For the best experience, open
https://m.newskannada.com
on your mobile browser.
Advertisement

ಕಂಗನಾ ರಣಾವತ್‌ ಬಗ್ಗೆ ವಿಪಕ್ಷಗಳ ನಿಂದನೀಯ ಟ್ವೀಟ್‌

ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಿಸಿದ ನಂತರ ನಟಿ ಕಂಗನಾ ರಣಾವತ್ ಮೇಲೆ ಕಾಂಗ್ರೆಸ್  ನಾಯಕರು ಮತ್ತು ಬೆಂಬಲಿಗರು ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದಾರೆ.
08:34 PM Mar 25, 2024 IST | Ashika S
ಕಂಗನಾ ರಣಾವತ್‌ ಬಗ್ಗೆ ವಿಪಕ್ಷಗಳ ನಿಂದನೀಯ ಟ್ವೀಟ್‌

ದೆಹಲಿ: ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಿಸಿದ ನಂತರ ನಟಿ ಕಂಗನಾ ರಣಾವತ್ ಮೇಲೆ ಕಾಂಗ್ರೆಸ್  ನಾಯಕರು ಮತ್ತು ಬೆಂಬಲಿಗರು ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದಾರೆ.

Advertisement

ಇನ್​​ಸ್ಟಾಗ್ರಾಮ್​​ನಲ್ಲಿ ಕಂಗನಾ ರಣಾವತ್ ಅವರ ಹಾಟ್ ಫೋಟೊವೊಂದನ್ನು ಪೋಸ್ಟ್ ಮಾಡಿದ್ದರು, ಇದಕ್ಕೆ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ ಸುಪ್ರಿಯಾ ಶ್ರಿನೇಟ್ ಕೂಡಾ “ಕ್ಯಾ ಭಾವ್ ಚಲ್ ರಹಾ ಹೈ ಮಂಡಿ ಮೆ ಕೋಯಿ ಬತಾಯೇಗಾ? (ಮಂಡಿಯಲ್ಲಿನ ಏನ್ ರೇಟ್ ಇದೆ ಎಂದು ಯಾರಾದರೂ ಹೇಳುತ್ತೀರಾ?)” ಎಂದು ಬರೆದಿದ್ದಾರೆ.

ಕಂಗನಾ ರಣಾವತ್‌ ಬಗ್ಗೆ ವಿಪಕ್ಷಗಳ ನಿಂದನೀಯ ಟ್ವೀಟ್‌ಗಳ ವಿರುದ್ಧ ಸಾಮಾಜಿಕ ಮಾಧ್ಯಮ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದು , ಮಹಿಳೆಯ ಮೇಲೆ ಲೈಂಗಿಕ ಅವಹೇಳನಕಾರಿ ದಾಳಿಯನ್ನು ಖಂಡಿಸಿದ್ದಾರೆ. ಜನಾಕ್ರೋಶ ನಂತರ ಆ ಪೋಸ್ಟ್ ಡಿಲೀಟ್ ಮಾಡಿದ್ದಾರೆ. ತನ್ನ ಮೆಟಾ ಖಾತೆಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ಹೇಳಿದ್ದಾರೆ.

Advertisement

ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಚ್‌ಎಸ್ ಅಹಿರ್, ನಟಿ ಕಂಗನಾ ರಣಾವತ್ ಅವರು ಮಂಡಿಯಿಂದ ಅಭ್ಯರ್ಥಿಯಾಗಿರುವುದನ್ನು ಉಲ್ಲೇಖಿಸಿ, “ಮಂಡಿ ಸೇ ರ*ಡಿ” ಎಂದು ನಿಂದಿಸಿದ್ದಾರೆ.

ತನ್ನ ಚಿತ್ರದೊಂದಿಗೆ ಅವಹೇಳನಾಕಾರಿ ಬರಹ ಪೋಸ್ಟ್ ಮಾಡಿದ ಸುಪ್ರಿಯಾ ಅವರಿಗೆ ಪ್ರತಿಕ್ರಿಯೆ ನೀಡಿದ ಕಂಗನಾ, ಡಿಯರ್ ಸುಪ್ರಿಯಾ ಜೀ ಕಲಾವಿದೆಯಾಗಿ ಕಳೆದ 20 ವರ್ಷಗಳ ನನ್ನ ವೃತ್ತಿಜೀವನದಲ್ಲಿ ನಾನು ಎಲ್ಲಾ ರೀತಿಯ ಮಹಿಳೆಯ ಪಾತ್ರವನ್ನು ನಿರ್ವಹಿಸಿದ್ದೇನೆ. ಕ್ವೀನ್​​ನಲ್ಲಿನ ಮುಗ್ದ ಹುಡುಗಿಯಿಂದ ಹಿಡಿದು ಢಾಕಡ್‌ನಲ್ಲಿ ಮೋಹಕ ಗೂಢಚಾರಿಕೆಯವರೆಗೆ, ಮಣಿಕರ್ಣಿಕಾದಲ್ಲಿ ದೇವತೆಯಿಂದ ಚಂದ್ರಮುಖಿಯಲ್ಲಿನ ಪಿಶಾಚಿ ವರೆಗೆ, ರಜ್ಜೋದಲ್ಲಿ ವೇಶ್ಯೆಯಿಂದ ತಲೈವಿಯ ಕ್ರಾಂತಿಕಾರಿ ನಾಯಕಿವರೆಗೆ.

ನಾವು ಪೂರ್ವಾಗ್ರಹಗಳ ಸಂಕೋಲೆಯಿಂದ ನಮ್ಮ ಹೆಣ್ಣುಮಕ್ಕಳನ್ನು ಮುಕ್ತಗೊಳಿಸಬೇಕು, ಅವರ ದೇಹದ ಅಂಗಗಳ ಬಗ್ಗೆ ಕುತೂಹಲ ಬಿಡಬೇಕು. ಎಲ್ಲಕ್ಕಿಂತ ಹೆಚ್ಚಾಗಿ ನಾವು ಲೈಂಗಿಕ ಕೆಲಸಗಾರರನ್ನು ಜೀವನ ಅಥವಾ ಸಂದರ್ಭಗಳಿಗೆ ಸವಾಲು ಹಾಕುವುದನ್ನು ಕೆಲವು ರೀತಿಯ ನಿಂದನೆ ಅಥವಾ ನಿಂದೆಯಾಗಿ ಬಳಸುವುದನ್ನು ತಡೆಯಬೇಕು. ಪ್ರತಿಯೊಬ್ಬ ಮಹಿಳೆಯೂ ಅವಳ ಘನತೆಗೆ ಅರ್ಹಳು ಎಂದಿದ್ದಾರೆ.

Advertisement
Tags :
Advertisement