ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಮಹಿಳಾ ಕುಲಪತಿಯಾಗಿ ನೈಮಾ ಖಾತೂನ್ ನೇಮಕ

ಇತಿಹಾಸದಲ್ಲಿ ಮೊದಲ ಬಾರಿಗೆ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ ಮಹಿಳಾ ಕುಲಪತಿಯಾಗಿ ನೈಮಾ ಖಾತೂನ್ ನೇಮಕಗೊಂಡಿದ್ದಾರೆ.
08:48 AM Apr 23, 2024 IST | Ashika S

ಉತ್ತರಪ್ರದೇಶ: ಇತಿಹಾಸದಲ್ಲಿ ಮೊದಲ ಬಾರಿಗೆ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಮಹಿಳಾ ಕುಲಪತಿಯಾಗಿ ನೈಮಾ ಖಾತೂನ್ ನೇಮಕಗೊಂಡಿದ್ದಾರೆ.

Advertisement

100 ವರ್ಷಗಳಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿದ ಮೊದಲ ಮಹಿಳೆಯಾಗಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಅನುಮೋದನೆ ಪಡೆದ ನಂತರ ಶಿಕ್ಷಣ ಸಚಿವಾಲಯ ನೈಮಾ ಖಾತೂನ್ ಅವರನ್ನು ನೇಮಕ ಮಾಡಿದೆ.

ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ನೈಮಾ ಖಾತೂನ್ ಅವರನ್ನು ಐದು ವರ್ಷಗಳ ಅವಧಿಗೆ ಎಎಂಯು ಕುಲಪತಿಯಾಗಿ ನೇಮಿಸಲಾಗಿದೆ.

Advertisement

ಮಾದರಿ ನೀತಿ ಸಂಹಿತೆ (ಎಂಸಿಸಿ) ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಭಾರತೀಯ ಚುನಾವಣಾ ಆಯೋಗದಿಂದ (ಇಸಿಐ) ಅನುಮತಿಯನ್ನೂ ಕೋರಲಾಗಿದೆ ಎಂದು ಅವರು ಹೇಳಿದರು.

ಎಎಂಯು ವಿಸಿ ನೇಮಕಕ್ಕೆ ಸಂಬಂಧಿಸಿದ ಪ್ರಸ್ತಾವನೆಗೆ ಎಂಸಿಸಿ ಕೋನದಿಂದ ಆಯೋಗಕ್ಕೆ ಯಾವುದೇ ಆಕ್ಷೇಪವಿಲ್ಲ ಎಂದು ಇಸಿಐ ಹೇಳಿದೆ.

AMU ನಿಂದ ಮನೋವಿಜ್ಞಾನದಲ್ಲಿ ಪಿಎಚ್‌ಡಿ ಪಡೆದ ನೈಮಾ ಖಾತೂನ್, 1988 ರಲ್ಲಿ ಅದೇ ವಿಭಾಗದಲ್ಲಿ ಉಪನ್ಯಾಸಕರಾಗಿ ನೇಮಕಗೊಂಡರು. 2006 ರಲ್ಲಿ ಅವರು ಪ್ರಾಧ್ಯಾಪಕರಾಗಿ ಬಡ್ತಿ ಪಡೆದರು. ಇದಾದ ಬಳಿಕ 2014ರಲ್ಲಿ ಮಹಿಳಾ ಕಾಲೇಜಿನ ಪ್ರಾಂಶುಪಾಲರಾಗಿ ನೇಮಕಗೊಂಡರು.

Advertisement
Tags :
LatetsNewsMuslim UniversityNewsKarnatakawoman Vice-Chancellor
Advertisement
Next Article