ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಉಚಿತ ಭಾಗ್ಯಗಳನ್ನು ಪ್ರಶ್ನಿಸಿ ಹೈಕೋರ್ಟ್‌ ಗೆ ಪಿಐಎಲ್‌

ಕರ್ನಾಟಕ ಮತ್ತು ತೆಲಂಗಾಣದಲ್ಲಿ ಕಾಂಗ್ರೆಸ್‌ ಉಚಿತ ಕೊಡುಗೆಗಳ ಮೂಲಕವೇ ಅಧಿಕಾರ ಹಿಡಿದಿರುವುದು ಸತ್ಯ. ಇದೀಗ ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಉಚಿತ ಭಾಗ್ಯಗಳನ್ನು ಘೋಷಿಸುವುದನ್ನು ವೋಟಿಗಾಗಿ ನೋಟು ಎಂದು ಆರೋಪಿಸಿ ನಾಲ್ವರು ನಿವೃತ್ತ ಯೋಧರು ಹೈಕೋರ್ಟ್ ಗೆ ಪಿಐಎಲ್ ದಾಖಲಿಸಿದ್ದಾರೆ.
07:07 AM Dec 08, 2023 IST | Ashika S

ಬೆಂಗಳೂರು: ಕರ್ನಾಟಕ ಮತ್ತು ತೆಲಂಗಾಣದಲ್ಲಿ ಕಾಂಗ್ರೆಸ್‌ ಉಚಿತ ಕೊಡುಗೆಗಳ ಮೂಲಕವೇ ಅಧಿಕಾರ ಹಿಡಿದಿರುವುದು ಸತ್ಯ. ಇದೀಗ ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಉಚಿತ ಭಾಗ್ಯಗಳನ್ನು ಘೋಷಿಸುವುದನ್ನು ವೋಟಿಗಾಗಿ ನೋಟು ಎಂದು ಆರೋಪಿಸಿ ನಾಲ್ವರು ನಿವೃತ್ತ ಯೋಧರು ಹೈಕೋರ್ಟ್ ಗೆ ಪಿಐಎಲ್ ದಾಖಲಿಸಿದ್ದಾರೆ.

Advertisement

ಬ್ರಿಗೇಡಿಯರ್ ರವಿ ಮುನಿಸ್ವಾಮಿ, ನಯಿಬ್ ಸುಬೇದಾರ್ ರಮೇಶ್ ಜಗಥಾಪ್, ನಾಯ್ಕ್ ಮಣೀಕಂಠ ಎ ಹಾಗೂ ಹವಾಲ್ದಾರ್ ಬಸಪ್ಪ ಪಟ್ಟಣಶೆಟ್ಟಿ ಪಿಐಎಲ್ ಸಲ್ಲಿಸಿದ್ದು, ವಿಚಾರಣೆಗೆ ಬರಬೇಕಿದೆ.

'ಚುನಾವಣೆ ಸಂದರ್ಭದಲ್ಲಿ ಮತ್ತು ಚುನಾವಣೆಯ ನಂತರ ಉಚಿತ ಕೊಡುಗೆಗಳನ್ನು ನೀಡುವ ಮೂಲಕ, ರಾಜಕೀಯ ಪಕ್ಷಗಳು ಅಧಿಕಾರ ಪಡೆಯಲು ಟ್ರೆಂಡ್‌ಗಳನ್ನು ಸೃಷ್ಟಿಸುತ್ತಿವೆ ಮತ್ತು ಚುನಾವಣೆಯ ನಂತರ ಸರ್ಕಾರದ ಅಧಿಕಾರವನ್ನು ಹಿಡಿದಾಗ ಉಚಿತ/ಸಮಾದಾನ/ಉಡುಗೊರೆಗಳನ್ನು ನೀಡುವುದಾಗಿ ಭರವಸೆ ನೀಡುತ್ತಿವೆ. (ಇದು) ಪ್ರಜಾಪ್ರತಿನಿಧಿ ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ ವೋಟಿಗಾಗಿ ನೋಟು ಅಲ್ಲದೇ ಬೇರೇನೂ ಅಲ್ಲ ಎಂದು ಪಿಐಎಲ್ ಆರೋಪಿಸಿದೆ.

Advertisement

ರಾಜಕೀಯ ಪಕ್ಷಗಳು ಈ ಉಚಿತ ಕೊಡುಗೆಗಳನ್ನು ನೀಡುವ ಘೋಷಣೆಯು ಕಾನೂನಿನ ನಿಬಂಧನೆಗಳಿಗೆ ಮತ್ತು ಭಾರತದ ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಪಿಐಎಲ್ ಹೇಳಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಗೃಹ ಲಕ್ಷ್ಮಿ, ಗೃಹ ಜ್ಯೋತಿ ಮತ್ತು ಶಕ್ತಿ ಯೋಜನೆಯಂತಹ ಉಚಿತ ಭರವಸೆಗಳನ್ನು ನೀಡುವ ಮೂಲಕ ರಾಜ್ಯದಲ್ಲಿ ಅಧಿಕಾರ ಗಳಿಸಿದೆ ಎಂದು ಪಿಐಎಲ್ ಹೇಳಿದೆ.

Advertisement
Tags :
LatestNewsNewsKannadaಉಚಿತ ಭಾಗ್ಯಕರ್ನಾಟಕಕಾಂಗ್ರೆಸ್ಚುನಾವಣೆತೆಲಂಗಾಣಪಿಐಎಲ್ಯೋಧರಾಜಕೀಯ
Advertisement
Next Article