ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ನಟ ಮಹೇಶ್ ಬಾಬು ಪುತ್ರಿ ಹೆಸರಿನಲ್ಲಿ ವಂಚನೆ

ನಟ ಮಹೇಶ್ ಅವರ ಮಗಳು ಸಿತಾರಾ ಗಟ್ಟಿಮನೇನಿ ಅವರ ಜನಪ್ರಿಯತೆಯನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಕೆಲವು ವಂಚಕರು ಅಮಾಯಕರ ವಂಚನೆಗೆ ಇಳಿದಿದ್ದಾರೆ. ಮಹೇಶ್ ಬಾಬು ಅವರ ತಂಡ ಈಗಾಗಲೇ ಈ ಕುರಿತಂತೆ ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೆ, ಸಿತಾರಾ ಅವರ ತಾಯಿ, ಮಹೇಶ್ ಬಾಬು ಪತ್ನಿ ನಮ್ರತಾ ಶಿರೋಡ್ಕರ್ ಈ ವಂಚನೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಎಚ್ಚರಿಕೆ ಸಂದೇಶವನ್ನು ಸಹ ಹಂಚಿಕೊಂಡಿದ್ದಾರೆ.
04:27 PM Feb 11, 2024 IST | Gayathri SG

ನಟ ಮಹೇಶ್ ಅವರ ಮಗಳು ಸಿತಾರಾ ಗಟ್ಟಿಮನೇನಿ ಅವರ ಜನಪ್ರಿಯತೆಯನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಕೆಲವು ವಂಚಕರು ಅಮಾಯಕರ ವಂಚನೆಗೆ ಇಳಿದಿದ್ದಾರೆ. ಮಹೇಶ್ ಬಾಬು ಅವರ ತಂಡ ಈಗಾಗಲೇ ಈ ಕುರಿತಂತೆ ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೆ, ಸಿತಾರಾ ಅವರ ತಾಯಿ, ಮಹೇಶ್ ಬಾಬು ಪತ್ನಿ ನಮ್ರತಾ ಶಿರೋಡ್ಕರ್ ಈ ವಂಚನೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಎಚ್ಚರಿಕೆ ಸಂದೇಶವನ್ನು ಸಹ ಹಂಚಿಕೊಂಡಿದ್ದಾರೆ.

Advertisement

ಓರ್ವ ವ್ಯಕ್ತಿ , ಸಿತಾರಾ ಗಟ್ಟಿಮನೇನಿಯ ಚಿತ್ರ, ವಿಡಿಯೋ ಹಾಗೂ ಹೆಸರು ಬಳಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಕೆಲವು ಲಿಂಕ್​ಗಳನ್ನು ಹಂಚಿಕೊಳ್ಳುತ್ತಿದ್ದಾನೆ. ಅಲ್ಲದೆ ಬಂಡವಾಳ ಹೂಡಿಕೆ ಯೋಜನೆಗಳ ಮಾರಾಟ, ಲೋನ್ ಕೊಡಿಸುವುದಾಗಿ ಹೇಳಿ ಲಿಂಕ್ ಕಳಿಸುವುದು, ಷೇರು ಮಾರುಕಟ್ಟೆಗೆ ಸಂಬಂಧಿಸಿದ ಹೂಡಿಕೆ ಐಡಿಯಾಗಳನ್ನು ಕೊಡುವುದಾಗಿ ಹೇಳಿಕೊಂಡು ಹಲವರನ್ನು ಸಂಪರ್ಕ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಇದೀಗ ಸಿತಾರಾ ಗಟ್ಟಿಮನೇನಿ ಹೆಸರಿನಲ್ಲಿ ವಂಚನೆ ಎಸಗುತ್ತಿರುವವರ ಮೂಲ ಪತ್ತೆ ಹಚ್ಚಿ ಬಂಧಿಸುವ ಪ್ರಯತ್ನ ಜಾರಿಯಲ್ಲಿದೆ. ಜನರು ಸಾಮಾಜಿಕ ಜಾಲತಾಣದಲ್ಲಿ ತಮಗೆ ಬಂದ ಹೂಡಿಕೆ ಮಾಹಿತಿಯನ್ನು ನಿಜವೆಂದು ನಂಬುವ ಮೊದಲು ಅದರ ಸತ್ಯಾಸತ್ಯತೆಯನ್ನು ಪರಿಶೀಲನೆ ಮಾಡಿಕೊಳ್ಳಿ ಎಂದು ಮಹೇಶ್ ಬಾಬು ತಂಡ ಹೇಳಿದೆ.

Advertisement

Advertisement
Tags :
LatestNewsNewsKannadaಮಹೇಶ್ ಬಾಬು
Advertisement
Next Article