For the best experience, open
https://m.newskannada.com
on your mobile browser.
Advertisement

'ಹರಿ ಹರ ವೀರ ಮಲ್ಲು' ಚಿತ್ರದ ಟೀಸರ್‌ ನಲ್ಲಿ ಅಬ್ಬರಿಸಿದ ಪವನ್ ಕಲ್ಯಾಣ್

ಪವನ್ ಕಲ್ಯಾಣ್ ನಟನೆಯ 'ಹರಿ ಹರ ವೀರ ಮಲ್ಲು ಭಾಗ 1ʼಚಿತ್ರದ ಟೀಸರ್‌ ಬಿಡುಗಡೆಯಾಗಿದ್ದು, ಟೀಸರ್‌ನಲ್ಲಿ ಪವನ್ ಕಲ್ಯಾಣ್ ಅಬ್ಬರಿಸಿದ್ದಾರೆ.
03:44 PM May 02, 2024 IST | Ashika S
 ಹರಿ ಹರ ವೀರ ಮಲ್ಲು  ಚಿತ್ರದ ಟೀಸರ್‌ ನಲ್ಲಿ ಅಬ್ಬರಿಸಿದ  ಪವನ್ ಕಲ್ಯಾಣ್

ಬೆಂಗಳೂರು: ಪವನ್ ಕಲ್ಯಾಣ್ ನಟನೆಯ 'ಹರಿ ಹರ ವೀರ ಮಲ್ಲು ಭಾಗ 1ʼಚಿತ್ರದ ಟೀಸರ್‌ ಬಿಡುಗಡೆಯಾಗಿದ್ದು, ಟೀಸರ್‌ನಲ್ಲಿ ಪವನ್ ಕಲ್ಯಾಣ್ ಅಬ್ಬರಿಸಿದ್ದಾರೆ.

Advertisement

ಟೀಸರ್‌ನಲ್ಲಿ ಮಗಳು ತಂದೆಯ ಮೇಲೆ ಆಗುತ್ತಿರುವ ದಬ್ಬಾಳಿಕೆ ಬಗ್ಗೆ ಪ್ರಶ್ನೆ ಇಡುತ್ತಾಳೆ. ಆಗ ತಂದೆ ʻʻಪ್ರತಿಯೊಬ್ಬನನ್ನು ಅವನ ಮೇಲಿರೋನು ದೋಚಿಕೊಳ್ಳುತ್ತಾನೆ. ನಮ್ಮನ್ನು ದೊರೆ ದೋಚಿಕೊಳ್ಳುತ್ತಾನೆ. ದೊರೆಯನ್ನು ಗೋಲ್ಕುಂಡ ನವಾಬ್‌ ದೋಚಿಕೊಳ್ಳುತ್ತಾನೆ. ಅವನಲ್ಲಿ ಇರುವುದನ್ನು ಮೋಘಲ್‌ ಚಕ್ರವರ್ತಿ ದೋಚಿಕೊಳ್ಳುತ್ತಾನೆ. ನಮ್ಮ ಮೇಲೆ ಇರುವ ಈ ಕಳ್ಳರನ್ನು ದೋಚಿಕೊಳ್ಳೋದಕ್ಕೆ ಭಗವಂತ ಖಂಡಿತ ಒಬ್ಬನನ್ನು ಕಳಿಸಿಕೊಡುತ್ತಾನೆʼʼ ಎಂದಾಗ ಪವನ್ ಕಲ್ಯಾಣ್ ಕತ್ತಿ ಹಿಡಿದು ಸ್ಟೈಲಿಶ್ ಆಗಿ ಎಂಟ್ರಿ ಕೊಟ್ಟಿದ್ದಾರೆ.

ನಟ ಕೆಂಪು ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಈ ಟೀಸರ್‌ ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿಯಲ್ಲೂ ಬಿಡುಗಡೆಯಾಗಿದೆ. ‘ಧರ್ಮಕ್ಕಾಗಿ ಯುದ್ಧ’ ಎನ್ನುವ ಕ್ಯಾಪ್ಶನ್ ಗಮನ ಸೆಳೆದಿದೆ.  ಹಾಗೇ ಮೋಘಲ್‌ ಚಕ್ರವರ್ತಿ ಆಗಿ ಬಾಬಿ ಡಿಯೋಲ್‌ ಕಂಡಿದ್ದಾರೆ.

Advertisement

ಮೆಗಾ ಸೂರ್ಯ ಫಿಲ್ಮ್ ಅಡಿಯಲ್ಲಿ ಎ ದಯಾಕರ್ ರಾವ್ ಚಿತ್ರವನ್ನು ನಿರ್ಮಿಸುತ್ತಿದ್ದರೆ, ಎಎಮ್ ರತ್ನಂ ಅವರು ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದಾರೆ. ಆಸ್ಕರ್ ವಿಜೇತ ಎಂಎಂ ಕೀರವಾಣಿ ಅವರ ಹಾಡುಗಳು ಮತ್ತು ಸಂಗೀತ ಸಂಯೋಜನೆ ಚಿತ್ರಕ್ಕಿದೆ. ನಿಧಿ ಅಗರ್ವಾಲ್, ಎಂ. ನಾಸರ್, ಸುನಿಲ್, ರಘುಬಾಬು, ಸುಬ್ಬರಾಜು, ಮತ್ತು ನೋರಾ ಫತೇಹಿ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಜನ ಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್  ರಾಜಕೀಯದತ್ತ ಗಮನಹರಿಸುತ್ತಿರುವುದರಿಂದ ಈ ವರ್ಷ ನಡೆಯಲಿರುವ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಪೀಠಂಪುರಂ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.

Advertisement
Tags :
Advertisement