ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನಲ್ಲಿ ಮೊಳಗಿದ ಹರ್ ಹರ್ ಮಹಾದೇವ್

ಈ ಬಾರಿಯ ಮಹಾಶಿವರಾತ್ರಿಯನ್ನು ಬಹಳ ಅದ್ಧೂರಿಯಾಗಿ ನ್ಯೂಯಾರ್ಕ್​​ನ ಜನರು ಆಚರಿಸಿದ್ದಾರೆ. ಸೋಮವಾರ ಸಂಜೆ ನ್ಯೂಯಾರ್ಕ್‌ನ ಪ್ರಸಿದ್ಧ ಟೈಮ್ಸ್ ಸ್ಕ್ವೇರ್‌ನಲ್ಲಿ “ಶಿವ” ಮತ್ತು “ಶಂಭೋ” ಗೀತೆಗಳನ್ನು ಪ್ರಸಾರ ಮಾಡಲಾಗಿದೆ.
09:30 PM Mar 06, 2024 IST | Ashika S

ನ್ಯೂಯಾರ್ಕ್‌: ಈ ಬಾರಿಯ ಮಹಾಶಿವರಾತ್ರಿಯನ್ನು ನ್ಯೂಯಾರ್ಕ್​​ನ ಜನರು ಬಹಳ ಅದ್ಧೂರಿಯಾಗಿ ಆಚರಿಸಿದ್ದಾರೆ. ಸೋಮವಾರ ಸಂಜೆ ನ್ಯೂಯಾರ್ಕ್‌ನ ಪ್ರಸಿದ್ಧ ಟೈಮ್ಸ್ ಸ್ಕ್ವೇರ್‌ನಲ್ಲಿ “ಶಿವ” ಮತ್ತು “ಶಂಭೋ” ಗೀತೆಗಳನ್ನು ಪ್ರಸಾರ ಮಾಡಲಾಗಿದೆ.

Advertisement

ಜೊತೆಗೆ ಜಗ್ಗಿ ವಾಸುದೇವ್​ ಸದ್ಗುರು ಅವರ ಮಹಾಶಿವರಾತ್ರಿ ಕಾರ್ಯಕ್ರಮವನ್ನು ಸಹ ಪ್ರಸಾರ ಮಾಡಲಾಗಿದೆ. ಇದನ್ನು ಕಂಡ ನ್ಯೂಯಾರ್ಕ್​ನ ಜನರು ‘ಹರ್ ಹರ್ ಮಹಾದೇವ್’ ಎಂದು ರಸ್ತೆಬದಿಗಳಲ್ಲಿ ನೃತ್ಯವನ್ನು ಮಾಡಿದ್ದಾರೆ.

ಈ ಕುರಿತಾಗಿ ವಿಡಿಯೋ ಹಂಚಿಕೊಂಡಿರುವ ಇಶಾ ಫೌಂಡೇಷನ್ ಸಂಸ್ಥಾಪಕ ಜಗ್ಗಿ ವಾಸುದೇವ್​ ಸದ್ಗುರು ಅವರು, ‘ನ್ಯೂಯಾರ್ಕ್ ಜನರು ಮಹಾಶಿವರಾತ್ರಿಯನ್ನು ಸ್ವಾಗತಿಸಿದ್ದಾರೆ.

Advertisement

ಶಿವನ ಮಹಾರಾತ್ರಿಯ ಮಹತ್ವವನ್ನು ಜಗತ್ತು ಅರಿತುಕೊಳ್ಳುತ್ತಿದೆ. ಇದು ಮಾನವನ ಸಾಮರ್ಥ್ಯವನ್ನು ಹೆಚ್ಚಿಸುವ ಮತ್ತು ಪರಿವರ್ತನೆಯ ಅವಕಾಶವಾಗಿದೆ. ನಾವು ಅದನ್ನು ಸಾಕಾರಗೊಳಿಸೋಣ. ಇದು ಆಚರಣೆಯ ರಾತ್ರಿ. ಆಧ್ಯಾತ್ಮಿಕ ಅನುಭವಗಳು ಟೈಮ್ಸ್ ಸ್ಕ್ವೇರ್​​ ನಲ್ಲಿಯೂ ಕಾಣಬಹುದಾಗಿದೆ’ ಎಂದಿದ್ದಾರೆ.

Advertisement
Tags :
LatetsNewsNewsKannadaನ್ಯೂಯಾರ್ಕ್ಮಹಾಶಿವರಾತ್ರಿ
Advertisement
Next Article