For the best experience, open
https://m.newskannada.com
on your mobile browser.
Advertisement

ಶಿವರಾತ್ರಿಯ ದಿನ ಈ ಕೆಲಸ ಮಾಡಿದ್ರೆ ಕೈ ತುಂಬಾ ಸಂಪತ್ತು ಪ್ರಾಪ್ತಿಯಾಗಲಿದೆ

ಹಿಂದೂ ಧರ್ಮದಲ್ಲಿ ಮಹಾ ಶಿವರಾತ್ರಿ ಹಬ್ಬವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಮಹಾಶಿವರಾತ್ರಿಯ ದಿನದಂದು ಶಿವನ ದೇವಾಲಯಗಳಿಗೆ ಭಕ್ತರ ದಂಡೇ ಹರಿದುಬರುತ್ತದೆ. ಈ ದಿನ ಮಹಾದೇವನನ್ನು ವಿವಿಧ ರೀತಿಯಲ್ಲಿ ಆರಾಧಿಸಲಾಗುತ್ತದೆ. ಮನೆ-ದೇವಸ್ಥಾನ ಎಲ್ಲಾ ಕಡೆ ಶಿವ ಆರಾಧನೆಯೇ ನಮಗೆ ಕಾಣಿಸುತ್ತದೆ ಹಾಗೂ ಕೇಳಿಸುತ್ತದೆ. ನಾವು ಶಿವರಾತ್ರಿಯಂದು ಕೆಲವೊಂದು ಕೆಲಸಗಳನ್ನ ಮಾಡುವುದರಿಂದ ಆರ್ಥಿಕವಾಗಿ ಉತ್ತಮ ಲಾಭಗಳಿಸಬಹುದು.
07:35 AM Mar 07, 2024 IST | Ashitha S

ಈ ದಿನ ನೀವು ತಪ್ಪದೇ, ಶಿವನಿಗೆ ನೀರು ಇಷ್ಟವಾಗುತ್ತದೆ ಎನ್ನಳಾಗುತ್ತದೆ. ಹಾಗಾಗಿ ಶಿವನಿಗೆ ನೀರಿನ ಅಭಿಷೇಕ ಮಾಡುವುದರಿಂದ ಬಹಳ ಒಳ್ಳೆಯ ಫಲಗಳು ಸಿಗುತ್ತದೆ. ಶಿವನನ್ನ ಈ ರೀತಿ ಪೂಜಿಸುವುದು ಖಂಡಿತವಾಗಿಯೂ ಫಲಿತಾಂಶವನ್ನು ನೀಡುತ್ತದೆ. ಅಲ್ಲದೇ, ನಿಮ್ಮ ಜೀವನದಲ್ಲಿ ಸಾಲದ ಸಮಸ್ಯೆ ಇದ್ದರೂ ಸಹ ಈ ನೀರಿನ ಅಭಿಷೇಕ ಎಲ್ಲಾ ಸಮಸ್ಯೆಗಳಿಗೆ ಸಹ ಮುಕ್ತಿ ನೀಡುತ್ತದೆ.

ಇನ್ನು ಈ ಶುಭ ದಿನದಂದು ಶಿವನನ್ನು ಬಿಲ್ವಪತ್ರೆಗಳಿಂದ ಪೂಜಿಸುವ ಮತ್ತು ಶಿವ ಮಂತ್ರಗಳನ್ನು ಪಠಿಸುವವರಿಗೆ ಮೋಕ್ಷ ಸಿಗುತ್ತದೆ.

Advertisement

ಶಿವನ ಪಂಚಾಕ್ಷರಿ ಮಂತ್ರವನ್ನು 108 ಬಾರಿ ಜಪಿಸಿ. ಶಿವಪೂಜೆಯ ನಂತರ ಎಳ್ಳು, ಅಕ್ಕಿ ಮತ್ತು ತುಪ್ಪದ ನೈವೇದ್ಯವನ್ನು ಅರ್ಪಿಸಬೇಕು. ಮಹಾ ಶಿವರಾತ್ರಿಯ ದಿನದಂದು ಕಟ್ಟುನಿಟ್ಟಾಗಿ ಜಾಗರಣೆ ಮಾಡಬೇಕು ಎನ್ನುವ ನಿಯಮವಿದೆ, ನೀವು ಜಾಗರಣೆ ಮಾಡುವುದರಿಂದ ನಿಮ್ಮ ಎಲ್ಲಾ ಕನಸುಗಳು ನನಸಾಗುತ್ತದೆ ಹಾಗೂ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ.

ಶಿವನಿಗೆ ಅನೇಕ ಹೂವುಗಳು ಎಂದರೆ ಬಹಳ ಇಷ್ಟ. ಹಾಗಾಗಿ ಮಹಾ ಶಿವರಾತ್ರಿಯಂದು ನೀವು ಮಕರಂದಗಳು ಅದರೆ ಸಿಹಿರಸದಿಂದ ತುಂಬಿರುವ ಹೂವುಗಳನ್ನ ಅರ್ಪಣೆ ಮಾಡಿ ಪೂಜಿಸಬೇಕು. ಈ ಹೂವುಗಳನ್ನ ಅರ್ಪಣೆ ಮಾಡಿದರೆ ನಿಮ್ಮ ಒತ್ತಡ ಹಾಗೂ ಗೊಂದಲಗಳಿಂದ ಮುಕ್ತಿ ಸಿಗುತ್ತದೆ.

ಶಿವರಾತ್ರಿಯ ಸಮಯದಲ್ಲಿ ಯಾವುದೇ ಕಾರಣಕ್ಕೂ ನೀವು ಅನ್ನ, ಈರುಳ್ಳಿ ಹಾಗೂ ಬೆಳ್ಳುಳ್ಳಿಯಂತಹ ಆಹಾರಗಳನ್ನ ತಿನ್ನಬಾರದು. ಈ ದಿನ ಸಾಧ್ಯವಾದರೆ ಉಪವಾಸ ಮಾಡಬೇಕು ಅಥವಾ ಹಣ್ಣು ಸೇವನೆ ಮಾಡಬೇಕು. ನಿಮಗೆ ಆರೋಗ್ಯ ಸಮಸ್ಯೆ ಇದ್ದು ಉಪವಾಸ ಮಾಡಲು ಸಾಧ್ಯವಿಲ್ಲ ಎಂದರೆ ಸಾತ್ವಿಕ ಆಹಾರಗಳನ್ನ ಮಾತ್ರ ಸೇವಿಸಿ.

ಆದರೆ ನೀವು ಆ ದಿನ ಯಾವುದೇ ಕಾರಣಕ್ಕೂ ಕಪ್ಪು ಬಣ್ಣದ ಬಟ್ಟೆಯನ್ನು ಧರಿಸಬೇಡಿ. ನಂಬಿಕೆಗಳ ಪ್ರಕಾರ ಶಿವನಿಗೆ ಕಪ್ಪು ಬಣ್ಣ ಇಷ್ಟವಿಲ್ಲ. ವಿಶೇಷವಾಗಿ ಈ ದಿನ ಪರಮೇಶ್ವರನನ್ನು ಪೂಜಿಸುವ ಮತ್ತು ಉಪವಾಸ ಮಾಡುವ ಭಕ್ತರು ಕಪ್ಪು ಅಥವಾ ಗಾಢ ಬಣ್ಣದ ಬಟ್ಟೆಗಳನ್ನು ಧರಿಸಬಾರದು. ಈ ದಿನ ಶುಭ್ರವಾದ, ಒಗೆದ ಬಿಳಿ, ಹಳದಿ ಬಟ್ಟೆಗಳನ್ನು ಧರಿಸಬೇಕು.

Advertisement
Tags :
Advertisement