ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

‘ಕರಿಮಣಿ ಮಾಲೀಕ’ನಾಗಲು ರಿಕ್ಷಾಗೆ ಬಯೋಡೇಟಾ ಅಂಟಿಸಿದ ಭೂಪ

ಈಗ ಆಟೋ ಚಾಲಕರಾಗಿದ್ದರೆ, ರೈತರಾಗಿದ್ದರೆ ಮದುವೆಯಾಗಲು ಯುವತಿಯರು ಹಿಂದೇಟು ಹಾಕುತ್ತಾರೆ. ಈ ವಿಚಾರ ಈಗ ಸಾಮಾನ್ಯವಾಗಿದೆ. ಮಧ್ಯಪ್ರದೇಶದಲ್ಲಿ ಇದರಿಂದ ಬೇಸತ್ತ ಆಟೋ ಚಾಲಕನೊಬ್ಬ, ತನ್ನ ಇ-ರಿಕ್ಷಾಗೆ ಫೋಟೊ ಹಾಗೂ ಸ್ವವಿವರವುಳ್ಳ ಬಯೋಡೇಟಾ ಅಂಟಿಸಿದ್ದಾನೆ. ಈ ಫೋಟೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗಿದೆ.
04:01 PM Feb 19, 2024 IST | Ashitha S

ಭೋಪಾಲ್‌: ಈಗ ಆಟೋ ಚಾಲಕರಾಗಿದ್ದರೆ, ರೈತರಾಗಿದ್ದರೆ ಮದುವೆಯಾಗಲು ಯುವತಿಯರು ಹಿಂದೇಟು ಹಾಕುತ್ತಾರೆ. ಈ ವಿಚಾರ ಈಗ ಸಾಮಾನ್ಯವಾಗಿದೆ. ಮಧ್ಯಪ್ರದೇಶದಲ್ಲಿ ಇದರಿಂದ ಬೇಸತ್ತ ಆಟೋ ಚಾಲಕನೊಬ್ಬ, ತನ್ನ ಇ-ರಿಕ್ಷಾಗೆ ಫೋಟೊ ಹಾಗೂ ಸ್ವವಿವರವುಳ್ಳ ಬಯೋಡೇಟಾ ಅಂಟಿಸಿದ್ದಾನೆ. ಈ ಫೋಟೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗಿದೆ.

Advertisement

ಹೌದು. . . ಮಧ್ಯಪ್ರದೇಶದ ದಾಮೋಹ್‌ನಲ್ಲಿ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿರುವ 29 ವರ್ಷದ ದೀಪೇಂದ್ರ ರಾಥೋಡ್‌ ಅವರು ಇಂತಹ ಉಪಾಯ ಮಾಡಿದ್ದಾರೆ. ಬಯೋಡೇಟಾ, ಫೋಟೊ ಇರುವ ದೊಡ್ಡದೊಂದು ಹೋರ್ಡಿಂಗ್‌ಅನ್ನು ತಮ್ಮ ಆಟೋಗೆ ಅಳವಡಿಸಿದ್ದಾರೆ.

ಆಟೋಗೆ ಫೋಟೊ, ಬಯೋಡೇಟಾ ಅಳವಡಿಸಿರುವ ಕುರಿತು ಸುದ್ದಿಗಾರರೊಂದಿಗೆ ದೀಪೇಂದ್ರ ರಾಥೋಡ್‌ ಮಾತನಾಡಿದ್ದಾರೆ. “ನಾನು ಒಂದಷ್ಟು ಹುಡುಗಿಯರನ್ನು ನೋಡಿದೆ. ಅವರು ಹಣ-ಆಸ್ತಿ ನೋಡಿದರು. ಆಟೋ ಡ್ರೈವರ್‌ ಎಂದ ಕೂಡಲೇ ಒಂದಷ್ಟು ಹುಡುಗಿಯರು ಮೂಗು ಮುರಿದರು. ನನ್ನ ಸಂಬಂಧಿಕರೂ ಹುಡುಗಿ ಹುಡುಕುವುದನ್ನು ಬಿಟ್ಟರು. ಹಾಗಾಗಿ, ಬಯೋಡೇಟಾ, ಫೋಟೊವನ್ನು ಆಟೋಗೆ ಅಳವಡಿಸಿದ್ದೇವೆ. ಯಾವುದಾದರು ಹುಡುಗಿ ಸಿಕ್ಕರೆ ಮದುವೆಯಾಗಲು ಸಿದ್ಧನಿದ್ದೇನೆ” ಎಂದು ಹೇಳಿದ್ದಾರೆ.

Advertisement

“ನಮ್ಮ ಜಾತಿಯಲ್ಲಿ ಹುಡುಗಿಯರ ಸಂಖ್ಯೆ ಕಡಿಮೆ ಇದೆ. ಹಾಗಂತ, ನಾನು ಜಾತಿ-ಧರ್ಮದ ಗಡಿ ಹಾಕಿಕೊಂಡಿಲ್ಲ. ನಾನು ಯಾವುದೇ ಜಾತಿ-ಧರ್ಮದ ಹುಡುಗಿಯನ್ನು ಮದುವೆಯಾಗಲು ಸಿದ್ಧನಿದ್ದೇನೆ. ನನಗೆ ಮದುವೆಯಾಗುವುದು ಅಷ್ಟೇ ಮುಖ್ಯ” ಎಂದು ತಿಳಿಸಿದ್ದಾರೆ. “ಓದಲು-ಬರೆಯಲು ಬರುತ್ತದೆ. ದುಡಿದು ಹಾಕಲು ಆಟೋ ಇದೆ. ಮದುವೆಯಾಗುವ ಹುಡುಗಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ” ಎನ್ನುವ ದೀಪೇಂದ್ರ ರಾಥೋಡ್‌ ಅವರನ್ನು ವರಿಸುವವರು ಸಂಪರ್ಕಿಸಬಹುದಾಗಿದೆ.

Advertisement
Tags :
AutorickshawbrideindiaLatestNewsNewsKannadaViralpostಭೋಪಾಲ್
Advertisement
Next Article