ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಬಂಟ್ವಾಳದಲ್ಲಿ ಮನೆಗೆ ನುಗ್ಗಿ ತಾಯಿಮಗಳನ್ನು ಬೆದರಿಸಿ ದರೋಡೆ

ನಾಲ್ವರು ಮುಸುಕುದಾರಿಗಳು ಮನೆಯೊಂದರಲ್ಲಿ ತಾಯಿ ಮಗಳಿಗೆ ಚೂರಿ ತೋರಿಸಿ ಲಕ್ಷಾಂತರ ರೂ ನಗನಗದನ್ನು ರಾಬರಿ ಮಾಡಿದ ಘಟನೆ ಇಂದು ಬೆಳಂಬೆಳಿಗ್ಗೆ ವಗ್ಗದಲ್ಲಿ ನಡೆದಿದೆ.
03:21 PM Jan 11, 2024 IST | Ashika S

ಬಂಟ್ವಾಳ: ನಾಲ್ವರು ಮುಸುಕುಧಾರಿಗಳು ಮನೆಯೊಂದರಲ್ಲಿ ತಾಯಿ ಮಗಳಿಗೆ ಚೂರಿ ತೋರಿಸಿ ಲಕ್ಷಾಂತರ ರೂ ನಗದನ್ನು ದೋಚಿರುವ ಘಟನೆ ಇಂದು ಬೆಳಂಬೆಳಿಗ್ಗೆ ವಗ್ಗದಲ್ಲಿ ನಡೆದಿದೆ.

Advertisement

ವಗ್ಗ ಸಮೀಪದ ಅಂಚಿಕಟ್ಟೆ ಸಾಲುಮರ ತಿಮ್ಮಕ್ಕನ ಟ್ರೀ ಪಾರ್ಕ್ ಮುಂಭಾಗದಲ್ಲಿರುವ ಪ್ಲೋರಿನ್ ಪಿಂಟೋ ಅವರ ಹೊಸ ಮನೆಯಿಂದ ರಾಬರಿ ಮಾಡಲಾಗಿದೆ.  ಮನೆಯಲ್ಲಿ ತಾಯಿ ಪ್ಲೋರಿನಾ ಪಿಂಟೊ ಮಗಳು ಮರಿನಾ ಪಿಂಟೋ ಇಬ್ಬರು ಮಾತ್ರ ಇದ್ದು ಗಂಡಸರಿಲ್ಲದ ಮನೆಯಲ್ಲಿ ರಾಬರಿ ನಡೆಸಲಾಗಿದೆ.

ಗೊದ್ರೇಜ್ ನಲ್ಲಿರಿಸಲಾಗಿದ್ದ ಸುಮಾರು 2.90 ಲಕ್ಷ ರೂಮೌಲ್ಯದ ವಿವಿಧ ಬಂಗಾರಗಳು, 30 ಸಾವಿರನಗದು ಹಾಗೂ  ಒಂದು ಮೊಬೈಲ್ ಪೋನ್ ಒಟ್ಟು ಮೂರು ಲಕ್ಷಕ್ಕೂ ಅಧಿಕ ಮೌಲ್ಯದ ನಗನಗದು ರಾಬರಿ ಮಾಡಿದ್ದಾರೆ. ಇಂದು ಬೆಳಿಗ್ಗೆ ಸುಮಾರು 6.30ರ ಸಮಯದಲ್ಲಿ ಬೆಲ್ ಹಾಕಿದಾಗ ಬಾಗಿಲು ತೆಗದು ನೋಡಿದಾಗ ನಾಲ್ವರು ಮುಸುಕುಧಾರಿಗಳು ಮನೆಯೊಳಗೆ ನುಗ್ಗಿದ್ದಾರೆ.
ಬಳಿಕ ಮನೆಯಲ್ಲಿರುವ ನಗನಗದು ಕೊಡುವಂತೆ ಬೆದರಿಸಿದ್ದಾರೆ.

Advertisement

ಬೆದರಿಕೆಗೆ ಬಗ್ಗದಾಗ ನಾಲ್ವರು ಕೈಯಲ್ಲಿ ಚೂರಿ ತೋರಿಸಿ ಕೊಲ್ಲುವ ಬೆದರಿಕೆಒಡ್ಡಿದಾಗ ಗೊದ್ರೇಜ್ ನಬೀಗದ ಕೀ ನೀಡಿದ್ದಾರೆ.
ಬಂಗಾರವನ್ನು ದೋಚುವ ವೇಳೆ ಅಡ್ಡ ಬಂದ ಮಗಳು ಮರೀನಾ ಪಿಂಟೋ ಅವರ ಕೈಗೆ ಗಾಯವಾಗಿದೆ ಎಂದು ಇವರ ಅಣ್ಣ ವರದಿಗಾರ ಆಸ್ಟಿನ್ ಪಿಂಟೋ ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ಇಲ್ಲಿನ ಅಂಗಡಿಯಿಂದ ಜ್ಯೂಸ್ ಮೆಷಿನ್ ಒಂದನ್ನು ಕಳವು ಮಾಡಲಾಗಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.

ಇಂದು ಸ್ಥಳಕ್ಕೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್, ಎಸ್.ಐ.ಹರೀಶ್ ಬೇಟಿ ನೀಡಿದ್ದಾರೆ. ಹಾಗೂ ಶ್ವಾನ ದಳ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

Advertisement
Tags :
LatestNewsNewsKannadaಚೂರಿದರೋಡೆಮನೆಮುಸುಕುದಾರಿ
Advertisement
Next Article