ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಪಾಕಿಸ್ತಾನದಲ್ಲಿ ಚುನಾವಣೆ: ಯಾರಾಗ್ತಾರೆ ಪ್ರಧಾನಿ?

ನಿರಂತರ ಭಯೋತ್ಪಾದಕರ ದಾಳಿಗಳು, ಆರ್ಥಿಕ ದಿವಾಳಿತನದ ಮಧ್ಯೆ ಪಾಕಿಸ್ತಾನದ ಈ ಬಾರಿಯ ಚುನಾವಣೆ ಮಹತ್ವ ಪಡೆದುಕೊಂಡಿದೆ. ಇಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆವರೆಗೂ ಪಾಕಿಸ್ತಾನದ 266 ಕ್ಷೇತ್ರದಲ್ಲಿ ಮತದಾನ ನಡೆಯುತ್ತಿದೆ.
08:52 AM Feb 08, 2024 IST | Ashika S

ಇಸ್ಲಾಮಾಬಾದ್‌: ನಿರಂತರ ಭಯೋತ್ಪಾದಕರ ದಾಳಿಗಳು, ಆರ್ಥಿಕ ದಿವಾಳಿತನದ ಮಧ್ಯೆ ಪಾಕಿಸ್ತಾನದ ಈ ಬಾರಿಯ ಚುನಾವಣೆ ಮಹತ್ವ ಪಡೆದುಕೊಂಡಿದೆ. ಇಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆವರೆಗೂ ಪಾಕಿಸ್ತಾನದ 266 ಕ್ಷೇತ್ರದಲ್ಲಿ ಮತದಾನ ನಡೆಯುತ್ತಿದೆ.

Advertisement

ಇಂದು 12 ಕೋಟಿ 80 ಲಕ್ಷ ಮತದಾರರು 5128 ಅಭ್ಯರ್ಥಿಗಳ ಭವಿಷ್ಯವನ್ನ ನಿರ್ಧರಿಸುತ್ತಿದ್ದಾರೆ. ಪಾಕಿಸ್ತಾನದಲ್ಲಿ EVM ಮತದಾನ ನಡೆಯುತ್ತಿಲ್ಲ. ಬ್ಯಾಲೆಟ್ ಮತದಾನದಲ್ಲಿ ನಾಗರಿಕರು ತಮ್ಮ ಚಲಾಯಿಸುತ್ತಿದ್ದಾರೆ.

ಮಾಜಿ ಪ್ರಧಾನಿ ನವಾಜ್ ಷರೀಫ್, ಜೈಲಿನಲ್ಲಿರುವ ಮತ್ತೊಬ್ಬ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಬೆನ್‌ಜೀರ್‌ ಭುಟ್ಟೋ ಅವರ ಮಗ ಬಿಲಾವಲ್ ಭುಟ್ಟೋ ಅವರ ಅದೃಷ್ಟ ಪರೀಕ್ಷೆ ಇಂದು ನಡೆಯಲಿದೆ.

Advertisement

ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಗೆ ಒಟ್ಟು 336 ಸದಸ್ಯರ ಆಯ್ಕೆ ನಡೆಯಲಿದೆ. ಅದರಲ್ಲಿ 266 ಕ್ಷೇತ್ರಕ್ಕೆ ಇಂದು ಮತದಾನ ನಡೆಯುತ್ತಿದ್ರೆ 70 ಸ್ಥಾನಗಳು ಮೀಸಲು ಸ್ಥಾನಗಳಾಗಿವೆ. 70ರಲ್ಲಿ 60 ಸ್ಥಾನಗಳು ಮಹಿಳೆಯರಿಗೂ ಹಾಗೂ 10 ಸ್ಥಾನ ಮುಸ್ಲಿಮೇತರರಿಗೆ ಮೀಸಲಿದೆ. 336 ಅಸೆಂಬ್ಲಿ ಸ್ಥಾನಗಳಲ್ಲಿ ಸರ್ಕಾರ ರಚಿಸಲು 169 ಸದಸ್ಯರ ಬೆಂಬಲದ ಅಗತ್ಯವಿದೆ. ಇಂದು ತಡರಾತ್ರಿಯ ಹೊತ್ತಿಗೆ ಅನಧಿಕೃತವಾದ ಫಲಿತಾಂಶ ಹೊರ ಬೀಳಲಿದ್ದು, ಫೆಬ್ರವರಿ 22ರಂದು ಅಧಿಕೃತ ಚುನಾವಣಾ ಫಲಿತಾಂಶ ಹೊರಬೀಳುತ್ತಿದೆ.

ಮೂರು ಬಾರಿ ಪ್ರಧಾನಿಯಾಗಿರುವ ನವಾಜ್ ಷರೀಫ್ ಅವರಿಗೆ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಅವರ ಪುತ್ರ ಬಿಲಾವಲ್ ಭುಟ್ಟೋ ಜರ್ದಾರಿ ಕೂಡ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಬಿಲಾವಲ್ ಭುಟ್ಟೋ ಅವರ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಎರಡನೇ ಸ್ಥಾನ ಪಡೆದುಕೊಳ್ಳುವ ಸಾಧ್ಯತೆ ಇದೆ. ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಜೈಲಿನಲ್ಲಿ ಇದ್ದರೂ ಇವರ ಬೆಂಬಲಿಗರ ಪಡೆ ಸ್ವತಂತ್ರ್ಯವಾಗಿ ಚುನಾವಣೆಯಲ್ಲಿ ಸ್ಪರ್ಧೆ ನಡೆಸಿದೆ. ನವಾಜ್ ಷರೀಫ್ ಅವರಿಗೆ ಬಿಲಾವಲ್ ಭುಟ್ಟೋ ಹಾಗೂ ಇಮ್ರಾನ್ ಖಾನ್ ಬೆಂಬಲಿಗರು ಟಕ್ಕರ್ ಕೊಡ್ತಾರಾ ಅನ್ನೋದು ಕುತೂಹಲ ಕೆರಳಿಸಿದೆ.

Advertisement
Tags :
LatetsNewsNewsKannadaಆರ್ಥಿಕ ದಿವಾಳಿಚುನಾವಣೆಪಾಕಿಸ್ತಾನಭಯೋತ್ಪಾದಕಮತದಾನ
Advertisement
Next Article