For the best experience, open
https://m.newskannada.com
on your mobile browser.
Advertisement

ಕಸ್ತೂರಿ ಕಲ್ಲಂಗಡಿ ಹಣ್ಣಿನ ಕೃಷಿಯ ಬಗ್ಗೆ ಇಲ್ಲಿದೆ ಮಾಹಿತಿ

ಕಸ್ತೂರಿ ಕಲ್ಲಂಗಡಿ ಹಣ್ಣು ಅಥವಾ ಕರ್ಬೂಜ ಎಂದು ಕರೆಯಲ್ಪಡುವ ಹಣ್ಣು ಭಾರತದ ಅತ್ಯಂತ ಜನಪ್ರಿಯ ಬೆಳೆಯಾಗಿದೆ. ಈ ಹಣ್ಣು ಕುಕುರ್ಬಿಟೇಸಿ ಕುಟುಂಬಕ್ಕೆ ಸೇರಿದೆ.
11:00 AM Feb 29, 2024 IST | Ashika S
ಕಸ್ತೂರಿ ಕಲ್ಲಂಗಡಿ ಹಣ್ಣಿನ ಕೃಷಿಯ ಬಗ್ಗೆ ಇಲ್ಲಿದೆ ಮಾಹಿತಿ

ಕಸ್ತೂರಿ ಕಲ್ಲಂಗಡಿ ಹಣ್ಣು ಅಥವಾ ಕರ್ಬೂಜ ಎಂದು ಕರೆಯಲ್ಪಡುವ ಹಣ್ಣು ಭಾರತದ ಅತ್ಯಂತ ಜನಪ್ರಿಯ ಬೆಳೆಯಾಗಿದೆ. ಈ ಹಣ್ಣು ಕುಕುರ್ಬಿಟೇಸಿ ಕುಟುಂಬಕ್ಕೆ ಸೇರಿದೆ.

Advertisement

ಈ ಹಣ್ಣಿನಲ್ಲಿ ಹೆಚ್ಚು ನೀರಿನ ಅಂಶ ಇರುವುದರಿಂದ ಬೇಸಿಗೆ ಕಾಲದಲ್ಲಿ ಜನರು ಇದನ್ನು ತಿನ್ನಲು ಇಷ್ಟಪಡುತ್ತಾರೆ. ತಿಳಿ ಹಸಿರು ಹಳದಿ ಬಣ್ಣ ಹೊಂದಿರುವ ಹಣ್ಣುಗಳು ರಸಭರಿತವಾಗಿದ್ದು ಆರೋಗ್ಯಕ್ಕೂ ಬಹಳ ಉತ್ತಮವಾಗಿದೆ.

ಕರ್ಬೂಜ ಹಣ್ಣಿನ ಬೇಸಾಯಕ್ಕೆ ಅಗತ್ಯವಾದ ಹವಾಮಾನ: ಕರ್ಬೂಜ ಹಣ್ಣು ಬಿಸಿ ಮತ್ತು ಶುಷ್ಕ ವಾತಾವರಣದಲ್ಲಿ ಉತ್ತಮವಾಗಿ ಬೆಳೆಯುತ್ತದೆ. ಹೆಣ್ಣನ್ನು ಬೇಸಿಗೆ ಬೆಳೆಯಾಗಿ ಬಳಸಲಾಗುತ್ತದೆ. ಉತ್ತಮ ಬಿಸಿಲು ಮತ್ತು ಹೆಚ್ಚಿನ ಶಾಖವು ಕರ್ಬೂಜ ಹಣ್ಣಿನ ಸಕ್ಕರೆ ಅಂಶವನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತದೆ

Advertisement

ಕರ್ಬೂಜ ಹಣ್ಣಿನ ಕೃಷಿಗೆ ಮಣ್ಣಿನ ಅವಶ್ಯಕತೆ : ಕರ್ಬೂಜ ಹಣ್ಣು ವ್ಯಾಪಕ ಶ್ರೇಣಿಯ ಮಣ್ಣಿನಲ್ಲಿ ಬೆಳೆಸಬಹುದಾಗಿದೆ. ಅದಾಗಿ ಹೆಚ್ಚಿನ ಸಾವಯವ ಪದಾರ್ಥಗಳನ್ನು ಹೊಂದಿರುವ ಮರಳು ಮಿಶ್ರಿತ ಲೋಂ ಮಣ್ಣಿನಲ್ಲಿ ಹಾಗೂ ಬೆಚ್ಚಗಿನ ಚೆನ್ನಾಗಿ ಬರೆದು ಹೋದ ಮಣ್ಣು ಈ ಹಣ್ಣಿನ ಕೃಷಿಗೆ ಸೂಕ್ತವಾಗಿದೆ.

ಕರ್ಬೂಜ ಹಣ್ಣಿನ ಕೃಷಿಯಲ್ಲಿ ನೀರಾವರಿ ಅವಶ್ಯಕತೆ : ಹೊಲದಲ್ಲಿ ಬೀಜಗಳನ್ನು ಬಿತ್ತಿದ ತಕ್ಷಣ ನೀರುಣಿಸಬೇಕು. ಉತ್ತಮ ಮಣ್ಣಿನ ತೇವಾಂಶವನ್ನು ಕಾಪಾಡಿಕೊಳ್ಳಲು ಹತ್ತು ದಿನಗಳ ಮಧ್ಯಂತರದಲ್ಲಿ ನೀರಾವರಿಯನ್ನು ನೀಡಬೇಕು. ಮಧ್ಯ ತಳದಲ್ಲಿ ಅಥವಾ ಮಳೆಗಾಲದ ಪರಿಸ್ಥಿತಿಗಳಲ್ಲಿ ಬೆಳೆಯುವ ಬೆಳೆಗಳಿಗೆ ನೀರಾವರಿ ಅಗತ್ಯವಿರುವುದಿಲ್ಲ.

ಉತ್ತಮ ಗುಣಮಟ್ಟದ ಹಣ್ಣುಗಳನ್ನು ಪಡೆಯಲು ಅವುಗಳನ್ನು ಸರಿಯಾದ ಸಮಯದಲ್ಲಿ ಕೊಯ್ಲು ಮಾಡಬೇಕು. ಕರ್ಬುಜ ಹಣ್ಣುಗಳ ಬಣ್ಣವು ಬದಲಾದಾಗ ಕೊಯ್ಲಿಗೆ ಸಿದ್ಧವಾಗುತ್ತದೆ ಎಂದರ್ಥ. ಹಣ್ಣುಗಳು ಬೂದು ಅಥವಾ ಹಸಿರು ಬಣ್ಣದಿಂದ ಹಳದಿ ಬಣ್ಣಕ್ಕೆ ತಿರುಗಿದಾಗ ಹಣ್ಣುಗಳು ಪಕ್ವವಾಗಿವೆ ಎಂದರ್ಥ. ಹಣ್ಣುಗಳು ಮತ್ತು ವೈವಿಧ್ಯಮಯ ಹವಾಮಾನ ಪರಿಸ್ಥಿತಿಗಳ ಆಧಾರದ ಮೇಲೆ 85 ರಿಂದ 115 ದಿನಗಳ ಒಳಗಾಗಿ ಹಣ್ಣುಗಳು ಹಣ್ಣಾಗುತ್ತವೆ.

ಕರ್ಬೂಜ ಹಣ್ಣಿನ ಆರೋಗ್ಯ ಪ್ರಯೋಜನಗಳು:

ಕರ್ಬೂಜ ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿ ಇಡಲು ಸಹಾಯಮಾಡುತ್ತದೆ.

ತೂಕ ಇಳಿಸಲು ಸಹಾಯ ಮಾಡುತ್ತದೆ

ದೇಹದಲ್ಲಿನ ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಮಾಡುತ್ತದೆ

ಕಣ್ಣಿನ ಆರೋಗ್ಯಕ್ಕೆ ಉತ್ತಮ

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತಿದೆ

ಮೂತ್ರಪಿಂಡದಲ್ಲಿ ಕಲ್ಲುಗಳಾಗದಂತೆ ತಡೆಯುತ್ತದೆ

ಮಲ ಬದ್ಧತೆಯನ್ನು ನಿವಾರಿಸುತ್ತದೆ

Advertisement
Tags :
Advertisement