For the best experience, open
https://m.newskannada.com
on your mobile browser.
Advertisement

ನಾಡಿನೆಲ್ಲೆಡೆ ಮಕರ ಸಂಕ್ರಾಂತಿ ಸಂಭ್ರಮ: ಮಕರ ಜ್ಯೋತಿ ಯಾವಾಗ ?

ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸಿದಾಗ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿಯನ್ನು ದೇಶದ ವಿವಿಧ ರಾಜ್ಯಗಳಲ್ಲಿ ಒಂದೊಂದು ವಿಧವಾಗಿ ಆಚರಣೆ ಮಾಡಲಾಗುತ್ತದೆ. ಉತ್ತರಾಯಣ, ಪೊಂಗಲ್, ಸಂಕ್ರಾಂತಿ ಮುಂತಾದ ಹಲವು ಹೆಸರುಗಳಿಂದ ಈ ಹಬ್ಬವನ್ನು ಕರೆಯಲಾಗುತ್ತದೆ.
10:43 AM Jan 14, 2024 IST | Ashitha S
ನಾಡಿನೆಲ್ಲೆಡೆ ಮಕರ ಸಂಕ್ರಾಂತಿ ಸಂಭ್ರಮ  ಮಕರ ಜ್ಯೋತಿ ಯಾವಾಗ

ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸಿದಾಗ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿಯನ್ನು ದೇಶದ ವಿವಿಧ ರಾಜ್ಯಗಳಲ್ಲಿ ಒಂದೊಂದು ವಿಧವಾಗಿ ಆಚರಣೆ ಮಾಡಲಾಗುತ್ತದೆ. ಉತ್ತರಾಯಣ, ಪೊಂಗಲ್, ಸಂಕ್ರಾಂತಿ ಮುಂತಾದ ಹಲವು ಹೆಸರುಗಳಿಂದ ಈ ಹಬ್ಬವನ್ನು ಕರೆಯಲಾಗುತ್ತದೆ.

Advertisement

ಪ್ರತಿ ವರ್ಷ ಜನವರಿ 14 ರಂದು ಮಕರ ಸಂಕ್ರಾಂತಿ ಬರುತ್ತದೆ. ಆದರೆ, ಈ ವರ್ಷದ ದಿನಾಂಕದ ಬಗ್ಗೆ ಜನರಲ್ಲಿ ಸಾಕಷ್ಟು ಗೊಂದಲಗಳಿವೆ. ಕೆಲವರು ಮಕರ ಸಂಕ್ರಾಂತಿ ಜನವರಿ 14ರಂದು ಎಂದು ಹೇಳಿದರೆ, ಇನ್ನೂ ಕೆಲವರು 15ರಂದು ಎನ್ನುತ್ತಾರೆ.

ಇನ್ನು ಮಕರ ಸಂಕ್ರಾಂತಿಯು ಹಿಂದೂ ಸುಗ್ಗಿಯ ಹಬ್ಬವಾಗಿದ್ದು, ಇದನ್ನು ಭಾರತದಾದ್ಯಂತ ಆಚರಿಸಲಾಗುತ್ತದೆ. ಮುಖ್ಯವಾಗಿ ಸಂಕ್ರಾಂತಿ ಎಂದರೆ ಸೂರ್ಯನ ಚಲನೆ, ಮಕರ ಸಂಕ್ರಾಂತಿ ಎಂದರೆ ವರ್ಷದಲ್ಲಿ ಬರುವ ಎಲ್ಲಾ 12 ಸಂಕ್ರಾಂತಿಗಳಲ್ಲಿ ಪ್ರಮುಖವಾಗಿದೆ.

Advertisement

ಸಂಕ್ರಾತಿಯ ದಿನದಂದು ಮುಖ್ಯವಾಗಿ ಮೊದಲು ರಾತ್ರಿ ದೀರ್ಘವಾಗಿರುತ್ತದೆ ಮತ್ತು ಹಗಲು ಚಿಕ್ಕದಾಗಿರುತ್ತದೆ. ಅಲ್ಲದೇ ಋತುಗಳು ಬದಲಾಗಲು ಪ್ರಾರಂಭಿಸುತ್ತವೆ.ಅದರಲ್ಲಿಯೂ ಭಾರತದಲ್ಲಿ ಸಂಕ್ರಾತಿ ಹಬ್ಬವನ್ನುನ ರೈತರು ಅತ್ಯಂತ ವಿಜ್ರಂಭಣೆಯಿಂದ ಆಚರಿಸುತ್ತಾರೆ.

ಮುಖ್ಯವಾಗಿ ಈ ವರ್ಷ ಮಕರ ಸಂಕ್ರಾಂತಿ ಹಬ್ಬವು ಜನವರಿ 15ರಂದು ಬರುತ್ತದೆ. ಈ ಮೂಲಕ ಸೋಮವಾರದಂದು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಸಂಕ್ರಾತಿ ಹಬ್ಬದ ಶುಭ ಮುಹೂರ್ತ ಇದೆ ಎಂದು ಹೇಳಲಾಗಿದೆ.ಈ ಪ್ರಕಾರ ಪ್ರತಿ ವರ್ಷ ಸಂಕ್ರಾಂತಿ ಹಬ್ಬವನ್ನು ಪುಷ್ಯ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ಆಚರಿಸಲಾಗುತ್ತದೆ.
ದೃಕ್‌ ಪಂಚಾಂಗದ ಪ್ರಕಾರ ಬೆಳಿಗ್ಗೆ 7.15ಕ್ಕೆ ಪುಣ್ಯಕಾಲ ಆರಂಭವಾಗಿ ಸಂಜೆ 7.46ಕ್ಕೆ ಮುಕ್ತಾಯವಾಗಲಿದೆ. ಮಹಾ ಪುಣ್ಯಕಾಲ ಬೆಳಿಗ್ಗೆ 7.15ಕ್ಕೆ ಆರಂಭವಾದರೆ ಜನವರಿ 15ರ ಬೆಳಿಗ್ಗೆ 9 ಗಂಟೆಗೆ ಮುಕ್ತಾಯವಾಗಲಿದೆ.

ಸಾಮಾನ್ಯವಾಗಿ ಮಕರ ಸಂಕ್ರಾಂತಿಯ ಸಮಯದಲ್ಲಿ ಸ್ನಾನ ಮತ್ತು ದಾನಗಳನ್ನು ಮಾಡಲಾಗುತ್ತದೆ. ಆದರೆ ಸಂಕ್ರಾಂತಿ ಸ್ನಾನ ಮತ್ತು ದಾನವನ್ನು ರಾತ್ರಿಯಲ್ಲಿ ಮಾಡಬಾರದು. ಆದ್ದರಿಂದ ಉದಯತಿಥಿ ಎಂದರೆ ಸೂರ್ಯೋದಯವಾದಾಗ ಮಕರ ಸಂಕ್ರಾಂತಿ ಸ್ನಾನ ಮಾಡಬೇಕು ಎಂದು ಪಂಚಾಂಗ ಹೇಳುತ್ತದೆ.ಇನ್ನು ಮಕರ ಜ್ಯೋತಿ ಬಗ್ಗೆ ಹೇಳುವುದಾದರೇ. .   ಪ್ರತಿ ವರ್ಷದಂತೆ ಈ ಬಾರಿಯು ಶಬರಿಮಲೆಯಲ್ಲಿ ಮಕರ ಜ್ಯೋತಿ ಬೆಳಕನ್ನು ನೋಡಲು ಕೇವಲ ದಕ್ಷಿಣ ಭಾರತ ರಾಜ್ಯಗಳಿಂದಷ್ಟೇ ಅಲ್ಲದೆ ಉತ್ತರ ಭಾರತದ ರಾಜ್ಯಗಳಿಂದಲೂ ಅಸಂಖ್ಯಾತ ಭಕ್ತರು ಆಗಮಿಸಿದ್ದಾರೆ.

ಪಶ್ಚಿಮ ಘಟ್ಟಗಳ ದೊರೆ ರಾಜ ರಾಜಶೇಖರ ಮಕ್ಕಳಿಲ್ಲದೆ ಕೊರಗುತ್ತಿದ್ದ. ಒಂದು ದಿನ ಕಾಡಿಗೆ ಬೇಟೆಗೆಂದು ಬಂದ ಸಂದರ್ಭದಲ್ಲಿ ಶಿವಲಿಂಗದ ಮುಂದೆ ಕೊರಳಲ್ಲಿ ಮಣಿಯನ್ನು ಧರಿಸಿದ ಮಹಾ ತೇಜಸ್ವಿ ಕಂದಮ್ಮ ಅಳುತ್ತಿರುವುದು ಕಂಡುಬರುತ್ತದೆ. ತಕ್ಷಣವೇ ರಾಜನು ದೇವರೇ ಕರುಣಿದ ಪ್ರಸಾದ ಎಂದು ಭಾವಿಸಿ ಅರಮನೆಗೆ ಮಗುವನ್ನು ಕರೆದುಕೊಂಡು ತೆರಳುತ್ತಾರೆ. ಇದಾದ ಬಳಿಕ 12 ವರ್ಷಗಳ ಕಾಲ ಅರಮನೆಯಲ್ಲಿ ಜೀವನ ಸಾಗಿಸಿದ ಮಣಿಕಂಠ, ಮುಂದೆ ಮಹಿಷಿಯ ಮರ್ಧನ ಮಾಡಿ ಲೋಕಕ್ಕೆ ಅಯ್ಯಪ್ಪನೆಂದು ಪ್ರಸಿದ್ಧಿಗೊಳ್ಳುತ್ತಾರೆ.

ಇದಾದ ಬಳಿಕ ಶಬರಿಗಿರಿಯಲ್ಲಿ ತನಗಾಗಿ ದೇವಾಲಯವನ್ನು ನಿರ್ಮಿಸಲು ರಾಜನಿಗೆ ಮನವಿ ಮಾಡುತ್ತಾರೆ. ಅಷ್ಟೇ ಅಲ್ಲದೆ, ಪರಶುರಾಮರಿಂದ ಸೃಷ್ಟಿಗೊಂಡ ಪ್ರತಿಮೆಯನ್ನು ಅಲ್ಲಿ ಸ್ಥಾಪಿಸಿ ಇಂದಿಗೂ ಆ ಮೂರ್ತಿಯನ್ನು ಪೂಜಿಲಾಗುತ್ತದೆ. ಅಷ್ಟೇ ಅಲ್ಲದೆ, ಮಕರ ಸಂಕ್ರಾಂತಿಯಂದು ಮಕರ ಜ್ಯೋತಿ ರೂಪದಲ್ಲಿ ಭಕ್ತರಿಗೆ ಕಾಣಿಸಿಕೊಳ್ಳುತ್ತೇನೆ ಎಂದು ಅಯ್ಯಪ್ಪ ಅಭಯನೀಡಿ ಶಬರಿಗಿರಿಯಲ್ಲಿ ನೆಲೆಯಾಗುತ್ತಾರೆ.

ಇನ್ನು ಶಬರಿಮಲೆ ದೇವಸ್ಥಾನದ ಮೂಲಗಳ ಪ್ರಕಾರ ಜನವರಿ 15ರಂದು ಪೊನ್ನಂಬಲ ಮೇಡುವಿನಲ್ಲಿ ಸಂಜೆ 6.30ಕ್ಕೆ ಮಕರ ಜ್ಯೋತಿ ದರ್ಶನವಾಗಲಿದೆ.  ಪಂದಳಂ ಅರಮನೆಯಿಂದ ತರಲಾಗುವ ತಿರುವಾಭರಣ ಸಹಿತ ದೀಪಾರಾಧನೆಯ ಬಳಿಕ ಮಕರಜ್ಯೋತಿ ದರ್ಶನವಾಗಲಿದೆ.

ಹರ್ಷದ ಮೊದಲ ಹಬ್ಬದ ನಿಮ್ಮ ಬದುಕನ್ನು ಬಂಗಾರವಾಗಿಸಲಿ. ಸದಾ ಸಂತೋಷ ನಿಮ್ಮ ಜೀವನದಲ್ಲಿ ತುಂಬಿರಲಿ.ಈ ಸುಗ್ಗಿವೂ ನಿಮ್ಮ ಹಾಗೂ ನಿಮ್ಮ ಕುಟುಂಬದವರಿಗೆ ಸುಖ-ಶಾಂತಿ, ನೆಮ್ಮದಿ ತರಲಿ. ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು.
Advertisement
Tags :
Advertisement