮಹಿಳೆ ತಾನು ಲೀವ್ ಇನ್ ರಿಲೇಶನ್ ಶಿಪ್​ನಲ್ಲಿದ್ದ ವ್ಯಕ್ತಿಯನ್ನೇ ಕೊಲೆ ಮಾಡಿರೋ ಘಟನೆ ಕೋಲ್ಕತ್ತಾದ ಅಪಾರ್ಟ್​ಮೆಂಟ್​ ನಲ್ಲಿ ನಡೆದಿದೆ.
08:51 AM Mar 02, 2024 IST | Gayathri SG

ಕೋಲ್ಕತ್ತಾ: ಓರ್ವ ಮಹಿಳೆ ತಾನು ಲೀವ್ ಇನ್ ರಿಲೇಶನ್ ಶಿಪ್​ನಲ್ಲಿದ್ದ ವ್ಯಕ್ತಿಯನ್ನೇ ಕೊಲೆ ಮಾಡಿರೋ ಘಟನೆ ಕೋಲ್ಕತ್ತಾದ ಅಪಾರ್ಟ್​ಮೆಂಟ್​ ನಲ್ಲಿ ನಡೆದಿದೆ.

Advertisement

ಸಾರ್ಥಕ್ ದಾಸ್ (32) ಕೊಲೆಯಾದ ವ್ಯಕ್ತಿ. ಸಂಹತಿ ಪೌಲ್ ಕೊಲೆ ಮಾಡಿದ ಆರೋಪಿ. ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಈ ಜೋಡಿ ಪ್ರೀತಿಸಲು ಆರಂಭಿಸಿ ಇಬ್ಬರು ಲಿವ್ ಇನ್ ರಿಲೇಶನ್ ಶಿಪ್​ನಲ್ಲಿದ್ದರು. ಇನ್ನು ಸಂಹತಿ ಪೌಲ್​ಗೆ ಈ ಹಿಂದೆ ಮದುವೆಯಾಗಿ ಒಂದು ಗಂಡು ಮಗು ಕೂಡ ಇತ್ತು. ಬಳಿಕ ಮೊದಲ ಪತಿಯಿಂದ ವಿಚ್ಛೇದನ ಪಡೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಪರಿಚಯ ಆಗಿದ್ದ ಸಾರ್ಥಕ್ ದಾಸ್ ಜೊತೆ ಇದ್ದಳು. ಆದರೆ ಕಳೆದ ಬುಧವಾರ ದಾಸ್ ಮತ್ತು ಪಾಲ್ ನಡುವೆ ಗಲಾಟೆ ನಡೆದಿದ್ದು ಸಂಹತಿ ಪೌಲ್ ಕೋಪದಲ್ಲಿ ಸಾರ್ಥಕ್ ದಾಸ್ ಎದೆಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾಳೆ.

ಸದ್ಯ ಕೊಲೆ ಆರೋಪದ ಮೇಲೆ ಸಂಹತಿ ಪೌಲ್ ಅನ್ನು ಬಂಧಿಸಲಾಗಿದೆ.

Advertisement

Advertisement
Tags :
LatestNewsNewsKannadaಕೊಲೆಕೋಲ್ಕತ್ತಾ
Advertisement
Next Article