For the best experience, open
https://m.newskannada.com
on your mobile browser.
Advertisement

ಪುಷ್ಪ ಸಿನಿಮಾ ಮಾಡಿ ನನ್ನ ಜೀವನ ಬದಲಾಗಿಲ್ಲ ಎಂದ ಬಹುಭಾಷಾ ನಟ ಫಾಹದ್ ಫಾಸಿಲ್

ಬಹುಭಾಷಾ ನಟ ಫಾಹದ್ ಫಾಸಿಲ್ ಪುಷ್ಪ ಸಿನಿಮಾದಿಂದ ನನ್ನ ಜೀವನ ಬದಲಾಗಿಲ್ಲ, ಪುಷ್ಪ ಮಾಡಿದ್ದಕ್ಕೆ ನನಗೇನು ಸಿಕ್ತು ಅನ್ನೋದು ತಪ್ಪು ಕಲ್ಪನೆ ಎಂದು ಹೇಳಿಕೊಂಡಿದ್ದಾರೆ.
02:49 PM May 08, 2024 IST | Chaitra Kulal
ಪುಷ್ಪ ಸಿನಿಮಾ ಮಾಡಿ ನನ್ನ ಜೀವನ ಬದಲಾಗಿಲ್ಲ ಎಂದ ಬಹುಭಾಷಾ ನಟ ಫಾಹದ್ ಫಾಸಿಲ್

ಬಹುಭಾಷಾ ನಟ ಫಾಹದ್ ಫಾಸಿಲ್ ಪುಷ್ಪ ಸಿನಿಮಾದಿಂದ ನನ್ನ ಜೀವನ ಬದಲಾಗಿಲ್ಲ, ಪುಷ್ಪ ಮಾಡಿದ್ದಕ್ಕೆ ನನಗೇನು ಸಿಕ್ತು ಅನ್ನೋದು ತಪ್ಪು ಕಲ್ಪನೆ ಎಂದು ಹೇಳಿಕೊಂಡಿದ್ದಾರೆ.

Advertisement

ಪುಷ್ಪ ಸಿನಿಮಾ ಆದ್ಮೇಲೆ ಫಾಹದ್​ ಲೈಫ್ ಚೇಂಜ್ ಆಗಿದೆ ಎಂಬ ಅಭಿಪ್ರಾಯ ಬಗ್ಗೆ ಮಾತನಾಡಿದ್ದಾರೆ. ನಟ ಫಾಹದ್ ಫಾಸಿಲ್, ‘‘ಪುಷ್ಪ ಸಿನಿಮಾದಿಂದ ನನಗೇನು ಸಿಕ್ಕಿಲ್ಲ. ನಾನು ಆ ಸಿನಿಮಾನ ಸುಕುಮಾರ್ ಅವರಿಗಾಗಿ ಮಾಡಿದೆ. ನಾನೊಬ್ಬ ನಟ. ಅದರಲ್ಲಿ ನನಗೆ ಖುಷಿ ಇದೆ. ” ಎಂದಿದ್ದಾರೆ.

ಅಲ್ಲು ಅರ್ಜುನ್ ನಟನೆಯ ಪುಷ್ಪ ಚಿತ್ರದಲ್ಲಿ ಫಾಹದ್ ಫಾಸಿಲ್ ಬಹುಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಈಗ ಎರಡನೇ ಭಾಗದಲ್ಲೂ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಹಾಡು ಬಿಡುಗಡೆಯಾಗಿದ್ದು, ಹಾಡಿನಲ್ಲಿ ವಿಭಿನ್ನವಾಗಿ ಅಲ್ಲು ಅರ್ಜುನ್​ ಕಾಣಿಸಿಕೊಂಡಿದ್ದಾರೆ. ಮಾತ್ರವಲ್ಲದೆ ಅನೇಕರು ಈ ಹಾಡಿಗೆ ರೀಲ್ಸ್​ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಾರೆ.

Advertisement

ಪುಷ್ಪ-1 ಸಕಸ್ಸ್​​ ಬಳಿಕ ಪುಷ್ಪ-2 ತೆರೆಗೆ ಬರಲು ಬಾಕಿ ಇದೆ. ಈಗಾಗಲೇ ಫ್ಯಾನ್ಸ್ ಈ ಸಿನಿಮಾಗಾಗಿ ಕಾದು ಕುಳಿತ್ತಿದ್ದಾರೆ. ಸಿನಿಮಾ ಸುಕುಮಾರ್​ ನಿರ್ದೇಶನದಲ್ಲಿ ಮೂಡಿ ಬರುತ್ತಿದೆ. ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜನೆ ಇದಕ್ಕಿದೆ. ಪೊಲಾಂಡ್ ಮೂಲದ ಮಿರೋಸ್ಲಾ ಬ್ರೋಜೆಕ್ ಕ್ಯಾಮೆರಾ ಕೈಚಳಕದಲ್ಲಿ ಸಿನಿಮಾ ಬರುತ್ತಿದೆ​.​

Advertisement
Tags :
Advertisement