ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಖಾಲಿ ಹಾಳೆಯ ಮೇಲೆ ಸಹಿ ಮಾಡಲು ಒತ್ತಾಯ; ಸಂಸತ್ ದಾಳಿಯ ಆರೋಪಿಗಳಿಂದ ಆರೋಪ

ಲೋಕಸಭೆಯಲ್ಲಿ ಸಂಭವಿಸಿದ ಭದ್ರತಾ ಲೋಪದಲ್ಲಿ ವಿರೋಧ ಪಕ್ಷಗಳೊಂದಿಗೆ ಸೇರಿರುವುದಾಗಿ ಒಪ್ಪೊಕೊಂಡು ಖಾಲಿ ಹಾಳೆಯ ಮೇಲೆ ಸಹಿ ಮಾಡುವಂತೆ ದೆಹಲಿ ಪೋಲೀಸರು ಒತ್ತಾಯಿಸಿದ್ದಾರೆಂದು ಬಂಧನಕ್ಕೊಳಗಾದ ಆರು ಜನರಲ್ಲಿ ಐವರು ಆರೋಪಿಸಿದ್ದಾರೆ.
07:54 PM Jan 31, 2024 IST | Maithri S

ನವದೆಹಲಿ: ಲೋಕಸಭೆಯಲ್ಲಿ ಸಂಭವಿಸಿದ ಭದ್ರತಾ ಲೋಪದಲ್ಲಿ ವಿರೋಧ ಪಕ್ಷಗಳೊಂದಿಗೆ ಸೇರಿರುವುದಾಗಿ ಒಪ್ಪೊಕೊಂಡು ಖಾಲಿ ಹಾಳೆಯ ಮೇಲೆ ಸಹಿ ಮಾಡುವಂತೆ ದೆಹಲಿ ಪೋಲೀಸರು ಒತ್ತಾಯಿಸಿದ್ದಾರೆಂದು ಬಂಧನಕ್ಕೊಳಗಾದ ಆರು ಜನರಲ್ಲಿ ಐವರು ಆರೋಪಿಸಿದ್ದಾರೆ.

Advertisement

ಡಿ.೧೩ರ ಕಲಾಪದ ವೇಳೆ ವೀಕ್ಷಕರ ಗ್ಯಾಲರಿಯಿಂದ ಜಿಗಿದು ಸ್ಮೋಕ್ ಗ್ಯಾಸ್ ಬಳಸಿ ಧಾಂದಲೆ ಎಬ್ಬಿಸಿದ್ದ ಆರೋಪಿಗಳು ಹೆಚ್ಚುವರಿ ಸೆಷನ್ ಕೋರ್ಟ್ ನ ನ್ಯಾಯಾಧೀಶ ಹರ್ದೀಪ್ ಕೌರ್ ಎದುರು ಈ ಹೇಳಿಕೆ ನೀಡಿದ್ದಾರೆ.

ʼ೭೦ ಪುಟಗಳ ಖಾಲಿ ಹಾಳೆಯ ಮೇಲೆ ಸಹಿ ಮಾಡುವಂತೆ ಒತ್ತಡ ಹೇರಲಾಯಿತು. ವಿಚಾರಣೆಯ ವೇಳೆ ವಿದ್ಯುತ್ ಶಾಕ್ ನಂತಹ ಹಿಂಸೆ ನೀಡಿದ್ದಾರೆʼ ಎಂದು ಆರೋಪಿಗಳಾದ ಡಿ.ಮನೋರಂಜನ್, ಸಾಗರ್ ಶರ್ಮಾ, ಲಲಿತ್ ಜಾ, ಅಮೋಲ್ ಶಿಂದೆ ಮತ್ತು ಮಹೇಶ್ ಕುಮಾವತ್ ಹೇಳಿದ್ದಾರೆ.

Advertisement

ರಾಷ್ಟ್ರೀಯ ಪಕ್ಷಗಳು ಹಾಗು ಅವುಗಳ ಮುಖಂಡರೊಡನೆ ಒಡನಾಟ ಹೊಂದಿರುವುದಾಗಿ ಬರೆದುಕೊಡುವಂತೆ ಇಬ್ಬರು ಆರೋಪಿಗಳ ಮೇಲೆ ಒತ್ತಡ ಹೇರಲಾಗಿದೆ ಎಂದು ನ್ಯಾಯಾಲಕ್ಕೆ ಸಲ್ಲಿಸಲಾದ ಜಂಟಿ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ವಿಚಾರಣೆಯ ವೇಳೆ ಮೊಬೈಲ್, ಸಿಮ್, ಬೆರಳಚ್ಚು, ಸಾಮಾಜಿಕ ಜಾಲತಾಣಗಳ ಹಾಗು ಇಮೇಲ್‌ ಪಾಸ್‌ವರ್ಡ್ ಇತ್ಯಾದಿಗಳನ್ನು ಬಲವಂತದಿಂದ ಪಡೆಯಲಾಗಿದೆ ಎಂದು ಆರೋಪಿಸಲಾಗಿದೆ.

Advertisement
Tags :
DELHI POLICEindiaLatestNewsNewsKannadaParliment attack
Advertisement
Next Article