ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ದ.ಕನ್ನಡ ಕಾಂಗ್ರೆಸ್ ಅಭ್ಯರ್ಥಿ ಎದುರು ಬಿಜೆಪಿ ಅಭ್ಯರ್ಥಿ ಠುಸ್ : ಹಾಗಾಗಿ ಮೋದಿ ಎಂಟ್ರಿ !!

ದಕ್ಷಿಣ ಕನ್ನಡ ಕಾಂಗ್ರೆಸ್ ಅಭ್ಯರ್ಥಿ ಎದುರು ಬಿಜೆಪಿ ಅಭ್ಯರ್ಥಿ ಠುಸ್ ಆಗಿದೆ. ಪದ್ಮರಾಜ್ ಅಬ್ಬರದ ಎದುರು ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಂಕಾಗಿದ್ದಾರೆ. ಇದೆ ಕಾರಣಕ್ಕೆ ಬಿಜೆಪಿ ಮೋದಿ ಕರೆ ತರಲು ಮುಂದಾಯಿತೇ ಎಂದು ಕೆಲ ರಾಜಕೀಯ ಪಂಡಿತರ ಮಾತು
04:45 PM Apr 15, 2024 IST | Nisarga K
ದ.ಕನ್ನಡ ಕಾಂಗ್ರೆಸ್ ಅಭ್ಯರ್ಥಿ ಎದುರು ಬಿಜೆಪಿ ಅಭ್ಯರ್ಥಿ ಠುಸ್ : ಹಾಗಾಗಿ ಮೋದಿ ಎಂಟ್ರಿ !!

ಮಂಗಳೂರು: ದಕ್ಷಿಣ ಕನ್ನಡ ಕಾಂಗ್ರೆಸ್ ಅಭ್ಯರ್ಥಿ ಎದುರು ಬಿಜೆಪಿ ಅಭ್ಯರ್ಥಿ ಠುಸ್ ಆಗಿದೆ. ಪದ್ಮರಾಜ್ ಅಬ್ಬರದ ಎದುರು ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಂಕಾಗಿದ್ದಾರೆ. ಇದೆ ಕಾರಣಕ್ಕೆ ಬಿಜೆಪಿ ಮೋದಿ ಕರೆ ತರಲು ಮುಂದಾಯಿತೇ ಎಂದು ಕೆಲ ರಾಜಕೀಯ ಪಂಡಿತರ ಮಾತು.

Advertisement

ಮಂಗಳೂರಿನಲ್ಲಿ ಪದ್ಮ ರಾಜ್ V/S ಬ್ರಿಜೇಶ್ ಬದಲು ಪದ್ಮರಾಜ್ ಪೂಜಾರಿ V/S ನರೇಂದ್ರ ಮೋದಿ ಅನ್ನೋ ವಾತಾವರಣ ನಿರ್ಮಾಣವಾಗಿದೆ. ಇನ್ನೂ ಮೋದಿ ಬಂದ ಮೇಲೆಯೇ ಬಿಜೆಪಿ ಅಭ್ಯರ್ಥಿಯ ಭವಿಷ್ಯ ಬದಲಾಗಬಹುದು ಅನ್ನೋ ಲೆಕ್ಕಾಚಾರ. ಬಿಜೆಪಿಗರಿಗೆ ತಲೆನೋವಾದ ಬ್ರಿಜೇಶ್ ಚೌಟ ಪ್ರಚಾರ ಶೈಲಿ. ಯಾಕೆಂದರೇ ಜಿಲ್ಲೆಯಾದ್ಯಂತ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ರಾಮಯ್ಯರದ್ದೇ ಸದ್ದು ಜೋರಾಗಿದೆ. ಹೋದಲ್ಲಿ ಬಂದಲ್ಲಿ ಪದ್ಮರಾಜ್ ಹವಾ ಎದ್ದು ಕಾಣುತ್ತಿದೆ.

ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಎಲ್ಲಿದ್ದಾರೆ?ಎಂದು ದಕ್ಷಿಣ ಕನ್ನಡದ ಜನ ಕೇಳುತ್ತಿದ್ದಾರೆ. ಅಬ್ಬರದ ಪ್ರಚಾರವಿಲ್ಲ, ಬಿರುಸಿನ ಮತ ಬೇಟೆಯಿಲ್ಲ ಚುನಾವಣೆ ಹೊತ್ತಲ್ಲೇ ಚೌಟ ಮಂಕಾಗಿದ್ದಾರೆ. ಇದೆ ಪರಿಸ್ಥಿತಿ ಮುಂದುವರೆದರೆ ಚೌಟ ಗೆಲುವಿನ ಗತಿಯೇನು?. ಬಿಜೆಪಿ ಅಭ್ಯರ್ಥಿಯ ಪ್ರಚಾರದ ಶೈಲಿಯಿಂದ ಕಾರ್ಯಕರ್ತರಿಗೂ ನಿರುತ್ಸಾಹ ಬಂದಿದೆ.

Advertisement

ಹೀಗಾಗಿ ಕೇವಲ ಮೋದಿ ಹಾಗು ಕೇಂದ್ರದ ನಾಯಕತ್ವವನ್ನೇ ಕ್ಯಾಪ್ಟನ್ ಅವಲಂಬಿಸಿಕೊಂಡಿದ್ದಾರೆ. ಕ್ಯಾಪ್ಟನ್ ಉತ್ಸಾಹದಿಂದ ಮತಬೇಟೆ ನಡೆಸದೆ ಹೋದರೆ ಗೆಲುವು ಕಷ್ಟ ಸಾಧ್ಯ ಅನ್ನುತ್ತಿದ್ದಾರೆ ರಾಜಕೀಯ ಪಂಡಿತರು.

Advertisement
Tags :
BJPcampaignCongressELECTIONentryLatestNewsmangaluruNARENDRA MODINewsKarnataka
Advertisement
Next Article