ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಗಲಭೆ, ಹಿಂಸಾಚಾರಕ್ಕೆ ಅಕ್ಷರಶಃ ನಲುಗಿ ಹೋದ ನೆದರ್ಲ್ಯಾಂಡ್ಸ್‌

ಗಲಭೆ, ಹಿಂಸಾಚಾರಕ್ಕೆ ಸಿಲುಕಿರುವ ನೆದರ್ಲ್ಯಾಂಡ್ಸ್‌ ಅಕ್ಷರಶಃ ನಲುಗಿದೆ. ಹೇಗ್ ನಗರದಲ್ಲಿ ಎರಡು ಗುಂಪುಗಳ ಮಧ್ಯೆ ಘರ್ಷಣೆ ಸಂಭವಿಸಿದ್ದು, ಸಾರ್ವಜನಿಕ ಆಸ್ತಿಪಾಸ್ತಿ ಹಾನಿಯಾಗಿದೆ.
02:48 PM Feb 18, 2024 IST | Ashika S

ಹೇಗ್‌: ಗಲಭೆ, ಹಿಂಸಾಚಾರಕ್ಕೆ ಸಿಲುಕಿರುವ ನೆದರ್ಲ್ಯಾಂಡ್ಸ್‌ ಅಕ್ಷರಶಃ ನಲುಗಿದೆ. ಹೇಗ್ ನಗರದಲ್ಲಿ ಎರಡು ಗುಂಪುಗಳ ಮಧ್ಯೆ ಘರ್ಷಣೆ ಸಂಭವಿಸಿದ್ದು, ಸಾರ್ವಜನಿಕ ಆಸ್ತಿಪಾಸ್ತಿ ಹಾನಿಯಾಗಿದೆ.

Advertisement

ನೆದರ್ಲ್ಯಾಂಡ್ಸ್‌ನಲ್ಲಿ ಗಲಭೆಕೋರರು ಘರ್ಷಣೆಗಿಳಿದಿದ್ದು, ಉದ್ರಿಕ್ತರ ಗುಂಪು ಕಲ್ಲು, ಇಟ್ಟಿಗೆಗಳ ತೂರಾಟದ ಜೊತೆಗೆ ಸಿಕ್ಕ, ಸಿಕ್ಕಲ್ಲಿ ಬೆಂಕಿ ಹಚ್ಚಿ ಹಿಂಸಾಚಾರದ ಉತ್ತುಂಗಕ್ಕೆ ತಲುಪಿದ್ದಾರೆ. ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಅಷ್ಟೇ ಅಲ್ಲ ಪೊಲೀಸರ ಕಾರು, ಬಸ್‌ಗಳಿಗೆ ಬೆಂಕಿ ಹಚ್ಚಿ ಘೋಷಣೆಗಳನ್ನು ಕೂಗಿದ್ದಾರೆ.

ಗಲಭೆಗೆ ಕಾರಣವೇನು?: ಕಳೆದ ಶನಿವಾರ ರಾತ್ರಿ ಹೇಗ್‌ನಲ್ಲಿ ಆಫ್ರಿಕನ್ ದೇಶದ ಸರ್ಕಾರವನ್ನು ವಿರೋಧಿಸಿದ ಒಂದು ಗುಂಪು ಒಪೇರಾ ಹೌಸ್‌ನಲ್ಲಿ ಸಭೆ ನಡೆಸುತ್ತಿತ್ತು. ಆಗ ಗುಂಪು ಸೇರಿದ ಎರಿಟ್ರಿಯನ್ ಮೂಲದ ನಿರಾಶ್ರಿತರು ಪೊಲೀಸರ ಮೇಲೆ ದಾಳಿ ನಡೆಸಿದೆ. ಎರಿಟ್ರಿಯಾದಿಂದ ಪಲಾಯನ ಮಾಡಿದ ನಂತರ ಹತ್ತು ಸಾವಿರ ಜನರು ಯುರೋಪ್‌ನಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿದ್ದಾರೆ. ನೆದರ್ಲ್ಯಾಂಡ್ಸ್‌ನಲ್ಲಿ ಆಶ್ರಯ ಪಡೆದಿರುವ ಈ ನಿರಾಶ್ರಿತರು ಈ ಗಲಭೆಗೆ ಕಾರಣ ಎನ್ನಲಾಗುತ್ತಿದೆ.

Advertisement

ನೆದರ್ಲ್ಯಾಂಡ್ಸ್‌ನ ಗಲಭೆಯ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಹಲವಾರು ಪೊಲೀಸ್ ಕಾರುಗಳು ಬೆಂಕಿಗೆ ಆಹುತಿಯಾಗಿ ಸುಟ್ಟು ಕರಕಲಾಗಿವೆ.

ಹೇಗ್‌ ನಗರದ ಸ್ಥಿತಿ ಸಂಪೂರ್ಣ ಕೈ ಮೀರಿ ಹೋಗಿದ್ದು, ಗಲಭೆಕೋರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ.

 

Advertisement
Tags :
LatetsNewsNewsKannadaಗಲಭೆಘರ್ಷಣೆನೆದರ್ಲ್ಯಾಂಡ್ಸ್ಹಿಂಸಾಚಾರ
Advertisement
Next Article