ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಮಿಥುನ್ ಚಕ್ರವರ್ತಿ ಆರೋಗ್ಯದಲ್ಲಿ ಚೇತರಿಕೆ: ಶೀಘ್ರವೇ ಡಿಸ್ಚಾರ್ಜ್

ಖ್ಯಾತ ನಟ ಹಾಗೂ ರಾಜಕಾರಣಿ ಮಿಥುನ್ ಚಕ್ರವರ್ತಿ ಅವರ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡಿದೆ. ಅವರ ಆರೋಗ್ಯ ಸುಧಾರಣೆ ಕಾಣುತ್ತಿದೆ. ಅವರಿಗೆ ಮಿದುಳಿನ ಸ್ಟ್ರೋಕ್ ಆಗಿತ್ತು ಎಂದು ತಿಳಿದು ಬಂದಿದೆ.
07:37 AM Feb 12, 2024 IST | Ashika S

ಮುಂಬೈ: ಖ್ಯಾತ ನಟ ಹಾಗೂ ರಾಜಕಾರಣಿ ಮಿಥುನ್ ಚಕ್ರವರ್ತಿ ಅವರ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡಿದೆ. ಅವರ ಆರೋಗ್ಯ ಸುಧಾರಣೆ ಕಾಣುತ್ತಿದೆ. ಅವರಿಗೆ ಮಿದುಳಿನ ಸ್ಟ್ರೋಕ್ ಆಗಿತ್ತು ಎಂದು ತಿಳಿದು ಬಂದಿದೆ.

Advertisement

ಶೀಘ್ರವೇ ಮಿಥುನ್ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ‘ಮಿಥುನ್ ಚಕ್ರವರ್ತಿ ಅವರು ಚೇತರಿಕೆ ಕಾಣುತ್ತಿದ್ದಾರೆ. ಡಿಸ್ಚಾರ್ಜ್​ ಮಾಡುವುದಕ್ಕೂ ಮೊದಲು ಕೆಲವು ಪರೀಕ್ಷೆಗಳನ್ನು ಮಾಡಬೇಕಿದೆ’ ಎಂದೂ ಹೇಳಿದ್ದಾರೆ.

ಮಿಥುನ್ ಚಕ್ರವರ್ತಿಗೆ ಈಗ 73 ವರ್ಷ ವಯಸ್ಸು. ಅವರಿಗೆ ಶನಿವಾರ (ಫೆಬ್ರವರಿ 10) ಎದೆ ಭಾಗದಲ್ಲಿ ನೋವು ಕಾಣಿಸಿಕೊಂಡಿತು. ಆ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಅವರು ಚೇತರಿಕೆ ಕಾಣುತ್ತಿದ್ದಾರೆ.

Advertisement

ಈ ಮಧ್ಯೆ ಮಿಥುನ್ ಅಡ್ಮಿಟ್ ಆಗಿರುವ ಕೋಲ್ಕತ್ತ ಆಸ್ಪತ್ರೆಗೆ ಹಲವರು ಭೇಟಿ ನೀಡುತ್ತಿದ್ದಾರೆ. ನಟಿ ದೇವಶ್ರೀ ರಾಯ್, ನಿರ್ದೇಶಕ ಪತಿಕೃತ್​ ಬಸು ಮೊದಲಾದವರು ಆಸ್ಪತ್ರೆಗೆ ಬಂದು ಹೋಗಿದ್ದಾರೆ.

ದೇವಶ್ರೀ ಅವರು ಮಿಥುನ್ ಆರೋಗ್ಯದ ಬಗ್ಗೆ ಅಪ್​ಡೇಟ್ ನೀಡಿದ್ದಾರೆ. ‘ಮಿಥುನ್​ ಚಕ್ರವರ್ತಿ ಅವರ ಆರೋಗ್ಯ ಸುಧಾರಿಸುತ್ತಿದೆ’ ಎಂದಿದ್ದಾರೆ ಅವರು.

Advertisement
Tags :
LatetsNewsNewsKanadaಆರೋಗ್ಯಚೇತರಿಕೆನಟಮಿಥುನ್​ ಚಕ್ರವರ್ತಿರಾಜಕಾರಣಿ
Advertisement
Next Article