ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ನಾಸಿರ್ ಹುಸೇನ್ ದೇಶಕ್ಕೆ ಆಪತ್ತು ತರುವ ವ್ಯಕ್ತಿ: ಶಾಸಕ ಯಶ್ ಪಾಲ್ ಸುವರ್ಣ

ನಾಸಿರ್ ಹುಸೇನ್ ದೇಶಕ್ಕೆ ಆಪತ್ತು ತರುವ ವ್ಯಕ್ತಿ. ಅವರು ರಾಜ್ಯಸಭೆ ಪ್ರವೇಶಿಸಿದ ನಂತರ ಗಂಡಾಂತರ ತರುವ ಸಾಧ್ಯತೆ ಇದೆ. ಹೀಗಾಗಿ ಅವರ ಹಿನ್ನೆಲೆ ಪರಿಶೀಲಿಸಬೇಕು ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಹೇಳಿದರು.
11:39 AM Mar 05, 2024 IST | Gayathri SG

ಉಡುಪಿ: ನಾಸಿರ್ ಹುಸೇನ್ ದೇಶಕ್ಕೆ ಆಪತ್ತು ತರುವ ವ್ಯಕ್ತಿ. ಅವರು ರಾಜ್ಯಸಭೆ ಪ್ರವೇಶಿಸಿದ ನಂತರ ಗಂಡಾಂತರ ತರುವ ಸಾಧ್ಯತೆ ಇದೆ. ಹೀಗಾಗಿ ಅವರ ಹಿನ್ನೆಲೆ ಪರಿಶೀಲಿಸಬೇಕು ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಹೇಳಿದರು.

Advertisement

ಪಾಕ್ ಪರ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾಸಿರ್ ಹುಸೇನ್ ಯಾರ ಸಹಕಾರದಿಂದ ವಿಧಾನಸೌಧ ಪ್ರವೇಶಿಸಿದ್ದರು ಎಂಬುವುದು ತನಿಖೆಯಾಗಬೇಕು. ಬಂಧಿತರಾದ ಮೂರು ಜನರ ಹಿನ್ನೆಲೆಯನ್ನು ತನಿಖೆ ಮಾಡಬೇಕು. ಮೂವರ ಹಿಂದೆ ಯಾರಿದ್ದಾರೆ ಅವರ ಮೇಲೂ ಕ್ರಮ ಆಗಬೇಕು ಎಂದು ಒತ್ತಾಯಿಸಿದ್ರು.

ಬಾಂಬ್ ಬ್ಲಾಸ್ಟಿಗೂ ಈ ಘೋಷಣೆಗೂ ನಂಟು ಇರುವ ಸಂಶಯ ಇದೆ. ಕೇಂದ್ರ ಸರ್ಕಾರಕ್ಕೆ ಹಿಂದುತ್ವಕ್ಕೆ ವಿರೋಧ ವ್ಯಕ್ತಪಡಿಸುವ ಹುನ್ನಾರ ನಡೆಯುತ್ತಿದೆ. ಹಿಂದುಗಳ ಮೃದು ಧೋರಣೆಯಿಂದ ಇಂತಹ ಕೃತ್ಯಗಳು ನಡೆಯುತ್ತಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಈಗಾಗಲೇ ನಾವು ಆಗ್ರಹ ಮಾಡಿದ್ದೇವೆ ಎಂದರು.

Advertisement

ಘಟನೆ ಬಗ್ಗೆ ಕಾಂಗ್ರೆಸ್ ನಾಯಕರು ಹೇಳಿಕೆ ಹಾಸ್ಯಸ್ಪದವಾಗಿದೆ. ಕಾಂಗ್ರೆಸ್ ನಾಯಕರು ತಮ್ಮ ಹೇಳಿಕೆಯನ್ನ ಪುನರ್ ಪರಿಶೀಲನೆ ಮಾಡಲಿ. ಪ್ರತಿಭಟಿಸಿದ ಉಡುಪಿ ಕಾಂಗ್ರೆಸ್ ನಾಯಕರಿಗೆ ಮುಖಭಂಗ ಆಗಿದೆ. ಅವರು ಬುರ್ಖಾ ಹಾಕಿ ತಿರುಗುವ ಪರಿಸ್ಥಿತಿ ನಿರ್ಮಾಣ ಆಗಿದೆ. ಇನ್ಮುಂದೆ ಕಾಂಗ್ರೆಸ್ ಇಂಡಿಯಾ ಅಲ್ಲ, ಕಾಂಗ್ರೆಸ್ ಮುಸ್ಲಿಂ ಎಂದು ಪಕ್ಷದ ಹೆಸರು ಬದಲಿಸಿಕೊಳ್ಳಬೇಕು. ಮುಸ್ಲಿಂ ಲೀಗ್ ಜೊತೆ ನೀವು ಕೈಜೋಡಿಸುವುದು ಸೂಕ್ತ. ಭಾರತದ ಸಂಸ್ಕೃತಿ ಪರಂಪರೆ ಜೊತೆ ನೀವು ಉಳಿಯಲು ಅರ್ಹರಲ್ಲ. ನೀವು ಪಾಕಿಸ್ತಾನಕ್ಕೋ ಬಾಂಗ್ಲಾದೇಶಕ್ಕೋ ಹೋಗುವುದು ಸೂಕ್ತ ಎಂದು ವಾಗ್ದಾಳಿ ನಡೆಸಿದ್ರು.

Advertisement
Tags :
BJPLatestNewsNewsKannadaYashpalsuvarnaಶಾಸಕ
Advertisement
Next Article