ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ನೆಲ್ಲಿಕಟ್ಟೆ ಅಂಬಿಕಾ ಪಿಯು ಕಾಲೇಜಿನಲ್ಲಿ ನಟ್ಟೋಜ ಶಿವಾನಂದ ರಾವ್ ಅವರಿಗೆ ನುಡಿ ನಮನ

ನಟ್ಟೋಜ ಶಿವಾನಂದ ರಾವ್ ಅವರು ಹಿಂದೂ ಸಮಾಜಕ್ಕಾಗಿ ಅಹರ್ನಿಶಿಯಾಗಿ ದುಡಿದು, ತಮ್ಮನ್ನು ತಾವು ಸಮರ್ಪಿಸಿಕೊಂಡರು. ಅವರ ಅಗಲುವಿಕೆ ಅತೀವ ದುಃಖ ತಂದಿದೆ. ಅವರ ನಡೆ-ನುಡಿ ಸಂಸ್ಕಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಅವರಿಗೆ ನಾವು ಅರ್ಪಿಸುವ ನಿಜವಾದ ಗೌರವ ಎಂದು ಖ್ಯಾತವಾಗ್ಮಿ, ಉಪನ್ಯಾಸಕ ಆದರ್ಶ ಗೋಖಲೆ ಹೇಳಿದರು.
02:42 PM Mar 16, 2024 IST | Gayathri SG

ಪುತ್ತೂರು: ನಟ್ಟೋಜ ಶಿವಾನಂದ ರಾವ್ ಅವರು ಹಿಂದೂ ಸಮಾಜಕ್ಕಾಗಿ ಅಹರ್ನಿಶಿಯಾಗಿ ದುಡಿದು, ತಮ್ಮನ್ನು ತಾವು ಸಮರ್ಪಿಸಿಕೊಂಡರು. ಅವರ ಅಗಲುವಿಕೆ ಅತೀವ ದುಃಖ ತಂದಿದೆ. ಅವರ ನಡೆ-ನುಡಿ ಸಂಸ್ಕಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಅವರಿಗೆ ನಾವು ಅರ್ಪಿಸುವ ನಿಜವಾದ ಗೌರವ ಎಂದು ಖ್ಯಾತವಾಗ್ಮಿ, ಉಪನ್ಯಾಸಕ ಆದರ್ಶ ಗೋಖಲೆ ಹೇಳಿದರು.

Advertisement

ಅವರು ನಗರದ ನಟ್ಟೋಜಾ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ನಟ್ಟೋಜ ಶಿವಾನಂದ ರವ್ ಅವರಿಗೆ ಹಮ್ಮಿಕೊಳ್ಳಲಾದ ನುಡಿ ನಮನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಭಾರತೀಯರು ಕಾತರದಿಂದ ಕಾಯುತ್ತಿದ್ದ ಶ್ರೀರಾಮಮಂದಿರ ನಿರ್ಮಾಣಕ್ಕೆ ೧೯೮೯, ೧೯೯೨ರಲ್ಲಿಯೇ ಪುತ್ತೂರಿನ ತಂಡದಲ್ಲಿ ಕರ ಸೇವಕರಾಗಿ ಭಾಗವಹಿಸಿದ್ದರು. ಮಂದಿರಕ್ಕಾಗಿ ಹೋರಾಡಿ ೧೪ ದಿನಗಳ ಜೈಲುವಾಸವನ್ನೂ ಅನುಭವಿಸಿದ್ದರು, ಜೊತೆಗೆ ಅದೇ ಭವ್ಯ ಮಂದಿರ ಲೋಕಾರ್ಪಣೆ ಸಂದರ್ಭವನ್ನೂ ನೋಡಿ ಸಂತಸಗೊಂಡಿದ್ದು ಸ್ಮರಣೀಯ ವಿಚಾರ ಎಂದು ಅವರ ಸಾಧನೆಯ ಹಾದಿಯನ್ನು ಸ್ಮರಿಸಿಕೊಂಡರು.

Advertisement

ವಿದ್ಯಾರ್ಥಿಗಳು, ಉಪನ್ಯಾಸಕರು ನಟ್ಟೋಜ ಶಿವಾನಂದ ರಾವ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಉಪಸ್ಥಿತರಿದ್ದರು. ರಸಾಯನ ಶಾಸ್ತ್ರ ಉಪನ್ಯಾಸಕಿ ಅಕ್ಷತಾ ನಿರೂಪಿಸಿದರು.

Advertisement
Tags :
AmbikaCollegeLatestNewsNewsKannada
Advertisement
Next Article