ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಕರ್ನಾಟಕದ ಸ್ಟಾರ್ ಆಟಗಾರ ಮನೀಶ್ ಪಾಂಡೆಗೆ ಬೌಲಿಂಗ್​ ನಿಷೇಧ

ಕರ್ನಾಟಕದ ಸ್ಟಾರ್ ಆಟಗಾರ ಮನೀಶ್ ಪಾಂಡೆ ಮೇಲೆ ಬೌಲಿಂಗ್​ನಿಷೇಧ ಹೇರಲಾಗಿದೆ. ಬಿಸಿಸಿಐ ಪ್ರಕಟಿಸಿರುವ ಅನುಮಾನಸ್ಪದ ಬೌಲಿಂಗ್ ಶೈಲಿ ಪಟ್ಟಿಯಲ್ಲಿ ಮನೀಶ್ ಪಾಂಡೆ ಸೇರಿದಂತೆ ಒಟ್ಟು 8 ಆಟಗಾರರ ಹೆಸರು ಕಾಣಿಸಿಕೊಂಡಿದೆ.
01:09 PM Dec 17, 2023 IST | Ashitha S

ಮುಂಬೈ: ಕರ್ನಾಟಕದ ಸ್ಟಾರ್ ಆಟಗಾರ ಮನೀಶ್ ಪಾಂಡೆ ಮೇಲೆ ಬೌಲಿಂಗ್​ನಿಷೇಧ ಹೇರಲಾಗಿದೆ. ಬಿಸಿಸಿಐ ಪ್ರಕಟಿಸಿರುವ ಅನುಮಾನಸ್ಪದ ಬೌಲಿಂಗ್ ಶೈಲಿ ಪಟ್ಟಿಯಲ್ಲಿ ಮನೀಶ್ ಪಾಂಡೆ ಸೇರಿದಂತೆ ಒಟ್ಟು 8 ಆಟಗಾರರ ಹೆಸರು ಕಾಣಿಸಿಕೊಂಡಿದೆ.

Advertisement

ಇದರಲ್ಲಿ ಮನೀಶ್ ಪಾಂಡೆ ಹಾಗೂ ಕೆಎಲ್ ಶ್ರೀಜಿತ್ ಅವರಿಗೆ ಬೌಲಿಂಗ್ ಮಾಡುವುದನ್ನು ನಿಷೇಧಿಸಲಾಗಿದೆ.

ಅಂದರೆ ಈ ಇಬ್ಬರು ಆಟಗಾರರ ಬೌಲಿಂಗ್ ಶೈಲಿಯಲ್ಲಿ ದೋಷಗಳಿವೆ. ಹೀಗಾಗಿ ಇವರನ್ನು ಬೌಲರ್​ಗಳಾಗಿ ಬಳಸಿಕೊಳ್ಳುವಂತಿಲ್ಲ ಎಂದು ಬಿಸಿಸಿಐ ಸೂಚಿಸಿದೆ. ಹಾಗಾಗಿ ಇನ್ಮುಂದೆ ಮನೀಶ್ ಪಾಂಡೆಯನ್ನು ಯಾವುದೇ ತಂಡ ಬೌಲರ್​ ಆಗಿ ಬಳಸಿಕೊಳ್ಳುವುದಿಲ್ಲ. ಒಂದು ವೇಳೆ ಅವರು ಬೌಲಿಂಗ್ ಶೈಲಿಯಲ್ಲಿ ಬದಲಾವಣೆ ಮಾಡಿಕೊಂಡು ಟೆಸ್ಟ್​ ಪಾಸ್ ಆದರೆ ಮಾತ್ರ ಅವಕಾಶ ದೊರೆಯಲಿದೆ.

Advertisement

ಕ್ರಿಕೆಟ್​ ಅಂಗಳದಲ್ಲಿ ಮನೀಶ್ ಪಾಂಡೆ ಬ್ಯಾಟ್ಸ್​ಮನ್ ಆಗಿಯೇ ಗುರುತಿಸಿಕೊಂಡಿದ್ದಾರೆ. ಹಾಗೆಯೇ ದೇಶೀಯ ಟೂರ್ನಿಗಳಲ್ಲಿ ಅವರು ಇದುವರೆಗೆ 193.5 ಓವರ್​ಗಳನ್ನು ಮಾಡಿದ್ದಾರೆ. ಈ ವೇಳೆ 23 ವಿಕೆಟ್​ಗಳನ್ನು ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿಯೇ ಅವರ ಮೇಲಿನ ನಿಷೇಧ ಕೂಡ ಪ್ರಾಮುಖ್ಯತೆ ಪಡೆದುಕೊಂಡಿದೆ.

 

 

Advertisement
Tags :
GOVERNMENTindiaLatestNewsManish PandeyNewsKannadasportsಮನೀಶ್ ಪಾಂಡೆ
Advertisement
Next Article