ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಬ್ಯಾಟರಿ ಕಳ್ಳತನ: ಆರೋಪಿಯಿಂದ ಒಟ್ಟು 3,90,000/ಮೌಲ್ಯದ ಸೊತ್ತು ವಶಕ್ಕೆ

ನಗರದ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬ್ಯಾಟರಿ ಕಳವು ಮಾಡಿದ ಆರೋಪಿಯನ್ನು ಕೊಣಾಜೆ ಪೊಲೀಸರು ದಸ್ತಗಿರಿ ಮಾಡಿ ಸ್ವಾಧೀನಪಡಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಜನವರಿ 29 ರಂದು ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಲಾರಿಗಳ ಬ್ಯಾಟರಿಗಳು ಕಳ್ಳತನವಾದ ಬಗ್ಗೆ ಪ್ರಕರಣ ದಾಖಲಾಗಿದೆ.
11:48 AM Feb 15, 2024 IST | Ashitha S

ಮಂಗಳೂರು: ನಗರದ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬ್ಯಾಟರಿ ಕಳವು ಮಾಡಿದ ಆರೋಪಿಯನ್ನು ಕೊಣಾಜೆ ಪೊಲೀಸರು ದಸ್ತಗಿರಿ ಮಾಡಿ ಸ್ವಾಧೀನಪಡಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಜನವರಿ 29 ರಂದು ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಲಾರಿಗಳ ಬ್ಯಾಟರಿಗಳು ಕಳ್ಳತನವಾದ ಬಗ್ಗೆ ಪ್ರಕರಣ ದಾಖಲಾಗಿದೆ.

Advertisement

ಈ ಪ್ರಕರಣದ ಆರೋಪಿಯನ್ನು ಕೊಣಾಜೆ ಪೊಲೀಸರು ಪತ್ತೆ ಕಾರ್ಯದಲ್ಲಿರುವಾಗ ಫೆ.14ರಂದು ಕೊಣಾಜೆ ಠಾಣಾ ಪಿ.ಎಸ್.ಐ ಅಶೋಕ ರವರು ಸಿಬ್ಬಂದಿಗಳಾದ ಸಂತೋಷ್,ಬಸವನಗೌಡ್ರ ಸುರೇಶ್ ಜೊತೆ ಈ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ರಿಯಾಜ್ ತಲಪಾಡಿನನ್ನು ನಾಟೇಕಲ್ ಬಳಿ ಆರೋಪಿ ಹಾಗೂ ಆತ ಕೃತ್ಯಕ್ಕೆ ಉಪಯೋಗಿದ ಸ್ಕೂಟಿ ನಂಬ್ರ-ಕೆ ಎ 19 ಹೆಚ್ ಜಿ 0399 ಸ್ವಾಧೀನಪಡಿಸಿಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಆರೋಪಿಯಿಂದ ಒಟ್ಟು 3,90,000/- ರೂ ಮೌಲ್ಯದ ವಾಹನ ಹಾಗೂ ಬ್ಯಾಟರಿಗಳನ್ನ ವಶಕ್ಕೆ ಪಡೆದುಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Advertisement

ಇನ್ನು ಆರೋಪಿಯನ್ನು ಕಜೆ ತಲಪಾಡಿ ಸೋಮೇಶ್ವರ ಬಳಿಯ ಉಳ್ಳಾಲ ತಾಲೂಕಿನ ರಿಯಾಜ್(30) ಎಂದು ಗುರುತಿಸಲಾಗಿದೆ. ಈ ಆರೋಪಿಯ ಪತ್ತೆ ಕಾರ್ಯದಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ ಅನುಪಮ್ ಅಗರವಾಲ್, ಐ.ಪಿ.ಎಸ್‌ರವರ ಮಾರ್ಗದರ್ಶನದಂತೆ ಕಾನೂನು & ಸುವ್ಯವಸ್ಥೆ ವಿಭಾಗದ ಡಿಸಿಪಿ ಶ್ರೀ ಸಿದ್ದಾರ್ಥ ಗೋಯಲ್ ಐ.ಪಿ.ಎಸ್ ಮತ್ತು ಅಪರಾಧ & ಸಂಚಾರ ವಿಭಾಗದ ಡಿಸಿಪಿ ಶ್ರೀ ದಿನೇಶ್‌ಕುಮಾರ್ ನಿರ್ದೇಶನದಂತೆ, ಮಂಗಳೂರು ದಕ್ಷಿಣ ವಿಭಾಗದ ಎ.ಸಿ.ಪಿ. ಶ್ರೀಮತಿ ಧನ್ಯ ಎನ್ ನಾಯಕ ರವರ ನೇತೃತ್ವದಲ್ಲಿ ಈ ಆರೋಪಿಯ ಮತ್ತು ಸೊತ್ತು ಪತ್ತೆಕಾರ್ಯದಲ್ಲಿ ಕೊಣಾಜೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ರವೀದ್ರ ಸಿ ಎಂ, ಪೊಲೀಸ್ ಉಪ ನಿರೀಕ್ಷಕರುಗಳಾದ ನಾಗರಾಜ್ ಎಸ್, ಪುನೀತ್ ಗಾಂವಕಾರ್, ಅಶೋಕ್, ಯಲ್ಲಾಲಿಂಗ, ಸಿಬ್ಬಂದಿಗಳಾದ ಸಂಜೀವ್ ASI ,ರೇಶ್ಯಾWHC ಸಂತೋಷ್ ಕೆ ಸಿ ಬಸವನಗೌಡ, ಸುರೇಶ್ ತಳವಾರ್ ರವರು ಇದ್ದರು.

Advertisement
Tags :
crimeLatestNewsNewsKannadaPOLICEಕಳ್ಳತನಮಂಗಳೂರು
Advertisement
Next Article