ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಕಂಕನಾಡಿ ವಸತಿಗೃಹದಲ್ಲಿ ಬೆಂಕಿ ಅವಘಡ: ವ್ಯಕ್ತಿ ಸಾವು

ನಗರದ ಕಂಕನಾಡಿ ಬೆಂದೂರ್ ವೆಲ್‌ನ 'ಹೋಟೆಲ್ ರೆಸಿಡೆನ್ಸಿ' ವಸತಿಗೃಹದಲ್ಲಿ ಬುಧವಾರ ಮಧ್ಯರಾತ್ರಿ(ನ.22) ಸಂಭವಿಸಿದ ಬೆಂಕಿ ದುರಂತದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
11:37 AM Nov 23, 2023 IST | Gayathri SG

ಮಂಗಳೂರು: ನಗರದ ಕಂಕನಾಡಿ ಬೆಂದೂರ್ ವೆಲ್‌ನ 'ಹೋಟೆಲ್ ರೆಸಿಡೆನ್ಸಿ' ವಸತಿಗೃಹದಲ್ಲಿ ಬುಧವಾರ ಮಧ್ಯರಾತ್ರಿ(ನ.22) ಸಂಭವಿಸಿದ ಬೆಂಕಿ ದುರಂತದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

Advertisement

ನಗರದ ಬಿಕರ್ನಕಟ್ಟೆಯ ಯಶರಾಜ್ ಸುವರ್ಣ (43) ಮೃತರು ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ. ಅವರು ನ. 15ರಿಂದ ಈ ಕೊಠಡಿಯನ್ನು ಬಾಡಿಗೆಗೆ ಪಡೆದು ಅಲ್ಲೇ ಉಳಿದುಕೊಂಡಿದ್ದರು ಎಂದು ಹೋಟೆಲ್ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

'ಕಂಕನಾಡಿ ಬೆಂದೂರ್ ವೆಲ್ ನ ವಸತಿಗೃಹವೊಂದರ ಎರಡನೇ ಮಹಡಿಯಲ್ಲಿದ್ದ ಕೊಠಡಿಗೆ ಬೆಂಕಿ ಹೊತ್ತಿರುವ ಬಗ್ಗೆ ಬುಧವಾರ ರಾತ್ರಿ. 12.35 ರ ವೇಳೆಗೆ ಮಾಹಿತಿ ಬಂದಿತ್ತು. ನಮ್ಮ‌ ಸಿಬ್ಬಂದಿ ಸ್ಥಳಕ್ಕೆ ತಲುಪಿ, ಬೆಂಕಿ ನಂದಿಸಿದರು. ಬೆಂಕಿಯಿಂದ ಭಾಗಶಃ ಸುಟ್ಟುಹೋಗಿದ್ದ ವ್ಯಕ್ತಿಯೊಬ್ಬರನ್ನು ರಕ್ಷಿಸುವ ಪ್ರಯತ್ನ ಮಾಡಿದೆವು. ಆದರೆ, ಅವರನ್ನು ಉಳಿಸಿಕೊಳ್ಳಕು ಸಾಧ್ಯವಾಗಲಿಲ್ಲ ಎಂದು ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ರಂಗನಾಥ್ ತಿಳಿಸಿದ್ದಾರೆ. ಇನ್ನು ಈ ಘಟನೆ ಆತ್ಮಹತ್ಯೆಯೋ..? ಶಾಟ್ ಸರ್ಕ್ಯೂಟ್ ನಿಂದ ಆಗಿದೆಯೆ ಎಂದು ತನಿಖೆ ನಡೆಯುತ್ತಿದೆ. ಘಟನಾ ಸ್ಥಳಕ್ಕೆ ಮಂಗಳೂರು ಕದ್ರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement

Advertisement
Tags :
LatestNewsNewsKannadaಕಂಕನಾಡಿಮಂಗಳೂರುವಸತಿಗೃಹ
Advertisement
Next Article