ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಐಪಿಎಲ್ ಹರಾಜಿನಲ್ಲಿ ಇಬ್ಬರು ಕರ್ನಾಟಕದ ಆಟಗಾರರು ಅನ್​ಸೋಲ್ಡ್

ಐಪಿಎಲ್ ಹರಾಜು ಪ್ರಕ್ರಿಯೆ ದುಬೈನಲ್ಲಿನಡೆಯುತ್ತಿದೆ. ಆರ್​ಸಿಬಿ ತಂಡದ ಮಾಜಿ ಆಟಗಾರ ವನಿಂದು ಹಸರಂಗ ಅವರನ್ನು ಸನ್​ ರೈಸರ್ಸ್ ಹೈದರಾಬಾದ್ 1.50 ಕೋಟಿಗೆ ಖರೀದಿ ಮಾಡಿದೆ. ಅದೇ ರೀತಿ ಮೊದಲ ಸುತ್ತಿನಲ್ಲಿ ಕನ್ನಡಿಗರಾದ ಮನೀಷ್ ಪಾಂಡೆ ಮತ್ತು ಕರುಣ್ ನಾಯರ್ ಅನ್​ಸೋಲ್ಡ್​ ಆಗಿದ್ದಾರೆ ಎಂದು ತಿಳಿದು ಬಂದಿದೆ
05:37 PM Dec 19, 2023 IST | Ashitha S

ದುಬೈ: ಐಪಿಎಲ್ ಹರಾಜು ಪ್ರಕ್ರಿಯೆ ದುಬೈನಲ್ಲಿನಡೆಯುತ್ತಿದೆ. ಆರ್​ಸಿಬಿ ತಂಡದ ಮಾಜಿ ಆಟಗಾರ ವನಿಂದು ಹಸರಂಗ ಅವರನ್ನು ಸನ್​ ರೈಸರ್ಸ್ ಹೈದರಾಬಾದ್ 1.50 ಕೋಟಿಗೆ ಖರೀದಿ ಮಾಡಿದೆ. ಅದೇ ರೀತಿ ಮೊದಲ ಸುತ್ತಿನಲ್ಲಿ ಕನ್ನಡಿಗರಾದ ಮನೀಷ್ ಪಾಂಡೆ ಮತ್ತು ಕರುಣ್ ನಾಯರ್ ಅನ್​ಸೋಲ್ಡ್​ ಆಗಿದ್ದಾರೆ ಎಂದು ತಿಳಿದು ಬಂದಿದೆ

Advertisement

ಕರ್ನಾಟಕದ ಮನೀಷ್ ಪಾಂಡೆ ಹಾಗೂ ಕರುಣ್ ನಾಯರ್​ಗೆ ಭಾರೀ ನಿರಾಸೆ ಆಗಿದೆ. ಇಬ್ಬರು ಆಟಗಾರರನ್ನು ಖರೀದಿ ಮಾಡಲು ಯಾವುದೇ ಫ್ರಾಂಚೈಸಿ ಮುಂದಾಗಿಲ್ಲ. ಪರಿಣಾಮ ಸೇಲ್ ಆಗದೇ ಹಾಗೇ ಉಳಿದುಕೊಂಡಿದ್ದಾರೆ. ಅದೇ ರೀತಿ ಆಸ್ಟ್ರೇಲಿಯಾದ ದಂತಕತೆ ಸ್ಟೀವನ್ ಸ್ಮಿತ್ ಕೂಡ ಹರಾಜಾಗಿಲ್ಲ ಎಂದು ವರದಿಯಾಗಿದೆ.

ಇತ್ತ 2024ರ ಐಪಿಎಲ್​ ಹರಾಜಿನಲ್ಲಿ ಆಸ್ಟ್ರೇಲಿಯಾ ಟೀಮ್​ ಆಟಗಾರರು ಭಾರೀ ಮೊತ್ತಕ್ಕೆ ಸೇಲ್ ಆಗಿದ್ದಾರೆ. ಇಡೀ ಐಪಿಎಲ್​ ಇತಿಹಾಸದಲ್ಲೇ ಮಿಚೆಲ್ ಸ್ಟಾರ್ಕ್​ ಅವರು ಬಹು ದೊಡ್ಡ ಬೆಲೆಗೆ ಹರಾಜು ಆಗಿ ದಾಖಲೆ ನಿರ್ಮಿಸಿದ್ದಾರೆ. ಆಸ್ಟ್ರೇಲಿಯಾದ ಫೇಸ್ ಬೌಲರ್​ ಆಗಿರುವ ಮಿಚೆಲ್ ಸ್ಟಾರ್ಕ್​​ಗೆ ಮಣೆ ಹಾಕಿರುವ ಕೋಲ್ಕತ್ತ ನೈಟ್​ ರೈಡರ್ಸ್​ ಫ್ರಾಂಚೈಸಿ ಬರೋಬ್ಬರಿ 24 ಕೋಟಿ ರೂಪಾಯಿಗಳನ್ನ ಕೊಟ್ಟು ತಂಡಕ್ಕೆ ಸ್ವಾಗತ ಕೋರಿದೆ.

Advertisement

Advertisement
Tags :
indiaIPLIPL AUCTIONLatestNewsManish PandeyNewsKannadaಅನ್​ಸೋಲ್ಡ್ಕರುಣ್ ನಾಯರ್ನವದೆಹಲಿ
Advertisement
Next Article