ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ನ್ಯೂಸ್‌ ಕರ್ನಾಟಕದಿಂದ ಚಿತ್ರಕಲಾ ಸ್ಪರ್ಧೆ: ಮಕ್ಕಳ ಕಲ್ಪನೆಯಲ್ಲಿ ಅರಳಿದ "ಮೈ ಡ್ರಿಮ್‌ ಕುಡ್ಲ"

ಮಂಗಳೂರು: ನ್ಯೂಸ್‌ ಕರ್ನಾಟಕದ ವತಿಯಿಂದ ನವೆಂಬರ್‌ 19 ರಂದು ಫಿಝ್ಹಾ ಬೈ ನೆಕ್ಸಸ್ ಮಾಲ್‌ ಪಾಂಡೇಶ್ವರ ಇಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಚಿತ್ರಕಲಾ ಸ್ಪರ್ಧೆ ನಡೆಸಲಾಗಿತ್ತು. ಈ ಸ್ಪರ್ಧೆ ಎರಡು ವಿಭಾಗದ ಮಕ್ಕಳಿಗೆ ನಡೆದಿದ್ದು, 1ನೇ ತರಗತಿ ರಿಂದ 3ನೇ ತರಗತಿ ವರೆಗಿನ ಮಕ್ಕಳಿಗೆ ” ಮೈ ಫೇವರೆಟ್‌ ಕಾರ್ಟೂನ್‌ ಕಾರಕ್ಟರ್”‌ ಎಂಬ ವಿಷಯದ ಮೇಲೆ ನಡೆದರೆ, 4 ರಿಂದ 7ನೇ ತರಗತಿಯ ಮಕ್ಕಳಿಗೆ “ಮೈ ಡ್ರಿಮ್‌ ಕುಡ್ಲ” ಎಂಬ ವಿಷಯದ ಮೇಲೆ ಸ್ಪರ್ಧೆ ನಡೆದಿತ್ತು.
05:28 PM Nov 20, 2023 IST | Ashitha S

ಮಂಗಳೂರು: ನ್ಯೂಸ್‌ ಕರ್ನಾಟಕದ ವತಿಯಿಂದ ನವೆಂಬರ್‌ 19 ರಂದು ಫಿಝ್ಹಾ ಬೈ ನೆಕ್ಸಸ್ ಮಾಲ್‌ ಪಾಂಡೇಶ್ವರ ಇಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಚಿತ್ರಕಲಾ ಸ್ಪರ್ಧೆ ನಡೆಸಲಾಗಿತ್ತು. ಈ ಸ್ಪರ್ಧೆ ಎರಡು ವಿಭಾಗದ ಮಕ್ಕಳಿಗೆ ನಡೆದಿದ್ದು, 1ನೇ ತರಗತಿ ರಿಂದ 3ನೇ ತರಗತಿ ವರೆಗಿನ ಮಕ್ಕಳಿಗೆ ” ಮೈ ಫೇವರೆಟ್‌ ಕಾರ್ಟೂನ್‌ ಕಾರಕ್ಟರ್”‌ ಎಂಬ ವಿಷಯದ ಮೇಲೆ ನಡೆದರೆ, 4 ರಿಂದ 7ನೇ ತರಗತಿಯ ಮಕ್ಕಳಿಗೆ “ಮೈ ಡ್ರಿಮ್‌ ಕುಡ್ಲ” ಎಂಬ ವಿಷಯದ ಮೇಲೆ ಸ್ಪರ್ಧೆ ನಡೆದಿತ್ತು.

Advertisement

1ನೇ ತರಗತಿ ರಿಂದ 3ನೇ ತರಗತಿ ವರೆಗಿನ ಮಕ್ಕಳಿಗೆ ʼಮೈ ಫೇವರೆಟ್‌ ಕಾರ್ಟೂನ್‌ ಕಾರಕ್ಟರ್”‌ ಎಂಬ ವಿಷಯದಲ್ಲಿ ನಡೆದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಮೋಕ್ಷಿತ ಎ.ಬಿ, ದ್ವಿತಿಯ ಬಹುಮಾನವನ್ನು ತನೀಕ್ಷಾ ಪಿ ಕೋಟ್ಯಾನ್‌ ಹಾಗು ಮೂರನೇ ಬಹುಮಾನವನ್ನು ತತ್ಪರ್‌ ಶೆಟ್ಟಿ ಬಾಚಿಕೊಂಡಿದ್ದಾರೆ.

Advertisement

ಇನ್ನು ಈ ಸ್ಪರ್ಧೆಯ ತೀರ್ಪುಗಾರರಾಗಿ ಚಿತ್ರಕಲಾ ಶಿಕ್ಷಕ ಹಾಗು ಕಾರ್ಟೂನಿಸ್ಟ್‌ ಆಗಿರುವ ಜೋನ್‌ ಚಂದ್ರನ್‌ ಇವರು ಸಹಕರಿಸಿದರು.

ಅದರಂತೆ, 4 ರಿಂದ 7ನೇ ತರಗತಿಯ ಮಕ್ಕಳಿಗೆ “ಮೈ ಡ್ರಿಮ್‌ ಕುಡ್ಲ” ಎಂಬ ವಿಷಯದ ಮೇಲೆ ನಡೆದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ವೈ ಹಂಸಿಕ ಪಡೆದುಕೊಂಡರೆ, ದ್ವಿತೀಯ ಬಹುಮಾನವನ್ನು ಮನ್ವಿತ್‌ ಕೆ ಎಲ್ ಹಾಗು ಮೂರನೇ ಬಹುಮಾನವನ್ನು ಆರಾಧ್ಯ ಪಡೆದುಕೊಂಡರು.

ಇನ್ನು ಈ ಕಾರ್ಯಕ್ರಮದಲ್ಲಿ ಕುಂಚ ಹಿಡಿದು ಚಿತ್ತಾರ ಬಿಡಿಸಲು ಸಜ್ಜಾಗಿದ್ದ 200ಕ್ಕೂ ಅಧಿಕ ಮಕ್ಕಳು ತಮ್ಮ ನೆಚ್ಚಿನ ಕಾರ್ಟೂನ್‌ ಗಳಿಗೆ ತಮ್ಮದೇ ಆದ ರೀತಿಯಲ್ಲಿ ಬಣ್ಣಗಳನ್ನು ತುಂಬಿದರು. ಇನ್ನು ತಮ್ಮದೇ ಕಲ್ಪನೆಯಲ್ಲಿ ʼಮೈ ಡ್ರಿಮ್‌ ಕುಡ್ಲʼ ಎಂಬ ಥೀಮ್ ಗೆ ಬಣ್ಣ ಬಳಿದದ್ದು ಕಲಾಭಿಮಾನಿಗಳ ಗಮನ ಸೆಳೆಯಿತು.

"ಮೈ ಡ್ರಿಮ್‌ ಕುಡ್ಲ" ನಾನಾ ಪರಿಕಲ್ಪನೆಗಳು ಹೊರಹೊಮ್ಮಿದವು. ಮಕ್ಕಳ ಚಿತ್ತಾರ ನೋಡಲು ಸಾಕಷ್ಟು ಜನ ಜಮಾಯಿಸಿ ಕುತೂಹಲ ತಣಿಸಿಕೊಂಡರು. ಚಿತ್ರಕಲಾ ಸ್ಪರ್ಧೆಯಲ್ಲಿ ಅಧಿಕ ಮಕ್ಕಳು ಆಸಕ್ತಿಯಿಂದ ಭಾಗವಹಿಸಿ ಕಾರ್ಯಕ್ರಮದ ಯಶಸ್ವಿಗೆ ಕಾರಣರಾದರು.

ವಿಜೇತ ಮಕ್ಕಳಿಗೆ ಬಹುಮಾನವನ್ನು ಫಿಝ್ಹಾ ಬೈ ನೆಕ್ಸಸ್ ಮಾಲ್‌ನ ಸೆಂಟರ್ ಡೈರಕ್ಟರ್‌‌ ಅರವಿಂದ್‌ ಶ್ರೀವಾಸ್ತವ್‌ ಮಂಗಳೂರು, ನ್ಯೂಸ್‌ ಕರ್ನಾಟಕ‌ದ ಡೈರಕ್ಟರ್ ಬ್ರೆಯಾನ್‌ ಫರ್ನಾಂಡಿಸ್ ,

ಮ್ಯಾನೇಜರ್ ಹ್ಯಾಂಗ್ಯೋ ಐಸ್ ಕ್ರೀಮ್ಸ್ ನ ರಾಕೇಶ್‌ ಕಾಮತ್‌ ಹಾಗು ಇಂಡಿಯಾ ಫಿನೆಸ್ ಕಿರೀಟ ವಿಜೇತರಾದ ಪ್ರತಿಭಾ ಸಾಲ್ಯಾನ್‌ ವಿತರಿಸಿದರು.

ಇನ್ನು ಈ ಕಾರ್ಯಕ್ರಮದಲ್ಲಿ ಪ್ರೆಸಿಡೆಂಟ್‌ ರೋಟರಿ ಕ್ಲಬ್‌ ಆಫ್‌ ಮಂಗಳೂರು ಮೆಟ್ರೊ ಇದರ ರಜನಿ ಶೆಟ್ಟಿ , ಅಯೈಶಾ ಟೀಟೈಮ್‌ & ಅಯೈಶಾ ಮೇಕ್‌ ಒವರ್‌ ಅಕಾಡೆಮಿ ಇದರ ಮಾಲೀಕರಾದ ಆಯೈಶಾ, ಪಾಥ್ವ್ವೆ ಎಂಟರ್‌ ಪ್ರೈಸಸ್‌ ಮಂಗಳೂರು ಇದರ ಮಾಲೀಕರಾದ ದೀಪಕ್‌ ಗಂಗೂಲಿ ಉಪಸ್ಥಿತರಿದ್ದರು.


ಕಾರ್ಯಕ್ರಮದ ಕೊನೆಯಲ್ಲಿ ಅತಿಥಿಗಳಿಗೆ ಸ್ಮರಣಿಕೆ ನೀಡಿ ಧನ್ಯವಾದ ಸಮರ್ಪಿಸಲಾಯಿತು.

Advertisement
Tags :
indiaKARNATAKALatestNewsNewsKannadaಚಿತ್ರಕಲಾ ಸ್ಪರ್ಧೆಮಂಗಳೂರು
Advertisement
Next Article