For the best experience, open
https://m.newskannada.com
on your mobile browser.
Advertisement

ʼಮೈದಾನ್’ ಚಿತ್ರಕ್ಕೆ ತಡೆಕೊಟ್ಟ ಮೈಸೂರು ಕೋರ್ಟ್

ಬಾಲಿವುಡ್ ನಟ ಅಜಯ್ ದೇವಗನ್ ನಟನೆಯ ಮೈದಾನ್ ಸಿನಿಮಾ ಬಿಡುಗಡೆ ಸಂಕಷ್ಟ ಎದುರಾಗಿದೆ. ಬೋನಿ ಕಪೂರ್ ನಿರ್ಮಾಣದ, ಅಜಯ್ ದೇವಗನ್ ನಟನೆಯ ‘ಮೈದನಾ್’ ಸಿನಿಮಾ ಏಪ್ರಿಲ್ 11ರಂದು ರಿಲೀಸ್ ಆಗಬೇಕಿದೆ. ಇದಕ್ಕೂ ಮೊದಲೇ ಸಿನಿಮಾಗೆ ತಡೆ ನೀಡಲಾಗಿದೆ. ​​
04:36 PM Apr 09, 2024 IST | Ashitha S
ʼಮೈದಾನ್’ ಚಿತ್ರಕ್ಕೆ ತಡೆಕೊಟ್ಟ ಮೈಸೂರು ಕೋರ್ಟ್

ಮೈಸೂರು: ಬಾಲಿವುಡ್ ನಟ ಅಜಯ್ ದೇವಗನ್ ನಟನೆಯ ಮೈದಾನ್ ಸಿನಿಮಾ ಬಿಡುಗಡೆ ಸಂಕಷ್ಟ ಎದುರಾಗಿದೆ. ಬೋನಿ ಕಪೂರ್ ನಿರ್ಮಾಣದ, ಅಜಯ್ ದೇವಗನ್ ನಟನೆಯ ‘ಮೈದನಾ್’ ಸಿನಿಮಾ ಏಪ್ರಿಲ್ 11ರಂದು ರಿಲೀಸ್ ಆಗಬೇಕಿದೆ. ಇದಕ್ಕೂ ಮೊದಲೇ ಸಿನಿಮಾಗೆ ತಡೆ ನೀಡಲಾಗಿದೆ. ​​

Advertisement

ಅಮಿತ್ ಶರ್ಮಾ ನಿರ್ದೇಶನದ ಈ ಚಿತ್ರಕ್ಕೆ ಕೊನೆಯ ಕ್ಷಣದಲ್ಲಿ ತೊಂದರೆ ಎದುರಾಗಿದೆ. ಈ ತಡೆಯನ್ನು ತೆಗೆಯುವಂತೆ ಚಿತ್ರತಂಡ ಕೋರ್ಟ್​ ಮೆಟ್ಟಿಲೇರೋ ಸಾಧ್ಯತೆ ಇದೆ. ಕಥೆ ಕದ್ದ ಆರೋಪವನ್ನು ‘ಮೈದಾನ್’ ತಂಡ ಎದುರಿಸುತ್ತಿದೆ.

ತಮ್ಮ ಸಿನಿಮಾದ ಮೂಲ ಕತೆ ಕದ್ದಿದ್ದಾರೆ ಎಂದು ಮೈಸೂರಿನ ಸ್ಟೋರಿ ರೈಟರ್ ಅನಿಲ್ ಕುಮಾರ್ ದೂರು ನೀಡಿದ್ದರು. ‘2018ರಲ್ಲಿ ಚಿತ್ರದ ಕತೆ ಬಗ್ಗೆ ಲಿಂಕ್ಡಿನ್​ನಲ್ಲಿ ಹಾಕಿದ್ದೆ. ಕಥೆ ಗಮನಿಸಿ ಸುಕ್​ದಾಸ್ ಸೂರ್ಯವಂಶಿ ಎಂಬುವವರು ಚರ್ಚಿಸಿದ್ದರು. 2019ರ ಫೆಬ್ರವರಿಯಲ್ಲಿ ಹೆಸರು​ ನೋಂದಣಿ ಮಾಡಿಸಿದ್ದೆ. ನನ್ನ ಮೂಲ ಕತೆ ಕದ್ದು ಮೈದಾನ್ ಎಂದು ಹೆಸರಿಟ್ಟಿದ್ದಾರೆ. ನನಗೆ ಮೈಸೂರು ನ್ಯಾಯಾಲಯದಿಂದ ನ್ಯಾಯ ಸಿಕ್ಕಿದೆ’ ಎಂದು ಮೈಸೂರಿನಲ್ಲಿ ದೂರುದಾರ ಕಿರಣ್ ಕುಮಾರ್ ಹೇಳಿದ್ದಾರೆ.

Advertisement

Advertisement
Tags :
Advertisement