ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಸಿಲಿಕಾನ್​ ಸಿಟಿಯಲ್ಲಿ ದಂಪತಿ ಮಾಡಿದ ಕೆಲಸಕ್ಕೆ ಭಾರೀ ಆಕ್ರೋಶ !

ಬೈಕ್​ನ ಹಿಂಭಾಗದಲ್ಲಿ ದಂಪತಿ ತಮ್ಮ ಮಗುವನ್ನು ನಿಲ್ಲಿಸಿಕೊಂಡು ವೇಗವಾಗಿ ಹೋಗುತ್ತಿರುವ ವಿಡಿಯೋ ಸೋಶಿಯಲ್​ ಮೋಡಿಯಾದಲ್ಲಿ ವೈರಲ್ ಆಗುತ್ತಿದ್ದು ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
05:01 PM Apr 16, 2024 IST | Ashitha S

ಬೆಂಗಳೂರು: ಬೈಕ್​ನ ಹಿಂಭಾಗದಲ್ಲಿ ದಂಪತಿ ತಮ್ಮ ಮಗುವನ್ನು ನಿಲ್ಲಿಸಿಕೊಂಡು ವೇಗವಾಗಿ ಹೋಗುತ್ತಿರುವ ವಿಡಿಯೋ ಸೋಶಿಯಲ್​ ಮೋಡಿಯಾದಲ್ಲಿ ವೈರಲ್ ಆಗುತ್ತಿದ್ದು ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

Advertisement

ನಗರದ ವೈಟ್​ಫೀಲ್ಡ್​ನ ಮುಖ್ಯರಸ್ತೆಯಲ್ಲಿ ದಂಪತಿ KA- 05, HW- 8193 ಬೈಕ್​ನಲ್ಲಿ ತೆರಳುತ್ತಿರುತ್ತಾರೆ. ಆದರೆ ತಮ್ಮ ಮಗುವನ್ನು ಬೈಕ್​ನ ಹಿಂಭಾಗದಲ್ಲಿ ಕಾಲಿಡಲು ಇರುವ ಫೂಟ್​ ರೆಸ್ಟ್​ ಮೇಲೆ ನಿಲ್ಲಿಸಿ ತಾಯಿ ಹಿಂದೆಯಿಂದ ಕೈ ಹಾಕಿ ಹಿಡಿದುಕೊಂಡಿದ್ದಾರೆ. ಸ್ವಲ್ಪ ಯಾಮಾರಿ ಮಗು ಏನಾದರೂ ರಸ್ತೆ ಬಿದ್ದಿತು ಎಂದರೆ ಜೀವಕ್ಕ ಅಪಾಯ ಪಕ್ಕ.

ತಿರುವಿನಲ್ಲೇ ಅದೇ ವೇಗದಲ್ಲಿ ಬೈಕ್ ಓಡಿಸಿದ್ದಾರೆ.​ ಈ ರೀತಿಯಲ್ಲಿ ದಂಪತಿ ತಮ್ಮ ಮಗುವನ್ನ ಬೈಕ್​ನಲ್ಲಿ ಕರೆದುಕೊಂಡು ಹೋಗುತ್ತಿರುವುದು ನೋಡುಗರಿಗೂ ಶಾಕ್‌ ಕೊಟ್ಟಿದೆ.

Advertisement

ದಂಪತಿ, ಮಗು ಬೈಕ್​ನಲ್ಲಿ ಹೋಗುತ್ತಿರುವ ದೃಶ್ಯವನ್ನ ಹಿಂಬದಿ ಬರುತ್ತಿದ್ದ ವಾಹನದಲ್ಲಿದ್ದವರು ಸೆರೆ ಹಿಡಿದಿದ್ದಾರೆ. ಸದ್ಯ ಬೈಕ್​ ನಂಬರ್ ಬರೆದು, ವಿಡಿಯೋವನ್ನು ಪೋಸ್ಟ್ ಅನ್ನು ಎಕ್ಸ್​ನಲ್ಲಿ ಶೇರ್ ಮಾಡಲಾಗಿದೆ.

Advertisement
Tags :
crimeindiaLatestNewsNewsKarnatakaPOLICEಬೆಂಗಳೂರು
Advertisement
Next Article