ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಆರ್ಟಿಕಲ್ 370 ರದ್ದು ಎತ್ತಿ ಹಿಡಿದ ಸುಪ್ರೀಂ: ಪ್ರಧಾನಿ ಮೋದಿ ಫಸ್ಟ್ ರಿಯಾಕ್ಷನ್

ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ ಆರ್ಟಿಕಲ್ 370 ಅನ್ನು ರದ್ದು ಪಡಿಸಿದ್ದ ಕೇಂದ್ರ ಸರ್ಕಾರದ ನಿರ್ಧಾರವನ್ನು ಸುಪ್ರೀಂಕೋರ್ಟ್ ಇಂದು ಎತ್ತಿ ಹಿಡಿದಿದೆ. ಸುಪ್ರೀಂ ನ ಈ ತೀರ್ಪು ಪ್ರಧಾನಿ ಮೋದಿ ಸರ್ಕಾರಕ್ಕೆ ಸಿಕ್ಕ ಅತಿ ದೊಡ್ಡ ಜಯ. ಹೀಗಾಗಿ ಪ್ರಧಾನಿ ಮೋದಿ ಕೂಡ ಸುಪ್ರೀಂ ತೀರ್ಪಿಗೆ ಸಂತಸ ವ್ಯಕ್ತಪಡಿಸಿದ್ದಾರೆ.
02:23 PM Dec 11, 2023 IST | Ashitha S

ನವದೆಹಲಿ: ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ ಆರ್ಟಿಕಲ್ 370 ಅನ್ನು ರದ್ದು ಪಡಿಸಿದ್ದ ಕೇಂದ್ರ ಸರ್ಕಾರದ ನಿರ್ಧಾರವನ್ನು ಸುಪ್ರೀಂಕೋರ್ಟ್ ಇಂದು ಎತ್ತಿ ಹಿಡಿದಿದೆ. ಸುಪ್ರೀಂ ನ ಈ ತೀರ್ಪು ಪ್ರಧಾನಿ ಮೋದಿ ಸರ್ಕಾರಕ್ಕೆ ಸಿಕ್ಕ ಅತಿ ದೊಡ್ಡ ಜಯ. ಹೀಗಾಗಿ ಪ್ರಧಾನಿ ಮೋದಿ ಕೂಡ ಸುಪ್ರೀಂ ತೀರ್ಪಿಗೆ ಸಂತಸ ವ್ಯಕ್ತಪಡಿಸಿದ್ದಾರೆ.

Advertisement

ಸುಪ್ರೀಂಕೋರ್ಟ್‌ ತೀರ್ಪಿನ ಬಳಿಕ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ ಅವರು ಸಂವಿಧಾನದ 370ನೇ ವಿಧಿ ರದ್ದು ಮಾಡಿದ್ದನ್ನ ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಇದು ಭರವಸೆ, ಪ್ರಗತಿಯ ಘೋಷಣೆ. ಜಮ್ಮು ಕಾಶ್ಮೀರದ ನಮ್ಮ ಸೋದರಿಯರ ಒಗ್ಗಟ್ಟಿನ ಘೋಷಣೆ ಇದೇ ಆಗಿತ್ತು. ನಿಮ್ಮ ಕನಸುಗಳನ್ನು ಈಡೇರಿಸುವ ನಮ್ಮ ಬದ್ಧತೆ ಅಚಲ ಎಂದಿದ್ದಾರೆ.

ಸಂವಿಧಾನದ 370ನೇ ವಿಧಿಯಿಂದ ಸಮಾಜದ ನಿರ್ಲಕ್ಷಿತ, ಶೋಷಿತ ಸಮುದಾಯಗಳಿಗೆ ಪ್ರಗತಿಯ ಲಾಭ ಸಿಗಲಿದೆ. ಇಂದಿನ ತೀರ್ಪು ಕೇವಲ ಕಾನೂನಿನ ತೀರ್ಪು ಅಲ್ಲ. ಇದು ಭರವಸೆಯ ಬೆಳಕು, ಉಜ್ವಲ ಭವಿಷ್ಯದ ಭರವಸೆ. ಬಲಿಷ್ಠ, ಒಗ್ಗಟ್ಟಿನ ಭಾರತ ಕಟ್ಟುವ ನಮ್ಮ ಸಾಮೂಹಿಕ ತೀರ್ಮಾನದ ಒಡಂಬಡಿಕೆ. ಹೊಸ ಜಮ್ಮು ಕಾಶ್ಮೀರ ಉದಯವಾಗಲಿದ್ದು ಪ್ರಗತಿಯ ಫಲ ನಿಮಗೆ ತಲುಪಿಸಲು ಬದ್ಧ ಎಂದು ಮೋದಿ ಹೇಳಿದ್ದಾರೆ.

Advertisement

 

Advertisement
Tags :
GOVERNMENTindiaLatestNewsNewsKannadaಆರ್ಟಿಕಲ್ 370ನವದೆಹಲಿಪ್ರಧಾನಿ ನರೇಂದ್ರ ಮೋದಿಪ್ರಧಾನಿ ಮೋದಿ
Advertisement
Next Article