ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಮದರಸಾಗಳೇ ಭಯೋತ್ಪಾದಕರ ಅಡಗು ತಾಣಗಳಾಗಿವೆ : ಶರಣ್ ಪಂಪ್ ವೆಲ್

  ಇತ್ತೀಚೆಗೆ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್‌ ಸ್ಪೋಟ ವಿಚಾರ ಹಿನ್ನೆಲೆ, ಭಯೋತ್ಪಾದಕನ ಹುಡುಕಾಟ ನೆಡಯುತ್ತ ಇದೆ. ಈ ಸಂಬಂಧ ಮಂಗಳೂರಿನ ಹಿಂದೂ ಮುಖಂಡ ಮಾತನಾಡಿ, ರಾಜ್ಯದಲ್ಲಿ ಮುಸ್ಲಿಂ ಮಕ್ಕಳಿಗೆ ಶಿಕ್ಷಣ ಪ್ರಸಾರ ಮಾಡುವ ಮದರಸಾಗಳೇ ಭಯೋತ್ಪಾದಕರ ಅಡಗು ತಾಣಗಳಾಗಿವೆ. ಭಯೋತ್ಪಾದಕರಿಗೆ ಮೌಲ್ವಿಗಳು ಶಿಕ್ಷಣ ನೀಡುತ್ತಿದ್ದಾರೆ. ಹೀಗಾಗಿ, ರಾಷ್ಟ್ರೀಯ ತನಿಖಾ ದಳ ಸಿಬ್ಬಂದಿ ಮಸೀದಿ ಹಾಗೂ ಮದರಸಾಗಳಲ್ಲಿ ಹುಡುಕಿದರೆ ರಾಮೇಶ್ವರಂ ಕೆಫೆ ಬಾಂಬರ್ ಸಿಗುತ್ತಾನೆ ಎಂದು ಹೇಳಿದ್ದಾರೆ.
03:32 PM Mar 10, 2024 IST | Nisarga K
ಮದರಸಾಗಳೇ ಭಯೋತ್ಪಾದಕರ ಅಡಗು ತಾಣಗಳಾಗಿವೆ :ಶರಣ್ ಪಂಪ್ ವೆಲ್

 ಮಂಗಳೂರು:  ಇತ್ತೀಚೆಗೆ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್‌ ಸ್ಪೋಟ ವಿಚಾರ ಹಿನ್ನೆಲೆ, ಭಯೋತ್ಪಾದಕನ ಹುಡುಕಾಟ ನೆಡಯುತ್ತ ಇದೆ. ಈ ಸಂಬಂಧ ಮಂಗಳೂರಿನ ಹಿಂದೂ ಮುಖಂಡ ಮಾತನಾಡಿ, ರಾಜ್ಯದಲ್ಲಿ ಮುಸ್ಲಿಂ ಮಕ್ಕಳಿಗೆ ಶಿಕ್ಷಣ ಪ್ರಸಾರ ಮಾಡುವ ಮದರಸಾಗಳೇ ಭಯೋತ್ಪಾದಕರ ಅಡಗು ತಾಣಗಳಾಗಿವೆ. ಭಯೋತ್ಪಾದಕರಿಗೆ ಮೌಲ್ವಿಗಳು ಶಿಕ್ಷಣ ನೀಡುತ್ತಿದ್ದಾರೆ. ಹೀಗಾಗಿ, ರಾಷ್ಟ್ರೀಯ ತನಿಖಾ ದಳ ಸಿಬ್ಬಂದಿ ಮಸೀದಿ ಹಾಗೂ ಮದರಸಾಗಳಲ್ಲಿ ಹುಡುಕಿದರೆ ರಾಮೇಶ್ವರಂ ಕೆಫೆ ಬಾಂಬರ್ ಸಿಗುತ್ತಾನೆ ಎಂದು ಹೇಳಿದ್ದಾರೆ.

Advertisement

ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಕುಂದಲಹಳ್ಳಿಯಲ್ಲಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಮಾಡಿದ ಶಂಕಿತ ಉಗ್ರನನ್ನು ಬಂಧಿಸಬೇಕಾದರೆ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಪೊಲೀಸರು ರಾಜ್ಯದಲ್ಲಿರುವ ಎಲ್ಲ ಮದರಸಾಗಳನ್ನು ಶೋಧನೆ ಮಾಡಬೇಕು. ಯಾಕೆಂದರೆ, ಮದರಸಗಳೇ ಭಯೋತ್ಪಾದಕರ ತಾಣವಾಗಿದೆ. ಭಯೋತ್ಪಾದಕರಿಗೆ ಮೌಲ್ವಿಗಳು ಶಿಕ್ಷಣ ನೀಡುತ್ತಿದ್ದಾರೆ. ಬಾಂಬರ್ ಮಸೀದಿಗೆ ಹೋಗಿ ನಮಾಜ್ ಮಾಡಿ ಬಟ್ಟೆ ಬದಲಿಸಿದ್ದಾನೆ ಎಂದು ಆರೋಪ ಮಾಡಿದರು.

ರಾಮೇಶ್ವರಂ ಕೆಫೆ ಬಾಂಬರ್ ಬಳ್ಳಾರಿಯಲ್ಲಿ ಓಡಾಟ ಮಾಡಿದ್ದಾನೆ. ನಂತರ, ಭಟ್ಕಳಕ್ಕೆ ಬಂದಿದ್ದಾನೆ ಅನ್ನೋ ಮಾಹಿತಿಯನ್ನು ಎನ್‌ಐಎ ನೀಡಿದ್ದಾರೆ. ಎನ್ ಐ ಎ ಪೊಲೀಸ್ ನವರು ಕರ್ನಾಟಕದಲ್ಲಿರುವ ಮದರಸ ಮಸೀದಿ ಮೇಲೆ ದಾಳಿ ಮಾಡಿ ತನಿಖೆ ಮಾಡಬೇಕು. ಇನ್ನು ಬಾಂಬರ್ ಭಟ್ಕಳದಲ್ಲಿದ್ದಾನೆ ಎಂದು ಮಾಹಿತಿ ಬಂದಿದೆ. ಹೀಗಾಗಿ, ಭಟ್ಕಳದಲ್ಲಿರುವ ಎಲ್ಲ ಮಸೀದಿಗಳು ಹಾಗೂ ಮದರಸಗಳ ಮೇಲೆ ದಾಳಿ ಮಾಡಿದರೆ, ಶೇ.100ಕ್ಕೆ 100ರಷ್ಟು ಬಾಂಬರ್ ಎಲ್ಲಿದ್ದಾನೆ ಎಂಬುದರ ಬಗ್ಗೆ ಮಾಹಿತಿ ಸಿಗುತ್ತದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಇನ್ನು ರಾಜ್ಯದ ಮದರಸಗಳು ಭಯೋತ್ಪಾದಕರ ತಾಣವಾಗುತ್ತಿದೆ. ಭಯೋತ್ಪಾದಕರಿಗೆ ಶಿಕ್ಷಣ ನೀಡುವ ಕೆಲಸವನ್ನ ಕರ್ನಾಟಕದ ಕೆಲವು ಮದರಸಗಳು ಮಾಡುತ್ತಿದೆ. ಅಲ್ಲಿದ್ದಂತಹ ಮೌಲ್ವಿಗಳು ಮಾಡುತ್ತಿದ್ದಾರೆ. ಎನ್‌ಐಎ ಹಾಗೂ ಪೊಲೀಸ್ ಇಲಾಖೆಗೆ ಬಲವಾಗಿ ಆಗ್ರಹ ಮಾಡುತ್ತೇನೆ. ತಾವು ಕರ್ನಾಟಕದಲ್ಲಿರುವ ಎಲ್ಲ ಮಸೀದಿಗಳು ಹಾಗೂ ಮದರಸಾಗಳ ಮೇಲೆ ದಾಳಿ ಮಾಡಿದರೆ, ರಾಮೇಶ್ವರಂ ಕೆಫೆಯ ಮೇಲೆ ಬಾಂಬ್ ಹಾಕಿದ ಆರೋಪಿ ಸಿಗುತ್ತಾನೆ ಎಂದು ಹಿಂದೂ ಮುಖಂಡ ಶರಣ್ ಪಂಪ್‌ವೆಲ್ ಹೇಳಿದ್ದಾರೆ.

 

 

Advertisement
Tags :
BLASTbombCASEhidingLatestNewsmadarasmangaluruNewsKannadaplaceSharan pumpwellTERRORIST
Advertisement
Next Article