ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಮಗುವನ್ನು ಕೊಂದು ತಾನೂ ನೇಣಿಗೆ ಶರಣಾದ ತಾಯಿ

ಜಿಲ್ಲೆಯ ಚಿಂಚೋಳಿ ತಾಲೂಕಿನ ಮರಪಳ್ಳಿ ಗ್ರಾಮದ ನಿವಾಸದಲ್ಲಿ  ಎರಡು ವರ್ಷದ ಪುಟ್ಟ ಕಂದಮ್ಮಳನ್ನ ಕೊಂದು ತಾಯಿಯೂ ನೇಣಿಗೆ ಕೊರಳೊಡ್ಡಿರುವ ಧಾರುಣ ಘಟನೆ ನಡೆದಿದೆ.
08:51 AM Feb 16, 2024 IST | Ashika S

ಕಲಬುರಗಿ: ಜಿಲ್ಲೆಯ ಚಿಂಚೋಳಿ ತಾಲೂಕಿನ ಮರಪಳ್ಳಿ ಗ್ರಾಮದ ನಿವಾಸದಲ್ಲಿ ಎರಡು ವರ್ಷದ ಪುಟ್ಟ ಕಂದಮ್ಮಳನ್ನ ಕೊಂದು ತಾಯಿಯೂ ನೇಣಿಗೆ ಕೊರಳೊಡ್ಡಿರುವ ದಾರುಣ ಘಟನೆ ನಡೆದಿದೆ.

Advertisement

ತಾಯಿ ಶಿವಲೀಲಾ (23) ಹಾಗೂ ವರ್ಷಿತಾ(2) ಮೃತ ರ್ದುದೈವಿಗಳು.

ಚಿಂಚೋಳಿ ತಾಲ್ಲೂಕಿನ ಕೆರೋಳ್ಳಿ ಗ್ರಾಮದ ನಿವಾಸಿಯಾಗಿರುವ ಶಿವಲೀಲಾ, ಮೂರು ವರ್ಷದ ಹಿಂದೆ ಮರಪಳ್ಳಿ ಗ್ರಾಮದ ಆನಂದ ಜೊತೆ ಮದುವೆ ಮಾಡಿಕೊಡಲಾಗಿತ್ತು. ಇಷ್ಟು ದಿನ ಇಬ್ಬರು ಚೆನ್ನಾಗಿಯೇ ಇದ್ದರು. ಅಲ್ಲದೆ ನಿನ್ನೆಯಷ್ಟೆ ತವರು ಮನೆಯಿಂದ ವಾಪಸ್ ಅಗಿದ್ದಳು‌. ಅಷ್ಟೇ ಸಂಜೆ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮಗುವನ್ನು ಕೊಂದು ತಾನೂ ನೇಣಿಗೆ ಶರಣಾಗಿದ್ದಾಳೆ. ತಾಯಿ ಮಗಳ ಸಾವನ್ನ ಕಂಡು ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.

Advertisement

ಇನ್ನು ಮೊದ ಮೊದಲು ಗಂಡ ಅತ್ತೆಯ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿರಬುಹುದು ಎನ್ನುವ ಶಂಕೆ ವ್ಯಕ್ತವಾಗಿತ್ತು. ಆದ್ರೆ, ಸದ್ಯ ಮೃತಳ ಸಂಬಂಧಿಕರೇ 'ಶಿವಲೀಲಾ ಸ್ವಲ್ಪ ಮುಂಗೊಪಿಯಾಗಿದ್ದಳು. ಅಲ್ಲದೇ ಆಕೆ ಯಾಕೆ ಸಾವನ್ನಪ್ಪಿದ್ದಾಳೆ ಎನ್ನುವ ನಿಖರ ಕಾರಣ ಗೊತ್ತಿಲ್ಲ ಎನ್ನುತ್ತಿದ್ದಾರೆ.

ಹೆಂಡತಿಯನ್ನ ಕರೆದುಕೊಂಡು ಬರುವುದಕ್ಕೆ ಹೋಗಿದ್ದ ಗಂಡ ಆನಂದ ದೇಸಾಯಿ ಕೂಡ ಹೆಂಡತಿ ಮನೆಯಲ್ಲಿಯೇ ಎರಡ್ಮೂರು ದಿನ ಇದ್ದನಂತೆ. ನಿನ್ನೆಯಷ್ಟೆ ತವರು ಮನೆಯಿಂದ ಹೆಂಡತಿಯನ್ನು ಕರೆದುಕೊಂಡು ಬಂದಿದ್ದ. ಆದ್ರೆ, ಇದ್ದಕ್ಕಿಂತದ್ದೇ ಶಿವಲೀಲಾ ಇಂತಹ ನಿರ್ಧಾರಕ್ಕೆ ಬಂದಿದ್ದು ಯಾಕೆ ಎನ್ನುವ ಹತ್ತಾರು ಪ್ರಶ್ನೆ ಮೂಡುತ್ತಿವೆ.

ಒಟ್ಟಿನಲ್ಲಿ ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಚಿಂಚೋಳಿ ಪೊಲೀಸರು, ತನಿಖೆಗಿಳಿದಿದ್ದಾರೆ. ತನ್ನ ಕರುಳ ಕುಡಿಯನ್ನ ಕೊಂದು ಆಕೆಗೆ ನೇಣಿಗೆ ಶರಣಾಗಿದ್ದೇಕೆ, ಗಂಡನ ಮನೆಯವರ ಕಿರುಕುಳವಾ? ಅಥವಾ ವೈಯಕ್ತಿಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಳಾ ಎನ್ನುವ ಬಗ್ಗೆ ಪೊಲೀಸರ ತನಿಖೆಯಿಂದಲೇ ಬಟ ಬಯಲಾಗಬೇಕು. ಅದೇನೆ ಇರಲಿ ತಾನು ನೇಣಿಗೆ ಶರಣಾಗಿದ್ದಲ್ಲದೇ ಏನು ಅರಿಯದ ಮುದ್ದು ಕಂದಮ್ಮನನ್ನು ಕೊಂದಿದ್ದು ನಿಜಕ್ಕೂ ದುರಂತವೇ ಸರಿ.

ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ - 9152987821

Advertisement
Tags :
LatestNewsNewsKannadaSUCIDEಆತ್ಮಹತ್ಯೆತಾಯಿ
Advertisement
Next Article