For the best experience, open
https://m.newskannada.com
on your mobile browser.
Advertisement

ಶಾರ್ಜಾ ದ ಪ್ರತಿಷ್ಠಿತ ಮಯೂರ ವಿಶ್ವ ಮಾನ್ಯ ಕನ್ನಡಿಗ ಪ್ರಶಸ್ತಿ ಮೋಹನ್ ನರಸಿಂಹ ಮೂರ್ತಿ ಮಡಿಲಿಗೆ

ಕರ್ನಾಟಕ ಸಂಘ ಶಾರ್ಜಾದ ಆಶ್ರಯದಲ್ಲಿ 2023 ನವೆಂಬರ್ 18 ರಂದು ಶಾರ್ಜಾ ಈವಾನ್ ಹೋಟೆಲ್ ನಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯೋತ್ಸವ, 21ನೇ ವಾರ್ಷಿಕೋತ್ಸವ ಮತ್ತು ಮಯೂರ ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ ಪ್ರದಾನ ಸಮಾರಂಭ ಅದ್ಧೂರಿಯಾಗಿ ನಡೆಯಿತು.
04:13 PM Nov 25, 2023 IST | Ramya Bolantoor
ಶಾರ್ಜಾ ದ ಪ್ರತಿಷ್ಠಿತ ಮಯೂರ ವಿಶ್ವ ಮಾನ್ಯ ಕನ್ನಡಿಗ ಪ್ರಶಸ್ತಿ ಮೋಹನ್ ನರಸಿಂಹ ಮೂರ್ತಿ ಮಡಿಲಿಗೆ

ಶಾರ್ಜಾ: ಕರ್ನಾಟಕ ಸಂಘ ಶಾರ್ಜಾದ ಆಶ್ರಯದಲ್ಲಿ 2023 ನವೆಂಬರ್ 18 ರಂದು ಶಾರ್ಜಾ ಈವಾನ್ ಹೋಟೆಲ್ ನಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯೋತ್ಸವ, 21ನೇ ವಾರ್ಷಿಕೋತ್ಸವ ಮತ್ತು ಮಯೂರ ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ ಪ್ರದಾನ ಸಮಾರಂಭ ಅದ್ಧೂರಿಯಾಗಿ ನಡೆಯಿತು.

Advertisement


ಕರ‍್ಯಕಾರಿ ಸಮಿತಿಯ ಸರ್ವ ಸದಸ್ಯರು ಕನ್ನಡ ಧ್ವಜಾರೋಹಣ, ಜ್ಯೋತಿ ಬೆಳಗಿಸಿ, ಸ್ವಾಗತದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಯು.ಎ.ಇ.ಯ ವಿವಿಧ ತಂಡಗಳಾದ ಸಿಂಫೋನಿ ಮ್ಯೂಸಿಕ್ ಸ್ಕೂಲ್, ಬಿಲ್ಲವಾಸ್ ಫ್ಯಾಮಿಲಿ, ರಸ್ ಅಲ್ ಕೈಮಾ ಕರ್ನಾಟಕ ಸಂಘ, ನೃತ್ಯ ಕಣ್ಮಣಿಗಳು, ರಮಣ ಲಾಸ್ಯ, ಪದ್ಮಶಾಲಿ ಸಮುದಾಯ, ಗೋಲ್ಡಲ್ ಸ್ಟಾರ್ ಮ್ಯೂಸಿಕ್ ಶಾರ್ಜಾ, ಇವರುಗಳಿಂದ ಆಕರ್ಷಕ ಜಾನಪದ ನೃತ್ಯ, ಮಂಗಳೂರಿನಿಂದ ಆಗಮಿಸಿದ ಗಾಯಕ ಮಹ್ಮದ್ ಇಕ್ಬಾಲ್ ಮತ್ತು ಹರೀಶ್ ಶೇರಿಗಾರ್ ಮತ್ತು ಸನ್ನಿಧಿ ವಿಶ್ವನಾಥ್ ಅವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು.

ಶಾರ್ಜಾ ಕರ್ನಾಟಕ ಸಂಘದ ದ್ವಿದಶಮಾನೋತವದ ಸವಿ ನೆನೆಪಿಗಾಗಿ ಗಣೇಶ್ ರೈ ಪ್ರಧಾನ ಸಂಪಾದಕತ್ವದಲ್ಲಿ, ಸ್ಮರ ಸಂಚಿಕೆ ಸಮಿತಿಯ ಆಶ್ರಯದಲ್ಲಿ ಮುದ್ರಣವಾಗಿದ್ದ "ಮಯೂರ" ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಕರ್ನಾಟಕ ಸಂಘ ಶಾರ್ಜಾ ದ ಪ್ರತಿಷ್ಠಿತ ಮಯೂರ ವಿಶ್ವ ಮಾನ್ಯ ಕನ್ನಡಿಗ ಪ್ರಶಸ್ತಿ ಸಮಾಜ ಸೇವೆಗಾಗಿ ಮೋಹನ್ ನರಸಿಂಹಮೂರ್ತಿ ರವರಿಗೆ ಪ್ರಧಾನ ಮಾಡಲಾಯಿತು. ನಂತರ ಸುಗಂಧರಾಜ್ ಬೇಕಲ್, ಆರತಿ ಆಡಿಗ, ಜಸ್ಮಿತಾ ವಿವೇಕ್ ಅವರಿಗೆ “ವಿಶೇಷ ಗೌರವ ಪುರಸ್ಕಾರ” ಸನ್ಮಾನಿಸಿ ಗೌರವಿಸಲಾಯಿತು. ಕರ್ನಾಟಕ ಸಂಘ ಶಾರ್ಜಾದ ಸಲಹೆಗಾರರಾದ ಪ್ರವೀಣ್ ಕುಮಾರ್ ಶೆಟ್ಟಿ, ಹರೀಶ್ ಶೇರಿಗಾರ್, ಜೊಸೇಫ್ ಮಥಾಯಸ್, ರಾಮಚಂದ್ರ ಹೆಗ್ಡೆ, ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರು ಸರ್ವೋತ್ತಮ್ ಶೆಟ್ಟಿ, ದುಬಾಯಿ ಕರ್ನಾಟಕ ಸಂಘದ ಅಧ್ಯಕ್ಷರು ಶಶಿಧರ್ ನಾಗರಾಜಪ್ಪ, ರಸ್ ಅಲ್ ಕೈಮಾ ಕರ್ನಾಟಕ ಸಂಘದ ಅಧ್ಯಕ್ಷರು ಸಂತೋಷ್ ಹೆಗ್ಡೆ, ಕರ್ನಾಟಕ ಸಂಘ ಶಾರ್ಜಾ ಅಧ್ಯಕ್ಷರು ಸತೀಶ್ ಪೂಜಾರಿ, ಉಪಾಧ್ಯಕ್ಷರು ವಿಶ್ವನಾಥ್ ಶೆಟ್ಟಿ, ಪೋಷಕರು ಮಾರ್ಕ ಡೆನಿಸ್ ಸನ್ಮಾನ ಪ್ರಕ್ರಿಯೆಯಲ್ಲಿ ಭಾಗಿಗಳಾಗಿದ್ದರು. ಗಣೇಶ್ ರೈ ಕಾರ್ಯಕ್ರಮ ನಿರೂಪಕರಾಗಿದ್ದರು.

Advertisement

ಮುಖ್ಯ ಅತಿಥಿಗಳಾದ ಇಂಡಿಯನ್ ಅಸೊಸಿಯೇಶನ್ ಶಾರ್ಜಾ, ಅಧ್ಯಕ್ಷರಾದ ಅಡ್ವಕೇಟ್ ವೈ.ಎ.ರಹಿಂ ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಎಲ್ಲಾ ಪ್ರಾಯೋಜಕರನ್ನು ಗೌರವಿಸಲಾಯಿತು. ಅನಿವಾಸಿ ಭಾರತೀಯರಿಗೆ ಏರ್ಪಡಿಸಲಾಗಿದ್ದ ಆಯೊಜಿಸಲಾದ ರಾಷ್ಟ್ರಮಟ್ಟದ ದೇಹರ್ದಾಡ್ಯ ಸ್ಪರ್ಧೆಗೆ ಮುಖ್ಯ ತೀರ್ಪುಗಾರರಾಗಿ, ವಿಶೇಷ ಅಹ್ವಾನಿತ ಅತಿಥಿಯಾಗಿ ಮಂಗಳೂರಿನಿಂದ ಮಿಸ್ಟರ್ ಇಂಡಿಯಾ ಜಗದೀಶ್ ಪೂಜಾರಿಯವರು, ಮತ್ತು ವಿನೋದ್ ಗೌಡ ರವರನ್ನು ಆಹ್ವಾನಿಸಲಾಗಿತ್ತು. ಜಗದೀಶ್ ಪೂಜಾರಿಯವರ ಸಾಧನೆಗೆ ಕರ್ನಾಟಕ ಸಂಘ ಶಾರ್ಜಾ ವತಿಯಿಂದ "ಮಯೂರ ಶ್ರೀ" ಬಿರುದನ್ನು ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಶ್ರೀ ವಿನೋದ್ ಗೌಡ ಮತ್ತು ಮಹ್ಮದ್ ಇಕ್ಬಾಲ್ ರವನ್ನು ಸನ್ಮಾನಿಸ ಲಾಯಿತು.

ಯು.ಎ.ಇ. ರಾಷ್ಟ್ರಮಟ್ಟದ ದೇಹದಾರ್ಢ್ಯ ಸ್ಪರ್ಧೆಯ “ಮಯೂರ ಶ್ರೀ 2023” ಪ್ರಶಸ್ತಿಯನ್ನು ದೇಹರ್ದಾಡ್ಯ ಪಟು ರವಿಕುಮಾರ್ ಪೂಜಾರಿ ಪಡೆದರು, ದ್ವಿತೀಯ, ಸುಮಂತ್ ಆಚಾರ್ಯ, ತೃತಿಯ ಸುದೀಶ್ ವಿಟ್ಲ ಮತ್ತು ಬೆಸ್ಟ್ ಪೋಸರ್ ರಕ್ಷಿತ್ ಕುಮಾರ್ ಪಡೆದುಕೊಂಡರು. ಆರತಿ ಆಡಿಗ, ದೀಕ್ಷಾ ರೈ, ಆರ್ ಜೆ. ಎರೋಲ್ ಕಾರ್ಯಕ್ರಮ ನಿರೂಪಕರಾಗಿದ್ದರು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಮಾಡಲಾಗಿದ್ದು ಕರ್ನಾಟಕ ಸಂಘ ಶಾರ್ಜಾದ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರ ಪೂರ್ವಭಾವಿ ತಯಾರಿಕೆಯಿಂದ ಯಶಸ್ವಿಯಾಯಿತು.

Advertisement
Tags :
Advertisement