ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಮಣಿಪಾಲ: ಬೈಕ್- ಸ್ಕೂಟರ್ ಮಧ್ಯೆ ಭೀಕರ ಅಪಘಾತ; ಯುವತಿ ಸಾವು, ಮೂವರಿಗೆ ಗಾಯ

ಬೈಕ್‌ ಮತ್ತು ಸ್ಕೂಟರ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಯುವತಿಯೊಬ್ಬರು ಮೃತಪಟ್ಟು, ಮೂವರು ಗಾಯಗೊಂಡ ಘಟನೆ ಮಣಿಪಾಲದ ರೋಯಲ್ ಅಂಬೆಸಿ ಅಪಾರ್ಟ್‌ಮೆಂಟ್ ಸಮೀಪ ನಡೆದಿದೆ.
12:20 PM Nov 22, 2023 IST | Gayathri SG

ಮಣಿಪಾಲ: ಬೈಕ್‌ ಮತ್ತು ಸ್ಕೂಟರ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಯುವತಿಯೊಬ್ಬರು ಮೃತಪಟ್ಟು, ಮೂವರು ಗಾಯಗೊಂಡ ಘಟನೆ ಮಣಿಪಾಲದ ರೋಯಲ್ ಅಂಬೆಸಿ ಅಪಾರ್ಟ್‌ಮೆಂಟ್ ಸಮೀಪ ನಡೆದಿದೆ.

Advertisement

ಮೃತರನ್ನು ಹಿರಿಯಡಕ ನಿವಾಸಿ ಸುಶ್ಮಿತಾ(19) ಎಂದು ಗುರುತಿಸಲಾಗಿದೆ. ಬೈಕ್ ಸವಾರ ರಾಹುಲ್, ಸ್ಕೂಟರ್ ಸವಾರರಾದ ಅನೂಜ್ ಮತ್ತು ಆದರ್ಶ ಎಂಬವರು ಗಾಯಗೊಂಡಿದ್ದಾರೆ. ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ರಸ್ತೆಯ ಕಾಯಿನ್ ಸರ್ಕಲ್ ನಿಂದ ಸಿಂಡಿಕೇಟ್ ಸರ್ಕಲ್ ಕಡೆಗೆ ಹೋಗುತ್ತಿದ್ದಾಗ ಬೈಕಿಗೆ, ಅದೇ ದಿಕ್ಕಿನಲ್ಲಿ ಬಂದ ಸ್ಕೂಟರ್ ಡಿಕ್ಕಿ ಹೊಡೆದಿದೆ.

ಇದರಿಂದ ರಸ್ತೆಗೆ ಬಿದ್ದು ನಾಲ್ವರು ಸವಾರರು ಗಾಯಗೊಂಡರು. ಇವರಲ್ಲಿ ಗಂಭೀರವಾಗಿ ಗಾಯಗೊಂಡ ಸುಶ್ಮಿತಾ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರು. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Advertisement
Tags :
BreakingNewsLatestNewsNewsKannadaಮಣಿಪಾಲ
Advertisement
Next Article