ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ನಾಳೆಯಿಂದ 10 ದಿನಗಳವರೆಗೆ ʻಮೆಸ್ಕಾಂʼ ‌ಆನ್‌ಲೈನ್‌ ಸೇವೆ ಸ್ಥಗಿತ: ವಿದ್ಯುತ್‌ ಇಲಾಖೆ

ಇದೀಗ ವಿದ್ಯುತ್‌ ಇಲಾಖೆ ಒಂದು ಕಹಿ ಸುದ್ಧಿ ನೀಡಿದೆ, ಸಾಫ್ಟ್​​ವೇರ್​ ಅಪ್ಡೇಟ್​ ಹಿನ್ನೆಲೆ ಎಸ್ಕಾಂಗಳಲ್ಲಿ 10 ದಿನಗಳ ಕಾಲ ಎಲ್ಲ ಅನ್​​ಲೈನ್​ ಸೇವೆಗಳು ಸ್ಥಗಿತಗೊಳ್ಳಲಿದೆ ಅಂತ ಇಂಧನ ಇಲಾಖೆ ಪ್ರಕಟಣೆ ಹೊರಡಿಸಿದೆ. ಅದರಂತೆ ಬೆಸ್ಕಾಂ, ಜೆಸ್ಕಾಂ, ಸೆಸ್ಕ್, ಮೆಸ್ಕಾಂ, ಹೆಸ್ಕಾಂನಲ್ಲಿ ಆನ್​ಲೈನ್ ಸೇವೆಗಳು ಸಿಗುವುದಿಲ್ಲ ಎಂದು ಈ ಮೂಲಕ ತಿಳಿಸಲಾಗಿದೆ.
03:33 PM Mar 09, 2024 IST | Nisarga K
ನಾಳೆಯಿಂದ 10 ದಿನಗಳವರೆಗೆ ʻಮೆಸ್ಕಾಂʼ ‌ಆನ್‌ಲೈನ್‌ ಸೇವೆ ಸ್ಥಗಿತ: ವಿದ್ಯುತ್‌ ಇಲಾಖೆ

ಬೆಂಗಳೂರು:  ಇದೀಗ ವಿದ್ಯುತ್‌ ಇಲಾಖೆ ಒಂದು ಕಹಿ ಸುದ್ಧಿ ನೀಡಿದೆ, ಸಾಫ್ಟ್​​ವೇರ್​ ಅಪ್ಡೇಟ್​ ಹಿನ್ನೆಲೆ ಎಸ್ಕಾಂಗಳಲ್ಲಿ 10 ದಿನಗಳ ಕಾಲ ಎಲ್ಲ ಅನ್​​ಲೈನ್​ ಸೇವೆಗಳು ಸ್ಥಗಿತಗೊಳ್ಳಲಿದೆ ಅಂತ ಇಂಧನ ಇಲಾಖೆ ಪ್ರಕಟಣೆ ಹೊರಡಿಸಿದೆ. ಅದರಂತೆ ಬೆಸ್ಕಾಂ, ಜೆಸ್ಕಾಂ, ಸೆಸ್ಕ್, ಮೆಸ್ಕಾಂ, ಹೆಸ್ಕಾಂನಲ್ಲಿ ಆನ್​ಲೈನ್ ಸೇವೆಗಳು ಸಿಗುವುದಿಲ್ಲ ಎಂದು ಈ ಮೂಲಕ ತಿಳಿಸಲಾಗಿದೆ.

Advertisement

ಮಾರ್ಚ್ 10 ರಿಂದ 19 ರವರೆಗೆ‌ ರಾಜ್ಯದ ಎಲ್ಲ ಎಸ್ಕಾಂಗಳ ವಿದ್ಯುತ್ ಬಿಲ್‌ ಪಾವತಿ, ಹೊಸ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಕೆ ಸೇರಿ ಯಾವ ಆನ್​ಲೈನ್ ಸೇವೆಗಳು ಲಭ್ಯವಿರೋದಿಲ್ಲ. ಆದರೆ ವಿದ್ಯುತ್ ಪೂರೈಕೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ನಿರಂತರವಾಗಿ ವಿದ್ಯುತ್ ನೀಡಲಾಗುತ್ತದೆ. ಆದರೆ ಸಾಫ್ಟ್ ವೇರ್‌ ಅಪ್‌ಗ್ರೇಡ್‌ ಆಗುತ್ತಿರುವ ಕಾರಣ ಆನ್‌ಲೈನ್‌ ಮೂಲಕ ವಿದ್ಯುತ್‌ ಬಿಲ್‌ ಪಾವತಿ ಅಥವಾ ಹೊಸ ಅರ್ಜಿ ಸಲ್ಲಿಸಲು ಸಾಧ್ಯವಾಗುವುದು ಕಷ್ಟ ಎನ್ನಲಾಗಿದೆ.

ಸರ್ವರ್ ಅಪ್ ಗ್ರೇಡ್ ಆರಂಭವಾದ ಬಳಿಕ ಸ್ಥಿರಗೊಳ್ಳಲು 15 ದಿನಗಳ ಕಾಲಾವಕಾಶ ಇರುತ್ತದೆ. ಹೀಗಾಗಿ ಈ ವೇಳೆ ಕಾರ್ಯನಿರ್ವಹಣೆಯಲ್ಲಿ ಸ್ವಲ್ಪ ಮಟ್ಟದ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಇದಕ್ಕೆ ಗ್ರಾಹಕರು ಸಹಕರಿಸಬೇಕು ಎಂದು ಇಲಾಖೆ ಮನವಿ ಮಾಡಿದೆ.

Advertisement

Advertisement
Tags :
bengaluruBILLcurrentdepartmentELECTRICITYLatestNewsMESCOMNewsKannadaONLINE
Advertisement
Next Article